- Home
- Entertainment
- Sandalwood
- ಮಗನ ಜೊತೆ ವಿಜಯಲಕ್ಷ್ಮಿ ದರ್ಶನ್ ವ್ಯಾಲೆಂಟೈನ್ಸ್ ಡೇ ಫೋಟೋ; ಬಾಸ್ ಫೋಟೋ ಎಲ್ಲಿ ಎಂದು ಪ್ರಶ್ನಿಸಿದ ನೆಟ್ಟಿಗರು!
ಮಗನ ಜೊತೆ ವಿಜಯಲಕ್ಷ್ಮಿ ದರ್ಶನ್ ವ್ಯಾಲೆಂಟೈನ್ಸ್ ಡೇ ಫೋಟೋ; ಬಾಸ್ ಫೋಟೋ ಎಲ್ಲಿ ಎಂದು ಪ್ರಶ್ನಿಸಿದ ನೆಟ್ಟಿಗರು!
ತಾಯಿ ಮಗನ ಪ್ರೀತಿ ಮುಂದೆ ಬೇರೆ ಯಾವ ಪ್ರೀತಿನೂ ಕಡಿಮೆನೇ. ವಿನೀಶ್ ಜೊತೆ ವಿಜಯಲಕ್ಷ್ಮಿ ದರ್ಶನ್. ಫೋಟೋ ವೈರಲ್...

ಕನ್ನಡ ಚಿತ್ರರಂಗದ ನಟ ದರ್ಶನ್ ಕಾಟೇರ ಸಿನಿಮಾ ಯಶಸ್ಸಿನ ನಂತರ ಮತ್ತೊಂದು ಸಿನಿಮಾ ಪ್ರಾಜೆಕ್ಟ್ ಶುರು ಮಾಡಲು ಸಜ್ಜಾಗಿದ್ದಾರೆ. ಅದೇ ಡೆವಿಲ್.
ಹೌದು! ಡೆವಿಲ್- ದಿ ಹೀರೋ ಸಿನಿಮಾ ಚಿತ್ರೀಕರಣ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಸದ್ಯ ದರ್ಶನ್ ಹುಟ್ಟುಹಬ್ಬಕ್ಕೆ ಆಪ್ತರು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಇಂದು ಪ್ರೇಮಿಗಳ ದಿನದ ಪ್ರಯುಕ್ತ ವಿಜಯಲಕ್ಷ್ಮಿ ದರ್ಶನ್ ಮಗನ ಜೊತೆಗಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ಯಾರ ದೃಷ್ಠಿ ಬೀಳದಂತೆ ಈವಿಲ್ ಐ ಹಾಕಿದ್ದಾರೆ.
ದರ್ಶನ್ ಮತ್ತು ವಿಜಯಲಕ್ಷ್ಮಿರವರ ಏಕೈಕ ಮುದ್ದಿನ ಮಗ ವಿನೀಶ್ ಕೂಡ ಈಗ ಸಖತ್ ಫೇಮಸ್. ಸೋಷಿಯಲ್ ಮೀಡಿಯಾ ಸ್ಟಾರ್ ಕಿಡ್ ಎನ್ನಬಹುದು.
ವಿನೀಶ್ ಕೂಡ ಅಪ್ಪನಂತೆ ಪ್ರಾಣಿ-ಪಕ್ಷಿಗಳ ಮೇಲೆ ಆಸಕ್ತಿ ಹೊಂದಿದ್ದಾರೆ. ಈ ಹಿಂದೆ ತಂದೆ ಜೊತೆ ತೋಟದ ಮನೆ ಸುತ್ತ ಕುದರೆ ಸವಾರಿ ಕಲಿಯುತ್ತಿರುವ ವಿಡಿಯೋ ವೈರಲ್ ಆಗಿತ್ತು.
ವ್ಯಾಲೆಂಟೈನ್ಸ್ ಡೇ ನೀವು ಬಾಸ್ ಜೊತೆ ಫೋಟೋ ಅಪ್ಲೋಡ್ ಮಾಡಬೇಕು ಯಾಕೆ ಮಿಸ್ ಮಾಡಿದ್ದೀರಾ? ದಯವಿಟ್ಟು ಫೆಬ್ರವರಿ 16ರಂದು ಮಿಸ್ ಮಾಡದೆ ಫೋಟೋ ಅಪ್ಲೋಡ್ ಮಾಡಿ ಎಂದು ನೆಟ್ಟಿಗರು ಮನವಿ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.