MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Teacher's Day Special
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Technology
  • Science
  • ಅನಕೊಂಡ ಕಚ್ಚಿದರೆ ಏನಾಗುತ್ತದೆ? ವಿಷವಿಲ್ಲದಿದ್ದರೂ ಇದು ಎಷ್ಟು ಭಯಾನಕ ಗೊತ್ತಾ?

ಅನಕೊಂಡ ಕಚ್ಚಿದರೆ ಏನಾಗುತ್ತದೆ? ವಿಷವಿಲ್ಲದಿದ್ದರೂ ಇದು ಎಷ್ಟು ಭಯಾನಕ ಗೊತ್ತಾ?

Anaconda snake : ಅನಕೊಂಡ ವಿಶ್ವದ ಅತಿದೊಡ್ಡ ಹಾವುಗಳಲ್ಲಿ ಒಂದು, ಆದರೆ ಅದು ವಿಷಕಾರಿಯಲ್ಲ, ಇದರ ಹೊರತಾಗಿಯೂ ಈ ಹಾವನ್ನು ಅದನ್ನು ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಯಾಕೆ ಅನ್ನೋದು ನಿಮಗೆ ಗೊತ್ತಾ? ಇಲ್ಲಿದೆ ಸ್ವಾರಸ್ಯಕರ ಮಾಹಿತಿ.

2 Min read
Author : Pavna Das
Published : Jul 25 2026, 04:50 PM IST
Share this Photo Gallery
  • FB
  • TW
  • Linkdin
  • Whatsapp
15
ಅತಿದೊಡ್ಡ ಹಾವುಗಳಲ್ಲಿ ಒಂದು ಅನಕೊಂಡ
Image Credit : Pixabay

ಅತಿದೊಡ್ಡ ಹಾವುಗಳಲ್ಲಿ ಒಂದು ಅನಕೊಂಡ

ಕೆಲವು ಹಾವುಗಳು ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿ. ಪ್ರತಿ ವರ್ಷ, ಅನೇಕ ಜನರು ಹಾವು ಕಡಿತದಿಂದ ಸಾಯುತ್ತಾರೆ. ದೊಡ್ಡ ಹಾವು ಎಂದಾಗ ನೆನಪಾಗುವುದು ಅನಕೊಂಡ. ಕಾಡಿನಲ್ಲಿ ಅತ್ಯಂತ ಪ್ರಸಿದ್ಧವಾಗಿರುವ, ಅತ್ಯಂತ ಅಪಾಯಕಾರಿ ಅನಕೊಂಡವನ್ನು ವಿಶ್ವದ ಅತಿದೊಡ್ಡ ಹಾವು ಎಂದು ಪರಿಗಣಿಸಲಾಗುತ್ತದೆ. ಸಿನಿಮಾದಲ್ಲಿ ಈ ಹಾವಿನ ಭಯಾನಕತೆಯನ್ನು ನೀವು ನೋಡಿರಬಹುದು. ಈ ಹಾವು ವಿಷಕಾರಿ ಅಲ್ಲದೇ ಇದ್ದರೂ, ಇದನ್ನು ಅಪಾಯಕಾರಿ ಎನ್ನುವುದು ಯಾಕೆ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಅನಕೊಂಡ ಕಚ್ಚಿದರೆ ಮನುಷ್ಯ ಸಾಯಬಹುದೇ?
Image Credit : AI Generated

ಅನಕೊಂಡ ಕಚ್ಚಿದರೆ ಮನುಷ್ಯ ಸಾಯಬಹುದೇ?

ಅನಕೊಂಡ ಕಚ್ಚಿದರೆ ಮನುಷ್ಯ ಸಾಯಬಹುದೇ? ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ ನ್ಯಾಷನಲ್ ಜಿಯಾಗ್ರಫಿಕ್‌ನ ವರದಿಯ ಪ್ರಕಾರ, ಅನಕೊಂಡಗಳು ವಿಷಕಾರಿಯಲ್ಲದ ಕಾರಣ ಅನಕೊಂಡದ ಕಡಿತವು ವಿಷವನ್ನು ಹರಡುವುದಿಲ್ಲ. ಆದರೆ ಇದು ತನ್ನ ಭೇಟಿಯನ್ನು ಹಿಡಿಯುವ ರೀತಿ ಮಾತ್ರ ಭಯ ಹುಟ್ಟಿಸುತ್ತದೆ. ಅನಕೊಂಡ ಒಂದು ಕನ್ಸ್ಟ್ರಿಕ್ಟರ್ ಹಾವು, ಅಂದರೆ ಅದು ತನ್ನ ದೇಹವನ್ನು ತನ್ನ ಬೇಟೆಯ ಸುತ್ತಲೂ ಸುತ್ತಿ, ಆ ಭೇಟಿಯನ್ನು ಉಸಿರುಗಟ್ಟಿಸಿ ಸಾಯಿಸುತ್ತದೆ. ಬೇಟೆಯನ್ನು ಹಿಡಿಯಲು ಅದು ತನ್ನ ಹಲ್ಲುಗಳನ್ನು ಬಳಸುತ್ತದೆ, ಆದರೆ ಅದರ ಕೋರೆಹಲ್ಲುಗಳು ವಿಷರಹಿತವಾಗಿವೆ. ಒಂದು ವೇಳೆ ಅನಕೊಂಡ ಕಚ್ಚಿದರೆ ಆಳವಾದ ಗಾಯಗಳು, ರಕ್ತಸ್ರಾವ ಮತ್ತು ಸೋಂಕನ್ನು ಉಂಟುಮಾಡಬಹುದು.

Related Articles

Related image1
Snake Bite Treatment: ಹಾವು ಕಚ್ಚಿದರೆ ಉಚಿತ ಚಿಕಿತ್ಸೆ ಸಿಗುತ್ತಾ? ವಿಮೆ ಕಂಪನಿಗಳ ನಿಯಮ ಏನು?
Related image2
Snake Plant: ಮನೆಯೊಳಗೆ ಸ್ನೇಕ್ ಪ್ಲಾಂಟ್ ಬೆಳೆಸುವುದರ 7 ಪ್ರಯೋಜನಗಳು ಇಲ್ಲಿವೆ
35
ಅಪಾಯ ಯಾವಾಗ ಹೆಚ್ಚಾಗುತ್ತದೆ?
Image Credit : our own

ಅಪಾಯ ಯಾವಾಗ ಹೆಚ್ಚಾಗುತ್ತದೆ?

ಸಾಮಾನ್ಯವಾಗಿ 6-8 ಮೀಟರ್ ಉದ್ದವಿರುವ ದೊಡ್ಡ ಅನಕೊಂಡವು ಮನುಷ್ಯನನ್ನು ಸಂಪೂರ್ಣವಾಗಿ ಆವರಿಸಿದರೆ, ಒತ್ತಡದಿಂದಾಗಿ ಉಸಿರುಗಟ್ಟುವಿಕೆ ಅಥವಾ ಅಂಗಾಂಗ ಹಾನಿ ಸಾವಿಗೆ ಕಾರಣವಾಗಬಹುದು. ಅನಕೊಂಡಗಳಲ್ಲಿ ಹಲವು ವಿಧಗಳಿವೆ, ಆದರೆ ಅತ್ಯಂತ ಪ್ರಸಿದ್ಧವಾದದ್ದು ಹಸಿರು ಅನಕೊಂಡ, ಇದು 4 ರಿಂದ 6 ಮೀಟರ್ (13 ರಿಂದ 20 ಅಡಿ) ಉದ್ದವಿರಬಹುದು. ಅತಿದೊಡ್ಡ ಅನಕೊಂಡಗಳು 8 ರಿಂದ 9 ಮೀಟರ್ (26 ರಿಂದ 30 ಅಡಿ) ಉದ್ದವನ್ನು ತಲುಪಬಹುದು. ದೊಡ್ಡ ಅನಕೊಂಡಗಳು 200 ರಿಂದ 250 ಕಿಲೋಗ್ರಾಂ (150 ರಿಂದ 250 ಕಿಲೋಗ್ರಾಂ) ತೂಗಬಹುದು.

45
ಅನಕೊಂಡ ಎಷ್ಟು ದೊಡ್ಡ ಪ್ರಾಣಿಯನ್ನು ನುಂಗಬಲ್ಲದು?
Image Credit : our own

ಅನಕೊಂಡ ಎಷ್ಟು ದೊಡ್ಡ ಪ್ರಾಣಿಯನ್ನು ನುಂಗಬಲ್ಲದು?

ಅನಕೊಂಡಗಳು ಸಂಕೋಚಕ ಹಾವುಗಳು. ಅವು ತಮ್ಮ ಬೇಟೆಯನ್ನು ಪುಡಿಮಾಡಿ, ನಂತರ ಅವುಗಳನ್ನು ಸಂಪೂರ್ಣವಾಗಿ ನುಂಗುವ ಮೂಲಕ ಕೊಲ್ಲುತ್ತವೆ. ಅವು ಮೀನು, ಪಕ್ಷಿಗಳು, ಜಿಂಕೆಗಳು, ಕಾಡುಹಂದಿಗಳು ಮತ್ತು ಸಣ್ಣ ಮೊಸಳೆಗಳು ಮತ್ತು ಜಾಗ್ವಾರ್‌ಗಳಂತಹ ದೊಡ್ಡ ಪ್ರಾಣಿಗಳನ್ನು ತಿನ್ನಬಹುದು. 6 ಮೀಟರ್ ಉದ್ದದ ಅನಕೊಂಡವು 50-60 ಕೆಜಿ ಪ್ರಾಣಿಯನ್ನು ಸುಲಭವಾಗಿ ನುಂಗಬಹುದು.

55
ನೀರಿನಲ್ಲಿ ವಾಸಿಸುತ್ತವೆ
Image Credit : Pixabay

ನೀರಿನಲ್ಲಿ ವಾಸಿಸುತ್ತವೆ

ಅನಕೊಂಡಗಳು ಅತ್ಯುತ್ತಮ ಈಜುಗಾರರು ಮತ್ತು ಹೆಚ್ಚಿನ ಸಮಯವನ್ನು ನೀರಿನ ಅಡಿಯಲ್ಲಿ ಕಳೆಯುತ್ತವೆ. ಹೆಣ್ಣುಗಳು ಗಂಡುಗಳಿಗಿಂತ ದೊಡ್ಡದಾಗಿರುತ್ತವೆ. ಅವು ಮೊಟ್ಟೆಗಳನ್ನು ಇಡುವುದಿಲ್ಲ ಆದರೆ ಜೀವಂತ ಮರಿಗಳಿಗೆ ಜನ್ಮ ನೀಡುತ್ತವೆ. ಅನಕೊಂಡಗಳು ಅಪರೂಪವಾಗಿ ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಇವು ಮನುಷ್ಯನಿಗೆ ಅಪಾಯ ಮಾಡಿದ್ದು ಕಡಿಮೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಹಾವಿನ ವಿಷ
ಹಾವು
ವಿಜ್ಞಾನ
ಜೀವನಶೈಲಿ

Latest Videos
Recommended Stories
Recommended image1
ಶನಿಯ ದಕ್ಷಿಣ ಧ್ರುವದಲ್ಲಿ ಮತ್ತೊಂದು ವಿಸ್ಮಯ: ಷಡ್ಭುಜಾಕೃತಿಯ ನಂತರ ಪತ್ತೆಯಾಯ್ತು 10 ಬದಿಗಳ 'ದಶಭುಜಾಕೃತಿ'!
Recommended image2
ಪೆಸಿಫಿಕ್ ಮಹಾಸಾಗರದ ಕತ್ತಲಲ್ಲಿ ಸೀಲ್ ಸಾಹಸ: 1,700 ಮೀಟರ್ ಆಳಕ್ಕೆ ಧುಮುಕಿ ವಿಜ್ಞಾನಿಗಳನ್ನೇ ಬೆರಗುಗೊಳಿಸಿದ ಜಲಚರ!
Recommended image3
GSLV-F17 Launch: ಇಸ್ರೋ ಮತ್ತೊಂದು ಮೈಲಿಗಲ್ಲು, ಯಶಸ್ವಿಯಾಗಿ ಕಕ್ಷೆ ಸೇರಿದ ಭಾರತದ ಪ್ರಥಮ ಇಮೇಜಿಂಗ್ ಸ್ಯಾಟಲೈಟ್!
Related Stories
Recommended image1
Snake Bite Treatment: ಹಾವು ಕಚ್ಚಿದರೆ ಉಚಿತ ಚಿಕಿತ್ಸೆ ಸಿಗುತ್ತಾ? ವಿಮೆ ಕಂಪನಿಗಳ ನಿಯಮ ಏನು?
Recommended image2
Snake Plant: ಮನೆಯೊಳಗೆ ಸ್ನೇಕ್ ಪ್ಲಾಂಟ್ ಬೆಳೆಸುವುದರ 7 ಪ್ರಯೋಜನಗಳು ಇಲ್ಲಿವೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved