MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • Science
  • ಸೂರ್ಯನ ಬೆಳಕು ಹಠಾತ್ ನಿಂತು ಹೋದರೆ 8 ನಿಮಿಷಗಳ ನಂತರ ಭೂಮಿಗೆ ಏನಾಗಲಿದೆ? ಭೌತಶಾಸ್ತ್ರದ ನಿಯಮ ಏನು ಹೇಳುತ್ತದೆ?

ಸೂರ್ಯನ ಬೆಳಕು ಹಠಾತ್ ನಿಂತು ಹೋದರೆ 8 ನಿಮಿಷಗಳ ನಂತರ ಭೂಮಿಗೆ ಏನಾಗಲಿದೆ? ಭೌತಶಾಸ್ತ್ರದ ನಿಯಮ ಏನು ಹೇಳುತ್ತದೆ?

What if the sun suddenly disappeared here what would happen to Earth ಭೂಮಿಯ ಮೇಲೆ ಜೀವರಾಶಿಗಳು ಬದುಕಲು ಸೂರ್ಯನ ಬೆಳಕು ಬೇಕೇಬೇಕು. ಸೂರ್ಯನಿಲ್ಲದೆ ಒಂದು ಕ್ಷಣವೂ ಉಳಿಯಲಾರವು. ಒಂದು ವೇಳೆ ಸೂರ್ಯನ ಬೆಳಕು ಹಠಾತ್ ನಿಂತು ಹೋದರೆ ಭೂಮಿಗೆ ಏನಾಗಲಿದೆ? ಕಾಲಮಿತಿ ಬೌತಶಾಸ್ತ್ರದ ನಿಯಮ ಹೇಳೋದೇನು?

2 Min read
Author : Ravi Janekal
Published : Sep 26 2026, 11:29 AM IST
Share this Photo Gallery
  • FB
  • TW
  • Linkdin
  • Whatsapp
14
ಸೂರ್ಯನ ಬೆಳಕು ನಿಂತು ಹೋದರೆ ಭೂಮಿಗೆ ಏನಾಗುತ್ತದೆ?
Image Credit : AI

ಸೂರ್ಯನ ಬೆಳಕು ನಿಂತು ಹೋದರೆ ಭೂಮಿಗೆ ಏನಾಗುತ್ತದೆ?

ಭೂಮಿಯ ಮೇಲೆ ಜೀವರಾಶಿಗಳು ಬದುಕಲು ಸೂರ್ಯನ ಬೆಳಕು ಬೇಕೇಬೇಕು. ಸೂರ್ಯನಿಲ್ಲದೆ ಒಂದು ಕ್ಷಣವೂ ಉಳಿಯಲಾರವು. ನಾವು ಬೆಳಗ್ಗೆ ಎದ್ದೇಳುವುದರಿಂದ ಹಿಡಿದು, ಭೂಮಿ ಮೇಲಿನ ಸಕಲ ಜೀವರಾಶಿಗಳು ಸಸ್ಯಗಳು ಉತ್ಪಾದನೆ ಸೂರ್ಯನೇ ಮುಖ್ಯ ಆಧಾರ. ಅಂದರೆ ನಾವೀಗ ಜೀವಂತ ಇದ್ದೇವೆ ಎಂದರೆ ಅನ್ನ ನೀರಿನಿಂದ ಅಲ್ಲ, ಸೂರ್ಯನಿಂದ. ಸೂರ್ಯನಿಲ್ಲದಿದ್ರೆ ನೀರು ಇಲ್ಲ, ಬೆಳೆಯೂ ಇಲ್ಲ ಆಹಾರವೂ ಇಲ್ಲ..!

ಹೀಗೆ ಒಮ್ಮೆ ಯೋಚಿಸಿ ನೋಡಿ, ಒಂದು ವೇಳೆ ಭೂಮಿಗೆ ಸೂರ್ಯನ ಬೆಳಕು ಸಂಪೂರ್ಣ ನಿಂತು ಹೋದರೆ ಭೂಮಿಗೆ ಏನಾಗಬಹುದು? ಜಗತ್ತು ತಕ್ಷಣವೇ ಕೊನೆಗೊಳ್ಳುತ್ತದೆಯೇ ಅಥವಾ ಮಾನವರು ಅದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆಯೋ? ವಿಜ್ಞಾನ ಏನು ಹೇಳುತ್ತದೆ? ಸೂರ್ಯನಿಲ್ಲದಿದ್ರೆ ಏನೇನು ಪರಿಣಾಮಗಳನ್ನ ಎದುರಿಸಬೇಕು? ಇದು ಕೇವಲ ಕಾಲ್ಪನಿಕ ಪ್ರಶ್ನೆಯಲ್ಲ ಬದಲಿಗೆ ನಿಖರವಾದ ಪರಿಣಾಮಗಳು ಮತ್ತು ಕಾಲಮಿತಿಯನ್ನ ಭೌತಶಾಸ್ತ್ರದ ನಿಯಮಗಳಿಂದ ನಿರ್ಧರಿಸಲಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಸೂರ್ಯನಿಲ್ಲದ ಮೊದಲ 8 ನಿಮಿಷಗಳು ಎಲ್ಲವೂ ಸಾಮಾನ್ಯ ನಂತರ...!
Image Credit : AI

ಸೂರ್ಯನಿಲ್ಲದ ಮೊದಲ 8 ನಿಮಿಷಗಳು ಎಲ್ಲವೂ ಸಾಮಾನ್ಯ ನಂತರ...!

ಈ ಕ್ಷಣ ಭೂಮಿ ಸೂರ್ಯನಿಂದ ಬೆಳಕು ಬರುವುದು ನಿಂತುಹೋದರೆ ಭೂಮಿಗೆ ತಕ್ಷಣ ಕತ್ತಲಾವರಿಸುವುದಿಲ್ಲ! ಮನೆಯಲ್ಲಿ ಸ್ವಿಚ್ ಆಫ್ ಆದ ತಕ್ಷಣ ಬಲ್ಬ್ ಆರಿಹೋದಂತೆ ಸೂರ್ಯ ತಕ್ಷಣ ಸಂಪೂರ್ಣ ಇಲ್ಲವಾದರೆ ತಕ್ಷಣ ಕತ್ತಲಾಗುವುದಿಲ್ಲ. ವೈಜ್ಞಾನಿಕ ನಿಯಮಗಳ ಪ್ರಕಾರ ಸೂರ್ಯನಿಂದ ಭೂಮಿಗೆ ಬೆಳಕು ತಲುಪಲು ಸುಮಾರು 8 ನಿಮಿಷ 20 ಸೆಕೆಂಡುಗಳು ಬೇಕಾಗುತ್ತದೆ. ಇದರರ್ಥ ಸೂರ್ಯನ ಬೆಳಕು ಈ ಕ್ಷಣ ನಿಂತುಹೋದರೆ, ನಾವು ಅದನ್ನು ಇನ್ನೊಂದು 8 ನಿಮಿಷಗಳ ಕಾಲ ಗಮನಿಸಲಾಗುವುದಿಲ್ಲ. ಭೂಮಿಯ ಮೇಲಿನ ಜನರು ಎಂದಿನಂತೆ ಸೂರ್ಯನ ಬೆಳಕನ್ನು ಪಡೆಯುತ್ತಾರೆ.

ಈ 8 ನಿಮಿಷ ಕಳೆದ ತಕ್ಷಣ ಭೂಮಿಯಲ್ಲಿ ಅಲ್ಲೋಲ ಕಲ್ಲೋಲ ಶುರುವಾಗುತ್ತದೆ ನೋಡಿ. ಆಗ ಇಡೀ ಭೂಮಿಯು ಇದ್ದಕ್ಕಿದ್ದಂತೆ ಕತ್ತಲೆಯಲ್ಲಿ ಮುಳುಗುತ್ತದೆ. ಎಷ್ಟು ಕತ್ತಲೆ ಆವರಿಸುತ್ತದೆ ಎಂದರೆ ಆಕಾಶದಲ್ಲಿ ಕಾಣುವ ಚಂದ್ರ, ನಕ್ಷತ್ರಗಳ ಸಹ ಕಾಣುವುದಿಲ್ಲ. ಏಕೆಂದರೆ ಚಂದ್ರನಿಗೂ ಸ್ವಂತ ಬೆಳಕು ಇಲ್ಲ. ಸೂರ್ಯನ ಬೆಳಕಿನ ಸಹಾಯದಿಂದ ಮಾತ್ರ ಹೊಳೆಯುತ್ತದೆ. ಸೂರ್ಯನಿಲ್ಲದ ಮೇಲೆ ಚಂದ್ರನಿಗೂ ಅಮಾವಾಸ್ಯೆಯ ಭೀಕರ ಕತ್ತಲೇ ಆವರಿಸುತ್ತದೆ.

Related Articles

Related image1
Earth: ಬೆಂಕಿಯ ಉಂಡೆಯಾಗಿದ್ದ ಭೂಮಿ ಮೇಲೆ ಇಷ್ಟೊಂದು ನೀರು ಎಲ್ಲಿಂದ ಬಂತು?
Related image2
ಭೂಮಿ ಮೇಲಿನ ನೀರು ಬಾಹ್ಯಾಕಾಶದಿಂದ ಬಂದಿದ್ದು! ಅಚ್ಚರಿ ಹುಟ್ಟಿಸಿದ ಸಂಶೋಧನ ವರದಿ
34
ಈಗ ಕೆಲವು ಗಂಟೆಗಳ ಬಳಿಕ ತಾಪಮಾನ ತೀವ್ರ ಇಳಿಯುತ್ತದೆ
Image Credit : AI

ಈಗ ಕೆಲವು ಗಂಟೆಗಳ ಬಳಿಕ ತಾಪಮಾನ ತೀವ್ರ ಇಳಿಯುತ್ತದೆ

ಸೂರ್ಯನ ಬೆಳಕು ನಿಂತು ಹೋದ ತಾಸಿನ ಬಳಿಕ ಅಂದರೆ ಕೆಲವೇ ಗಂಟೆಗಳಲ್ಲಿ ಭೂಮಿಯ ಉಷ್ಣತೆ ತೀವ್ರವಾಗಿ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಬೆಚ್ಚನೆ ವಾತಾವರಣ ಇದ್ದ ಭೂಮಿ ಇದ್ದಕ್ಕಿದ್ದಂತ ತೀವ್ರವಾಗಿ ಚಳಿ, ಫ್ರಿಡ್ಜ್ ಕೂತಷ್ಟು ತಂಪು. ಆದರೆ ವಾತಾವರಣವು ಶಾಖವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ, ಇಡೀ ಭೂಮಿಯು ತಕ್ಷಣವೇ ಮಂಜುಗಡ್ಡೆಯಾಗಿ ಬದಲಾಗುವುದಿಲ್ಲ. ಕೆಲವೇ ದಿನಗಳಲ್ಲಿ ಭೂಮಿಯ ಸರಾಸರಿ ತಾಪಮಾನ ಕಡಿಮೆಯಾಗಿ ನೀರು ಮಂಜುಗಡ್ಡೆಯಾಗುವ ಮಟ್ಟಕ್ಕೆ ತಂಪಾಗುತ್ತದೆ.

ಈಗ ಸೂರ್ಯನ ಬೆಳಕು ಇಲ್ಲದ್ದರಿಂದ ಸಸ್ಯಗಳಲ್ಲಿನ ದ್ಯುತಿಸಂಶ್ಲೇಷಣೆ ಸಂಪೂರ್ಣವಾಗಿ ನಿಂತು ಹೋಗುವುದರಿಂದ ಸಸ್ಯಗಳು ಆಮ್ಲಜನಕವನ್ನು ಉತ್ಪಾದಿಸುವುದೂ ನಿಂತುಹೋಗುತ್ತದೆ. ಆಗ ಭೂಮಿಯ ವಾತಾವರಣದಲ್ಲಿ ಸಾಕಷ್ಟು ಆಮ್ಲಜನಕವಿರುವದರಿಂದ ತೀರಾ ಉಸಿರುಗಟ್ಟುವ ವಾತಾವರಣ ಇರುವುದಿಲ್ಲ. ಮಾನವರು, ಪ್ರಾಣಿಗಳು ಹಲವಾರು ದಶಕಗಳವರೆಗೆ ಆಮ್ಲಜನಕದ ಕೊರತೆಯನ್ನು ಎದುರಿಸುವುದಿಲ್ಲ. ಇಲ್ಲಿ ಅಪಾಯವಿರುವುದು ತೀವ್ರ ತಂಪು ಶೀತದ ವಾತಾವರಣ.

44
ಸೂರ್ಯನ ಬೆಳಕು ನಿಂತ ಒಂದು ವರ್ಷದಲ್ಲೇ ಜಗತ್ತು ಅಂತ್ಯ
Image Credit : AI

ಸೂರ್ಯನ ಬೆಳಕು ನಿಂತ ಒಂದು ವರ್ಷದಲ್ಲೇ ಜಗತ್ತು ಅಂತ್ಯ

ಸೂರ್ಯನಿಲ್ಲದೆ ಒಂದು ವರ್ಷ ಕಳೆದ ಬಳಿಕ ಭೂಮಿಯ ಉಷ್ಣತೆಯು ಮೈನಸ್ 73 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಇಂಥ ಕೊರೆಯುವ ಚಳಿಯಲ್ಲಿ ಭೂಮಿಯ ವಾತಾವರಣವೆಲ್ಲ ಮಂಜುಗಡ್ಡೆಯಂತಾಗುತ್ತದೆ. ಇಬ್ಬನಿಯಂತೆ ಬೀಳಲು ಪ್ರಾರಂಭಿಸುತ್ತದೆ. ಇಂಥ ವಾತಾವರಣದಲ್ಲಿ ಮನುಷ್ಯರು ಭೂಮಿಯಲ್ಲಿ ಬದುಕುವುದು ಕಷ್ಟವೇ ಸರಿ.

ನೆಲದಾಳದ ಬಂಕರ್‌ಗಳು ಅಥವಾ ವಿಶೇಷವಾಗಿ ಪರಮಾಣು ಚಾಲಿತ ನಿವಾಸದಲ್ಲಿ ಆಶ್ರಯ ಪಡೆಯದವರು ಕೆಲವು ಕಾಲದವರೆಗೆ ಬದುಕಬಹುದು. ಸೂರ್ಯ ತಕ್ಷಣ ನಿಂತು ಹೋದರೆ ಜಗತ್ತು ತಕ್ಷಣ ನಾಶವಾಗುವುದಿಲ್ಲವಾದರೂ ಒಂದು ವರ್ಷದೊಳಗೆ ಭೂಮಿಯು ಸಂಪೂರ್ಣ ಮಂಜುಗಡ್ಡೆ ರೂಪ ಪಡೆಯುವುದರಿಂದ ಇಂಥ ವಾತಾವರಣದಲ್ಲಿ ಜೀವರಾಶಿಗಳು ಬದುಕುಳಿಯಲಾರವು.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ವಿಜ್ಞಾನ
ಭೂಮಿ
ರವಿ
 

Latest Videos
Recommended Stories
Recommended image1
1000 ವರ್ಷದ ಕಗ್ಗಂಟು! 'ಕೋಳಿ ಮೊದಲಾ, ಮೊಟ್ಟೆ ಮೊದಲಾ?' ಪ್ರಶ್ನೆಗೆ ಉತ್ತರ ಹುಡುಕಿದ ವಿಜ್ಞಾನಿಗಳು!
Recommended image2
3000 ವರ್ಷಗಳ ರಹಸ್ಯ ಭೇದಿಸಿದ ಈಜಿಪ್ಟ್, ಮರುಭೂಮಿಯಲ್ಲಿ ಪತ್ತೆಯಾಯ್ತು ಕಳೆದುಹೋಗಿದ್ದ 'ಮೆಸೆನ್' ನಗರದ ಸುಳಿವು!
Recommended image3
​ದೇವಸ್ಥಾನದಲ್ಲಿ ಗಂಟೆ ಬಾರಿಸುವುದು ಬರಿ ಸಂಪ್ರದಾಯವಲ್ಲ, ಇದರ ಹಿಂದಿದೆ ಶಾಕಿಂಗ್ ವಿಜ್ಞಾನ
Related Stories
Recommended image1
Earth: ಬೆಂಕಿಯ ಉಂಡೆಯಾಗಿದ್ದ ಭೂಮಿ ಮೇಲೆ ಇಷ್ಟೊಂದು ನೀರು ಎಲ್ಲಿಂದ ಬಂತು?
Recommended image2
ಭೂಮಿ ಮೇಲಿನ ನೀರು ಬಾಹ್ಯಾಕಾಶದಿಂದ ಬಂದಿದ್ದು! ಅಚ್ಚರಿ ಹುಟ್ಟಿಸಿದ ಸಂಶೋಧನ ವರದಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved