- Home
- Entertainment
- Sandalwood
- 2ನೇ ಮಗುವಿನೆ ನಿರೀಕ್ಷೆಯಲ್ಲಿ ವರುಣ್ ಆರಾಧ್ಯ ಸಹೋದರಿ; ಅಗಲಿರುವ ಗೆಳೆಯ ಮತ್ತೆ ಹುಟ್ಟಿ ಬರಲಿ ಎಂದು ವಿಶ್!
2ನೇ ಮಗುವಿನೆ ನಿರೀಕ್ಷೆಯಲ್ಲಿ ವರುಣ್ ಆರಾಧ್ಯ ಸಹೋದರಿ; ಅಗಲಿರುವ ಗೆಳೆಯ ಮತ್ತೆ ಹುಟ್ಟಿ ಬರಲಿ ಎಂದು ವಿಶ್!
ಮತ್ತೆ ಗೆಳೆಯನೇ ಹುಟ್ಟಿ ಬರಲಿ ಎಂದು ವಿಶ್ ಮಾಡುತ್ತಿರುವ ವರುಣ್- ಚೈತ್ರಾ. ಕಾಮೆಂಟ್ ಪೂರ್ತಿ ತಂದೆಯ ವಿಶ್......

ಸೋಷಿಯಲ್ ಮೀಡಿಯಾ ಸ್ಟಾರ್, ಬೃಂದಾವನ ಧಾರಾವಾಹಿ ನಟ ವರುಣ್ ಆರಾಧ್ಯ ಅವರ ಸಹೋದರಿ ಚೈತ್ರಾ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.
ವರುಣ್ ಸಹೋದರಿ ಚೈತ್ರಾ ಮತ್ತು ಪ್ರತಾಪ್ ಎಂಬುವವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 2 ವರ್ಷಗಳಾಗಿದೆ. ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.
ಸಹೋದರಿ ಚೈತ್ರಾ ಮದುವೆ ಮಾಡುವ ಸಮಯದಲ್ಲಿ ಕೊರೋನಾ ವೈರಸ್‌ಯಿಂದ ವರುಣ್ ಆರಾಧ್ಯ ತಂದೆಯನ್ನು ಕಳೆದುಕೊಳ್ಳುತ್ತಾರೆ. ವರುಣ್ ತಂದೆ ಆಟೋ ಚಾಲಕರಾಗಿದ್ದರು.
ಕೆಲವು ತಿಂಗಳ ಹಿಂದೆ ವರುಣ್ ಆರಾಧ್ಯ ಬೆಸ್ಟ್ ಫ್ರೆಂಡ್ ಆಗಿದ್ದ ತೇಜಸ್ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದರು. ವರುಣ್ ಮತ್ತು ಚೈತ್ರಾ ಇಬ್ಬರೂ ತೇಜಸ್‌ನ ಸಿಕ್ಕಾಪಟ್ಟೆ ಅಚ್ಚುಕೊಂಡಿದ್ದರು.
ಚೈತ್ರಾ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ರಿವೀಲ್ ಮಾಡುತ್ತಿದ್ದಂತೆ ಅಭಿಮಾನಿಗಳು 'ನಿಮ್ಮ ತಂದೆ ಮತ್ತೆ ಹುಟ್ಟಿ ಬರುತ್ತಾರೆ. ಈ ಸಲ ಗಂಡು ಮಗುನೇ' ಎಂದು ಕಾಮೆಂಟ್ ಮಾಡುತ್ತಿದ್ದರು.
ಆದರೆ ವರುಣ್ ಮತ್ತು ಫ್ಯಾಮಿಲಿ ತೇಜಸ್ ಹುಟ್ಟಿ ಬರಲಿ ಎಂದು ವಿಶ್ ಮಾಡುತ್ತಿದ್ದಾರೆ. ನಮ್ಮ ತೇಜಸ್ ನಮ್ಮ ಮನೆಗೆ ಮತ್ತೆ ಬರಬೇಕು ಎಂದು ಎಲ್ಲೆಡೆ ಹೇಳಿಕೊಂಡು ಓಡಾಡುತ್ತಿದ್ದಾರೆ.