- Home
- Entertainment
- Sandalwood
- ದರ್ಶನ್‌ಗೆ ಚಾಲೆಂಜಾ?: ಡೆವಿಲ್ ಟೀಸರ್ ನೋಡಿ ಯಶ್ 'ಟಾಕ್ಸಿಕ್'ಗೆ ಸವಾಲ್ ಹಾಕಿದ ದಚ್ಚು ಫ್ಯಾನ್ಸ್!
ದರ್ಶನ್‌ಗೆ ಚಾಲೆಂಜಾ?: ಡೆವಿಲ್ ಟೀಸರ್ ನೋಡಿ ಯಶ್ 'ಟಾಕ್ಸಿಕ್'ಗೆ ಸವಾಲ್ ಹಾಕಿದ ದಚ್ಚು ಫ್ಯಾನ್ಸ್!
ಭರ್ಜರಿ ಆ್ಯಕ್ಷನ್ ಹಿನ್ನೆಲೆಯಲ್ಲಿ ‘ಡೆವಿಲ್’ ಸಿನಿಮಾ ಟೀಸರ್ ಸರೆಗಮ ಕನ್ನಡ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಆರು ಗಂಟೆಗಳಲ್ಲಿ 18 ಲಕ್ಷಕ್ಕೂ ಅಧಿಕ ವೀಕ್ಷಣೆ ದಾಖಲಿಸಿ ನಂ.1 ಟ್ರೆಂಡಿಂಗ್‌ನಲ್ಲಿದೆ.

ದರ್ಶನ್ ಹುಟ್ಟುಹಬ್ಬಕ್ಕೆ ಅವರು ನಟಿಸಿರುವ ‘ಡೆವಿಲ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ದರ್ಶನ್ ಆ ಬಳಿಕ ಸಿನಿಮಾ ಚಟುವಟಿಕೆಗಳಲ್ಲಿ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ.
ಅನಾರೋಗ್ಯದ ಕಾರಣ ನೀಡಿ ಅಭಿಮಾನಿಗಳ ಜೊತೆಗೆ ಜನ್ಮದಿನ ಆಚರಣೆಯಲ್ಲೂ ಭಾಗವಹಿಸಿರಲಿಲ್ಲ. ಆ ಖಾಲಿತನ ತುಂಬುವಂತೆ ಇದೀಗ ಭರ್ಜರಿ ಆ್ಯಕ್ಷನ್ ಹಿನ್ನೆಲೆಯಲ್ಲಿ ‘ಡೆವಿಲ್’ ಸಿನಿಮಾ ಟೀಸರ್ ಸರೆಗಮ ಕನ್ನಡ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಆರು ಗಂಟೆಗಳಲ್ಲಿ 18 ಲಕ್ಷಕ್ಕೂ ಅಧಿಕ ವೀಕ್ಷಣೆ ದಾಖಲಿಸಿ ನಂ.1 ಟ್ರೆಂಡಿಂಗ್‌ನಲ್ಲಿದೆ.
ಪಬ್‌ನ ಕಲರ್‌ಫುಲ್ ಬ್ಯಾಗ್ರೌಂಡ್, ಡ್ಯಾನ್ಸರ್ಸ್, ಮತ್ತಿನ ಜಗತ್ತಿನ ಹಿನ್ನೆಲೆಯಲ್ಲಿ ಮೂಡಿಬಂದ ಟೀಸರ್ ಯಶ್ ನಟನೆಯ ‘ಟಾಕ್ಸಿಕ್’ ಟೀಸರ್ ಅನ್ನು ಹೋಲುತ್ತದೆ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಆದರೆ ದರ್ಶನ್ ಅಭಿಮಾನಿಗಳು ಇದು ‘ಟಾಕ್ಸಿಕ್’ಗೆ ಹಾಕಿರುವ ಚಾಲೆಂಜ್ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇದಕ್ಕೆ ಪೂರಕವಾಗಿ ಟೀಸರ್ ಕೊನೆಯಲ್ಲಿ ದರ್ಶನ್ ‘ಚಾಲೆಂಜ್’ ಅಂತ ಹೇಳುವ ಸನ್ನಿವೇಶವಿದೆ. ಇದರ ಜೊತೆಗೆ ಜೋಗಿ ಪ್ರೇಮ್ ಜೊತೆಗೆ ದರ್ಶನ್ ಹೊಸ ಸಿನಿಮಾದ ಘೋಷಣೆಯಾಗಿದೆ.
‘ನನ್ನ ಕೊನೆ ಉಸಿರಿರೋವರ್ಗೂ ಈ ಭೂಮಿ ಮೇಲೆ ನಿನ್ನ ಒಂದು ಹನಿ ರಕ್ತನೂ ಸೋಕೋದಕ್ಕೆ ನಾನು ಬಿಡಲ್ಲ ಜೈ ಶ್ರೀರಾಮ್’ ಎಂಬ ದರ್ಶನ್ ಡೈಲಾಗ್ ಇರುವ ಟೀಸರ್‌ನಲ್ಲಿ ಗದೆ, ಅರಮನೆ, ಎರಡು ಸೇನೆಗಳ ಮುಖಾಮುಖಿಯನ್ನು ಯುದ್ಧಭೂಮಿಯ ಹಿನ್ನೆಲೆಯಲ್ಲಿ ತೋರಿಸಲಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಇದಕ್ಕೆ ಬಂಡವಾಳ ಹೂಡುತ್ತಿದೆ.
‘ಡೆವಿಲ್’ ಬಿಡುಗಡೆ ಬಳಿಕ ಈ ಸಿನಿಮಾ ಶೂಟಿಂಗ್ ಟೇಕಾಫ್ ಆಗುವ ಸಾಧ್ಯತೆ ಇದೆ. ಇದರ ಜೊತೆಗೆ ತರುಣ್ ಸುಧೀರ್ ಜೊತೆಗಿನ ದರ್ಶನ್ ಸಿನಿಮಾ ‘ಡಿ 59’ ಘೋಷಣೆಯಾಗಿದೆ. ಇದರಲ್ಲಿ ವೀರ ಸಿಂಧೂರ ಲಕ್ಷ್ಮಣನ ಪಾತ್ರದಲ್ಲಿ ದರ್ಶನ್ ನಟಿಸುವ ಸಾಧ್ಯತೆ ಇದ್ದು, ಶೈಲಜಾನಾಗ್, ಬಿ ಸುರೇಶ ಬಂಡವಾಳ ಹೂಡುತ್ತಿದ್ದಾರೆ.