- Home
- Entertainment
- Sandalwood
- ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ವಿಜಯಲಕ್ಷ್ಮೀ; ಗಾಳಿ ಆಂಜನೇಯನ ಆಶೀರ್ವಾದ ಪಡೆದ ದರ್ಶನ್ ಪತ್ನಿ!
ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ವಿಜಯಲಕ್ಷ್ಮೀ; ಗಾಳಿ ಆಂಜನೇಯನ ಆಶೀರ್ವಾದ ಪಡೆದ ದರ್ಶನ್ ಪತ್ನಿ!
ಪತಿ ದರ್ಶನ್ ಅನುಪಸ್ಥಿತಿಯಲ್ಲಿ ತಮ್ಮ ಬರ್ತಡೇಯನ್ನು ಸಿಂಪಲ್ ಆಗಿ ಆಚರಿಸಿಕೊಂಡ ವಿಜಯಲಕ್ಷ್ಮೀ ಅವರು, ಇಂದು ತಮ್ಮ ಪತಿಯನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೂ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

ಕನ್ನಡದ ಸ್ಟಾರ್ ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ಅವರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪತಿ ಜೈಲಿನಲ್ಲಿರುವ ಸಹಜ ನೋವು ಇದ್ದರೂ ಸಂಪ್ರದಾಯದಂತೆ ದೀಪಾವಳಿ ಹಬ್ಬವನ್ನು ಆಚರಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿರುವ ವಿಜಯಲಕ್ಷ್ಮೀ ಅವರು, ಇಂದು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಗಾಳಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದರ್ಶನ್ ಪಡೆದು ಭಕ್ತಿ-ಭಾವದಿಂದ ನಮಸ್ಕರಿಸಿದ್ದಾರೆ ವಿಜಯಲಕ್ಷ್ಮೀದರ್ಶನ್.
ಪತಿ ದರ್ಶನ್ ಅನುಪಸ್ಥಿತಿಯಲ್ಲಿ ತಮ್ಮ ಬರ್ತಡೇಯನ್ನು ಸಿಂಪಲ್ ಆಗಿ ಆಚರಿಸಿಕೊಂಡ ವಿಜಯಲಕ್ಷ್ಮೀ ಅವರು, ಇಂದು ತಮ್ಮ ಪತಿಯನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೂ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಅಲ್ಲಿ ನಟ ದರ್ಶನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ವಿಜಯಲಕ್ಷ್ಮೀ.
ನಟ ದರ್ಶನ್ ಜೈಲು ಸೇರಿದ ನಂತರ ಸಂಪೂರ್ಣ ದೇವರ ಮೊರೆ ಹೋಗಿರುವ ವಿಜಯಲಕ್ಷ್ಮಿ ಅವರು, ಹೆಚ್ಚೂಕಡಿಮೆ ಪ್ರತಿದಿನ ಒಂದೊಂದು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ ಎನ್ನಬಹುದು. ಮನೆಯ ಸುತ್ತಮುತ್ತಲಿನ ದೇವಸ್ಥಾನಗಳ ಜೊತೆಗೆ, ಕಾಮಾಕ್ಯ ದೇವಿ ಸೇರಿದಂತೆ ಹಲವು ಪ್ರಮುಖ ದೇವಸ್ಥಾನಗಳಿಗೂ ವಿಜಯಲಕ್ಷ್ಮೀ ಅವರು ಭೇಟಿ ನೀಡಿ ತಮ್ಮ ಕುಟುಂಬಕ್ಕೆ ಬಂದಿರುವ ಕಷ್ಟಕ್ಕೆ ಪರಿಹಾರ ಬೇಡಿದ್ದಾರೆ. ಇಂದು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಗಾಳಿ ಆಂಜನೇಯನ ಆಶೀರ್ವಾದವನ್ನು ಕೂಡ ಪಡೆದಿದ್ದಾರೆ.
ಅಂದಹಾಗೆ, ಮೊನ್ನೆ ಸಿಂಪಲ್ ಅಗಿ ಮನಯಲ್ಲಿ ವಿಜಯಲಕ್ಷ್ಮೀ ಅವರು ಆಚರಿಸಿಕೊಂಡಿರುವ ದೀಪಾವಳಿ, ಹಾಗೂ ಕಳೆದ ವಾರ ಮಗ ವಿನೀಶ್ ತೂಗುದೀಪ ಹುಟ್ಟುಹಬ್ಬದ ಸಿಂಪಲ್ ಆಚರಣೆ ಹಾಗೂ ಅವುಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಕುಟುಂಬದ ಅಭಿಮಾನಿಗಳಿಗೆ ಶೇರ್ ಮಾಡಿಕೊಂಡು ಸಮಾಧನಾ ಪಟ್ಟುಕೊಂಡಿದ್ದಾರೆ ವಿಜಯಲಕ್ಷ್ಮೀ.
ರೇಣುಕಾಸ್ವಾಮಿ ಕೇಸ್ನಲ್ಲಿ ಆರೋಪಿಯಾಗಿ ಸಿಲುಕಿಕೊಂಡು ಕನ್ನಡದ ಸ್ಟಾರ್ ನಟ ದರ್ಶನ್ ತೂಗುದೀಪ ಅವರು ಜೈಲು ಸೇರಿರುವುದು ಗೊತ್ತೇ ಇದೆ. ಸದ್ಯಕ್ಕೆ ಈ ಪ್ರಕರಣ ತನಿಖೆ ಹಂತದಲ್ಲಿದ್ದು, ಇನ್ನೂ ಯಾವುದೇ ನಿರ್ಧಿಷ್ಟ ಹಂತ ತಲುಪಿಲ್ಲ. ಹೀಗಾಗಿ, ದರ್ಶನ್ ಕುಟುಂಬ ಸದ್ಯಕ್ಕೆ ತೀವ್ರ ಆತಂಕ ಹಾಗೂ ಸಮಸ್ಯೆಗಳಲ್ಲಿ ದಿನಗಳನ್ನು ಕಳೆಯುವಂತಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













