- Home
- Entertainment
- Sandalwood
- ವಿಕ್ರಮ್ ರವಿಚಂದ್ರನ್ ಹೊಸ ಸಿನಿಮಾ 'ಮುಧೋಳ್'; ಕ್ರೇಜಿಸ್ಟಾರ್ ಕೊಟ್ಟ ಟೈಟಲ್ ಇದು!
ವಿಕ್ರಮ್ ರವಿಚಂದ್ರನ್ ಹೊಸ ಸಿನಿಮಾ 'ಮುಧೋಳ್'; ಕ್ರೇಜಿಸ್ಟಾರ್ ಕೊಟ್ಟ ಟೈಟಲ್ ಇದು!
ಕಾರ್ತಿಕ್ ನಿರ್ದೇಶನ ಮಾಡುತ್ತಿರುವ ಮುಧೋಳ್ ಸಿನಿಮಾ. ರವಿಚಂದ್ರನ್ ಕೊಟ್ಟ ಟೈಟಲ್ ಹಿಂದಿರುವ ಗುಟ್ಟು ಏನು?

ವಿಕ್ರಮ್ ರವಿಚಂದ್ರನ್ ನಟನೆಯ ಹೊಸ ಚಿತ್ರದ ಶೀರ್ಷಿಕೆ ಬಿಡುಗಡೆಗೆ ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ನಡೆಯಿತು. ಅಭಿಮಾನಿಗಳು, ಪ್ರೇಕ್ಷಕರ ನಡುವೆ ಬಿಡುಗಡೆಯಾದ ಈ ಚಿತ್ರದ ಹೆಸರು ‘ಮುಧೋಳ್’.
‘ಮುಧೋಳ್ ಎಂದರೆ ನಾಯಿನೂ ಹೌದು, ಊರೂ ಹೌದು, ಹಾಗೆ ಚಿತ್ರದ ನಾಯಕನ ಹೆಸರೂ ಹೌದು’ ಎಂಬುದು ಚಿತ್ರದ ನಿರ್ದೇಶಕ ಕಾರ್ತಿಕ್ ರಂಜನ್ ವಿವರಣೆ.
ಈಗಾಗಲೇ ತಮಿಳು, ತೆಲುಗು ಚಿತ್ರಗಳಿಗೆ ಕೆಲಸ ಮಾಡಿರುವ ಕಾರ್ತಿಕ್ ರಂಜನ್ ಅವರಿಗೆ ಇದು ಮೊದಲ ನಿರ್ದೇಶನದ ಸಿನಿಮಾ. ‘ನಾನು ತಮಿಳಿನ ಸಿಂಬು, ವಿಕ್ರಮ್, ವಿಜಯ್ ಸೇತುಪತಿ ಹಾಗೂ ತೆಲುಗಿನಲ್ಲಿ ನಾಗಾರ್ಜುನ, ಸಮಂತಾ ನಟನೆಯ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ.
ಕನ್ನಡದಲ್ಲಿ ಧನಂಜಯ್ ಅವರ ಹೆಡ್‌ಬುಷ್ ಚಿತ್ರಕ್ಕೆ ಸಹ ನಿರ್ದೇಶಕನಾಗಿದ್ದೆ, ಇದರ ನಡುವೆ ‘ನಿಶಾ’ ಎಂಬ ವೆಬ್ ಸರಣಿ ನಿರ್ದೇಶನ ಮಾಡಿದ್ದು, ಇದು ಜೀ5ನಲ್ಲಿ ಪ್ರಸಾರವಾಗುತ್ತಿದೆ.
‘ಮುಧೋಳ್’ ಚಿತ್ರದ ಕತೆ ಕೇಳಿದ ಮೇಲೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ಕೊಟ್ಟಹೆಸರು. ಕತೆಗೂ ಇದು ಸೂಕ್ತ ಎನಿಸಿ ಟೈಟಲ್ ಓಕೆ ಮಾಡಿದ್ವಿ. ಪಕ್ಕಾ ಮಾಸ್ ಕತೆ ಇಲ್ಲಿದೆ’ ಎಂದು ಕಾರ್ತಿಕ್ ರಂಜನ್ ಹೇಳಿಕೊಂಡರು.
ರಕ್ಷಾ ವಿಜಯ್ ಕುಮಾರ್ ಹಾಗೂ ಸಿಲ್ಜು ಕಣ್ಣನ್ ಚಿತ್ರದ ನಿರ್ಮಾಪಕರು. ಈಗಾಗಲೇ 30 ದಿನಗಳ ಚಿತ್ರೀಕರಣ ಆಗಿದೆ. ನಾಯಿ ಜತೆಗೆ ವಿಕ್ರಮ್ ರವಿಚಂದ್ರನ್ ಅವರ ಫಸ್ಟ್ ಲುಕ್ ಗಮನ ಸೆಳೆಯುತ್ತಿದೆ.
‘ಇದು ನನ್ನ ಎರಡನೇ ಸಿನಿಮಾ. ಇದೊಂದು ಗ್ಯಾಂಗ್‌ಸ್ಟರ್ ಕತೆಯನ್ನು ಒಳಗೊಂಡ ಸಿನಿಮಾ. ಕತೆ ತುಂಬಾ ಚೆನ್ನಾಗಿದೆ. ಚಿತ್ರದ ಟೈಟಲ್‌ನಷ್ಟೇ ಸಿನಿಮಾ ಕೂಡ ಪವರ್‌ಫುಲ್ಲಾಗಿ ಮೂಡಿ ಬರಲಿದೆ’ ಎಂದು ವಿಕ್ರಮ್ ರವಿಚಂದ್ರನ್ ಹೇಳಿಕೊಂಡರು.