- Home
- Entertainment
- Sandalwood
- 'ನನ್ನ ಗಂಡ ರೈತ, ಹರ್ದೋಗಿರೋ ಬಟ್ಟೆ ಹಾಕೊಂಡ್ರೆ ಮಾತ್ರ ಬೆಲೆ ಕೊಡ್ತೀರಾ?'; ನನ್ನ ಹಣೆಬರಹ ಎಂದ ಅದಿತಿ ಪ್ರಭುದೇವ
'ನನ್ನ ಗಂಡ ರೈತ, ಹರ್ದೋಗಿರೋ ಬಟ್ಟೆ ಹಾಕೊಂಡ್ರೆ ಮಾತ್ರ ಬೆಲೆ ಕೊಡ್ತೀರಾ?'; ನನ್ನ ಹಣೆಬರಹ ಎಂದ ಅದಿತಿ ಪ್ರಭುದೇವ
ರೈತ ಅಲ್ಲ ರೈತ ಅಲ್ಲ ಎಂದ ಪದೇ ಪದೇ ಅದಿತಿ ಪ್ರಭುದೇವ ಟಾರ್ಗೆಟ್ ಮಾಡುತ್ತಿರುವ ನೆಟ್ಟಿಗರು. ರೈತರು ಹೇಗಿರಬೇಕು ಎಂದು ಪ್ರಶ್ನೆ ಮಾಡಿದ ನಟಿ...

ಕನ್ನಡತಿ ಅದಿತಿ ಪ್ರಭುದೇವ ಕೆಲವು ತಿಂಗಳ ಹಿಂದೆ ಚಿಕ್ಕಮಗಳೂರು ಹುಡುಗ ಯಶಸ್ ಕೈ ಹಿಡಿದರು. ರೈತನ ಮದುವೆ ಆಗಬೇಕು ಎಂದು ಆಸೆ ಹೇಳಿಕೊಂಡ ನಟಿ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದರು.
ಅದಿತಿ ಪತಿ ಯಶಸ್ ಚಿಕ್ಕಮಗಳೂರು ರೈತ ಎಂದು ಎಷ್ಟು ಸಲ ಸ್ಪಷ್ಟನೆ ಕೊಟ್ಟರೂ ನೆಗೆಟಿವ್ ಕಾಮೆಂಟ್‌ಗಳು ಬರುತ್ತಿದೆ. ಹೀಗಾಗಿ ಅವರಿಗೆಲ್ಲಾ ಒಂದೇ ಸಲ ಉತ್ತರ ಕೊಟ್ಟು ಸುಮ್ಮನಾಗಿದ್ದಾರೆ.
'ಹಳ್ಳಿ ಹುಡುಗ ಶ್ರೀಮಂತ ಹುಡುಗ ಅಂತ ಯಾರಾದರೂ ಬಂದು ನೋಡಿದ್ದಾರಾ? ಜನರ ಪ್ರಕಾರ ರೈತ ಅಂದ್ರೆ ಹರಿದಿರುವ ಬಟ್ಟೆ ಹಾಕೊಂಡು ಇರ್ಬೇಕಾ? ನನ್ನ ಅಜ್ಜ ಮಾವ ಎಲ್ಲಾ ರೈತರು'
'ಹೈ-ಸಫೆಸ್ಟಿಕೇಟ್ ಆಗಿ ತುಂಬಾ ಚೆನ್ನಾಗಿದ್ದಾರೆ. ರೈತರು ಅಂತ ಹರಿದಿರುವ ಬಟ್ಟೆ ಹಾಕೋಬೇಕಾ? ಅವರೆಲ್ಲಾ ರೈತರಲ್ಲ ಅನ್ನ ಹಾಕೋನು ತುಂಬಾ ಘನತೆಯಿಂದ ಇರುವವನು ರೈತ'
'ಚೆನ್ನಾಗಿ ಬಟ್ಟೆ ಹಾಕೊಂಡು ಕೂಲಿಂಗ್ ಗ್ಲಾಸ್ ಹಾಕಿದವರು ರಿಚ್ ವ್ಯಕ್ತಿ ರೈತ ಅಲ್ಲ ಅಂತನಾ. ಮೊನ್ನೆ ತೋಟದ ಕಡೆ ಹೋಗಿ ಕಾಫಿ ತೋಟ ಕಬ್ಬು ಎಲ್ಲಾ ನೋಡ್ಕೊಂಡು ಬಂದಿದ್ದಾರೆ'
'ನನ್ನ ಹಣೆಯಲ್ಲಿ ಯಾರ ಹೆಸರು ಬರೆದಿದೆ ಅವರನ್ನು ಮದುವೆಯಾಗಿರುವೆ. ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಅವರಷ್ಟು ಒಳ್ಳೆಯ ಕುಟುಂಬ ನನಗೆ ಸಿಕ್ಕಿದೆ.