ಶಿವಣ್ಣ- ಪ್ರಭುದೇವ ಚಿತ್ರಕ್ಕೆ K ಕರಟಕ D ದಮನಕ ಟೈಟಲ್ ಕೊಟ್ಟ ಭಟ್ಟರು!
ಭಟ್ಟರು ಹಾರಿಸಿದ ಹೊಸ ಟೈಟಲ್ ವೈರಲ್. ಶಿವಣ್ಣ ಮತ್ತು ಪ್ರಭುದೇವ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಸಿನಿಮಾ ಹೇಗಿರಲಿದೆ...

ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ ಹಾಗೂ ಶಿವರಾಜ್‌ಕುಮಾರ್ ಕಾಂಬಿನೇಶನ್‌ನ ಚಿತ್ರಕ್ಕೆ ‘ಕೆ ಕರಟಕ ಡಿ ದಮನಕ’ ಎನ್ನುವ ಹೆಸರನ್ನು ಇಡಲಾಗಿದೆ.
ಇಂಥದ್ದೊಂದು ವಿಭಿನ್ನವಾದ ಹೆಸರಿನ ಮೂಲಕ ತಮ್ಮ ಚಿತ್ರದ ಶೂಟಿಂಗ್‌ಗೆ ನಿದೇಶಕ ಯೋಗರಾಜ್ (Yogaraj Bhat) ಚಾಲನೆ ನೀಡಿದ್ದಾರೆ.
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ ಇದಾಗಿದೆ. ‘ಗಾಳಿಪಟ 2’ ನಂತರ ಯೋಗರಾಜ್ ಭಟ್ ಅವರು ಕೈಗೆತ್ತಿಕೊಂಡಿರುವ ಸಿನಿಮಾ ಇದು. ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.
ಸೋಷಿಯಲ್ ಮೀಡಿಯಾ ವೈರಲ್ ಆಗುತ್ತಿರುವ ಫೋಟೋದಲ್ಲಿ ಭಟ್ಟರು, ಪ್ರಭುದೇವ ಮತ್ತು ಶಿವಣ್ಣ ನೋಡಬಹುದು. ಇದು ಮಿನರ್ವ ಮಿಲ್‌ನಲ್ಲಿ ಚಿತ್ರೀಕರಣ ಮಾಡುತ್ತಿರುವುದು.
ಇದೊಂದು ಆಕ್ಷನ್ ಸಿನಿಮಾ ಎನ್ನಲಾಗಿದೆ. ಭಟ್ರು ಜೊತೆ ಸಿನಿಮಾ ಆಗಬೇಕು ಅನ್ನೋದು ಬಹಳ ದಿನಗಳ ಚರ್ಚೆ. ಒಂದಷ್ಟು ಕಥೆಗಳನ್ನು ಹೇಳಿದ್ದರು ಈ ಸಲ ಒಂದು ಪಕ್ಕಾ ಮಾಡಿಕೊಂಡು ಬಂದರು ಎಂದು ಶಿವಣ್ಣ ಹೇಳಿದ್ದಾರೆ.
ಶಿವರಾಜ್‌ಕುಮಾರ್, ಪ್ರಭುದೇವ, ತನಿಕೆಳ್ಳ ಭರಣಿ, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.