MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • Science
  • ಭವಿಷ್ಯದ ಬಗ್ಗೆ ಪ್ಲಾನ್ ಮಾಡುತ್ತೆ, ಉಪಕಾರ ಮಾಡಿದೋರಿಗೆ ಗಿಫ್ಟ್ ನೀಡುತ್ತೆ ಈ ಪಕ್ಷಿ

ಭವಿಷ್ಯದ ಬಗ್ಗೆ ಪ್ಲಾನ್ ಮಾಡುತ್ತೆ, ಉಪಕಾರ ಮಾಡಿದೋರಿಗೆ ಗಿಫ್ಟ್ ನೀಡುತ್ತೆ ಈ ಪಕ್ಷಿ

ನೀವು ಮಾಡಿದ ಉಪಕಾರವನ್ನು ನೆನಪಿಟ್ಕೊಂಡು ನಿಮಗೆ ಪಕ್ಷಿಯೊಂದು ಉಡುಗೊರೆ ನೀಡಿದ್ರೆ? ಭವಿಷ್ಯಕ್ಕೆ ಬೇಕೆನ್ನುವ ಕಾರಣಕ್ಕೆ ಮೊದಲೇ ಆಹಾರ ಸಂಗ್ರಹಿಸಿಟ್ರೆ ? ಇದ್ಯಾವುದೂ ಕಾಲ್ಪನಿಕ ಕಥೆಯಲ್ಲ, ನಿಮ್ಮ ಸುತ್ತಮುತ್ತ ಓಡಾಡುವ ಪಕ್ಷಿ ಈ ಎಲ್ಲ ಸಾಮರ್ಥ್ಯ ಹೊಂದಿದೆ.

2 Min read
Author : Roopa Hegde
Published : Feb 03 2026, 09:39 PM IST
Share this Photo Gallery
  • FB
  • TW
  • Linkdin
  • Whatsapp
16
ಅಚ್ಚರಿ ಫಲಿತಾಂಶ
Image Credit : Asianet News

ಅಚ್ಚರಿ ಫಲಿತಾಂಶ

ಭವಿಷ್ಯದ ಬಗ್ಗೆ ಯೋಚಿಸೋದು ಅದನ್ನು ಜಾರಿಗೆ ತರೋದು ಮನುಷ್ಯ ಮಾತ್ರ ಅಂದ್ಕೊಂಡಿದ್ವಿ. ಆದ್ರೆ ಬರೀ ಮನುಷ್ಯನಲ್ಲ ಕೆಲ ಪ್ರಾಣಿ, ಪಕ್ಷಿಗಳು ಭವಿಷ್ಯದ ಬಗ್ಗೆ ಆಲೋಚನೆ ಮಾಡುತ್ವೆ. ಇತ್ತೀಚಿಗೆ ನಡೆದ ಸಂಶೋಧನೆಯೊಂದ ಅಚ್ಚರಿ ವರದಿ ನೀಡಿದೆ. ಕೆಲವು ಪ್ರಾಣಿಗಳು ಮತ್ತು ಪಕ್ಷಿಗಳು ಭವಿಷ್ಯವನ್ನು ಊಹಿಸಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಬುದ್ಧಿವಂತಿಕೆಯನ್ನು ಹೊಂದಿವೆ ಎಂದು ಸಂಶೋಧನೆ ಹೇಳುತ್ತದೆ. ನಿರ್ದಿಷ್ಟವಾಗಿ ಕಾಗೆಗಳ ಮೇಲಿನ ಅಧ್ಯಯನಗಳು ವಿಜ್ಞಾನಿಗಳನ್ನು ಅಚ್ಚರಿಗೊಳಿಸಿವೆ. ಕಾಗೆಗಳು ಆಹಾರವನ್ನು ಹುಡುಕುವಲ್ಲಿ ಮಾತ್ರ ನಿಪುಣವಾಗಿಲ್ಲ, ಭವಿಷ್ಯದ ಬಗ್ಗೆ ಮುಂಚಿತವಾಗಿ ತಯಾರಿ ಮಾಡುವ ಸಾಮರ್ಥ್ಯವನ್ನು ಅವು ಹೊಂದಿವೆ.

26
ಕೂಗೋದೊಂದೆ ಕಾಗೆ ಕೆಲಸ ಅಲ್ಲ
Image Credit : Asianet News

ಕೂಗೋದೊಂದೆ ಕಾಗೆ ಕೆಲಸ ಅಲ್ಲ

ಸಾಮಾನ್ಯವಾಗಿ ಕಾಗೆಗಳು ಇಡೀ ದಿನ ಕೂಗ್ತಾ ಗಲಾಟೆ ಮಾಡುತ್ವೆ ಅಂತ ನಾವು ಭಾವಿಸಿದ್ದೇವೆ. ಆದ್ರೆ ವಿಜ್ಞಾನ ಜಗತ್ತಿನಲ್ಲಿ, ಈ ಪಕ್ಷಿಗಳು ಮನುಷ್ಯರನ್ನು ಅಚ್ಚರಿಗೊಳಿಸುತ್ತಲೇ ಇರುತ್ತವೆ. 2017 ರಲ್ಲಿ, ಸ್ವೀಡನ್ನ ಲುಂಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಸಂಶೋಧನೆಯು ಸೈನ್ಸ್ ಜರ್ನಲ್ನಲ್ಲಿ ಪ್ರಕಟವಾಗಿತ್ತು. ಭವಿಷ್ಯದ ಯೋಜನೆ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಈ ಸಂಶೋಧನೆ ಸಾಬೀತುಪಡಿಸಿತ್ತು.

Related Articles

Related image1
ಯಮಹಾ ಮ್ಯಾಜಿಕ್: ಭಾರತದ ರಸ್ತೆಗೆ ಇಳಿಯಿತು ಮೊದಲ ಎಲೆಕ್ಟ್ರಿಕ್ ಸ್ಕೂಟರ್; ಒಂದೇ ಚಾರ್ಜ್‌ಗೆ 169 ಕಿ.ಮೀ ಮೈಲೇಜ್!
Related image2
ಕರ್ಮದ ಕಲ್ಲನ್ನು ಎಡವಿದ ಮನುಜನು... ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ
36
ಮುಂದೆ ಯಾವ್ದು ಬೆಸ್ಟ್ ಅನ್ನೋದು ಕಾಗೆಗೆ ಗೊತ್ತು
Image Credit : Asianet News

ಮುಂದೆ ಯಾವ್ದು ಬೆಸ್ಟ್ ಅನ್ನೋದು ಕಾಗೆಗೆ ಗೊತ್ತು

ಪ್ರಯೋಗದಲ್ಲಿ ಸಂಶೋಧಕರು ಕಾಗೆಗಳಿಗೆ ನಿರ್ದಿಷ್ಟ ವಸ್ತುಗಳನ್ನು ಬಳಸಿಕೊಂಡು ಆಹಾರವನ್ನು ಹೊರತೆಗೆಯಲು ಕಲಿಸಿದ್ದರು. ಕೆಲವು ದಿನಗಳ ತರಬೇತಿಯ ನಂತ್ರ ನಿಷ್ಪ್ರಯೋಜಕ ಹಾಗೂ ಉಪಯುಕ್ತ ಸೇರಿದಂತೆ ವಿವಿಧ ವಸ್ತುಗಳನ್ನು ಅವುಗಳ ಮುಂದೆ ಇರಿಸಲಾಯಿತು. ಕಾಗೆಗಳು ಯಾವುದೇ ಗೊಂದಲವಿಲ್ಲದೆ, ಭವಿಷ್ಯದ ಆಹಾರಕ್ಕೆ ಉಪಯುಕ್ತವಾಗುವ ಸಾಧನವನ್ನು ಆರಿಸಿಕೊಂಡವು. ವಿಜ್ಞಾನಿಗಳ ಪ್ರಕಾರ, ಇದು ಕೇವಲ ಪ್ರತಿಫಲಿತವಲ್ಲ ಆದರೆ ಭವಿಷ್ಯವನ್ನು ಊಹಿಸುವ ಅವುಗಳ ಸಾಮರ್ಥ್ಯದ ಪುರಾವೆಯಾಗಿದೆ.

46
ಕಾಗೆಗಳಲ್ಲಿ ಸ್ವಯಂ ನಿಯಂತ್ರಣ
Image Credit : Asianet News

ಕಾಗೆಗಳಲ್ಲಿ ಸ್ವಯಂ ನಿಯಂತ್ರಣ

ಮತ್ತೊಂದು ಪ್ರಯೋಗದಲ್ಲಿ, ಕಾಗೆಗಳಿಗೆ ಎರಡು ಆಯ್ಕೆಗಳನ್ನು ನೀಡಲಾಗಿತ್ತು. ಒಂದು ತಕ್ಷಣ ತಿನ್ನುವ ಊಟ ಮತ್ತೊಂದು ಹೆಚ್ಚು ರುಚಿಕರವಾದ ಆದ್ರೆ ನಂತ್ರ ತಿನ್ನಬೇಕಾದ ಊಟ. ಹಸಿದಿದ್ದರೂ, ಕೆಲವು ಕಾಗೆಗಳು ತಕ್ಷಣ ಆಹಾರ ತಿನ್ನಲಿಲ್ಲ. ಇದ್ರ ಬದಲು ನಂತ್ರ ತಿನ್ನುವ ಆಯ್ಕೆಯನ್ನು ಆಯ್ದುಕೊಂಡವು. ಈ ನಡವಳಿಕೆ ಉಳಿತಾಯ ಮತ್ತು ಹೂಡಿಕೆಯಂತಹ ಮಾನವ ನಡವಳಿಕೆಯನ್ನು ಹೋಲುತ್ತದೆ.

56
ಸಣ್ಣ ಮೆದುಳು, ದೊಡ್ಡ ಚಿಂತನೆ
Image Credit : Asianet News

ಸಣ್ಣ ಮೆದುಳು, ದೊಡ್ಡ ಚಿಂತನೆ

ಕಾಗೆಗಳು ಸಣ್ಣ ಮೆದುಳನ್ನು ಹೊಂದಿದ್ದರೂ, ಅವುಗಳ ನಡವಳಿಕೆ ಬುದ್ಧಿವಂತಿಕೆಯನ್ನು ಸೂಚಿಸುತ್ತದೆ. ಮೆದುಳಿನ ಗಾತ್ರ ಹಾಗೂ ಬುದ್ಧಿವಂತಿಕೆಗೆ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಕಾಗೆಗಳು ದೂರದೃಷ್ಟಿ, ನಿರ್ಧಾರ ತೆಗೆದುಕೊಳ್ಳುವುದು ಮತ್ತು ತಕ್ಷಣದ ಆಸೆಗಳನ್ನು ನಿಯಂತ್ರಿಸುವಂತಹ ಗುಣಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತವೆ.

66
ಬುದ್ಧಿವಂತಿಕೆ ಮನುಷ್ಯನಿಗೆ ಸೀಮಿತವಲ್ಲ
Image Credit : Asianet News

ಬುದ್ಧಿವಂತಿಕೆ ಮನುಷ್ಯನಿಗೆ ಸೀಮಿತವಲ್ಲ

ಈ ಸಂಶೋಧನೆಯು ಬುದ್ಧಿವಂತಿಕೆ ಕೇವಲ ಮನುಷ್ಯ ಜಾತಿಗೆ ಸೀಮಿತವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಪ್ರಕೃತಿಯಲ್ಲಿ ವಿಭಿನ್ನ ಜೀವಿಗಳು ಸಂದರ್ಭಕ್ಕೆ ತಕ್ಕಂತೆ ಆಧಾರದ ಮೇಲೆ ಯೋಚಿಸುವ, ಅರ್ಥಮಾಡಿಕೊಳ್ಳುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತವೆ ಎಂಬುದನ್ನು ವಿಜ್ಞಾನಿಗಳು ನಂಬುತ್ತಾರೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಪಕ್ಷಿ
ವಿಜ್ಞಾನ

Latest Videos
Recommended Stories
Recommended image1
ಒಣಭೂಮಿಯಲ್ಲ ಮಂಗಳ, ಒಂದು ಕಾಲದ ಮಳೆನಾಡು; ಸಾಕ್ಷಿ ಕಂಡುಹಿಡಿದ ನಾಸಾ Perseverance ರೋವರ್‌!
Recommended image2
ಭೂಮಿಯಲ್ಲಿ ಪ್ರಾಣಿ ಹುಟ್ಟು ಹೇಗಾಯ್ತು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ 460 ಕೋಟಿ ವರ್ಷ ಹಳೇ ಉಲ್ಕೆ
Recommended image3
ಸಾವಿನ ಮೊದಲು ಕಾಣಿಸಿಕೊಳ್ಳುವ ಈ ನಿಗೂಢ ವ್ಯಕ್ತಿ ಯಾರು?, ವಿಜ್ಞಾನವೂ ಸಂಪೂರ್ಣ ತೀರ್ಮಾನಕ್ಕೆ ಬಂದಿಲ್ಲ
Related Stories
Recommended image1
ಯಮಹಾ ಮ್ಯಾಜಿಕ್: ಭಾರತದ ರಸ್ತೆಗೆ ಇಳಿಯಿತು ಮೊದಲ ಎಲೆಕ್ಟ್ರಿಕ್ ಸ್ಕೂಟರ್; ಒಂದೇ ಚಾರ್ಜ್‌ಗೆ 169 ಕಿ.ಮೀ ಮೈಲೇಜ್!
Recommended image2
ಕರ್ಮದ ಕಲ್ಲನ್ನು ಎಡವಿದ ಮನುಜನು... ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved