- Home
- Entertainment
- Sandalwood
- ಧರ್ಮಸ್ಥಳ ಮಂಜುನಾಥ ದರ್ಶನ ಪಡೆದ ತರುಣ್- ಸೋನಲ್; ದೇವಸ್ಥಾನಕ್ಕೂ ಮ್ಯಾಚಿಂಗ್ ಯಾಕೆ ಎಂದ ನೆಟ್ಟಿಗರು
ಧರ್ಮಸ್ಥಳ ಮಂಜುನಾಥ ದರ್ಶನ ಪಡೆದ ತರುಣ್- ಸೋನಲ್; ದೇವಸ್ಥಾನಕ್ಕೂ ಮ್ಯಾಚಿಂಗ್ ಯಾಕೆ ಎಂದ ನೆಟ್ಟಿಗರು
ಮಹಾ ಶಿವರಾತ್ರಿ ಹಬ್ಬದಂದು ಧರ್ಮಸ್ಥಳದಲ್ಲಿ ಸಿನಿಮಾ ತಾರೆಯರು. ಸೋನಲ್, ತರುಣ್ ಮತ್ತು ಶ್ರುತಿ ನೀಡಿ ಜನರು ಫುಲ್ ಖುಷಿ....

2024 ಆಗಸ್ಟ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಧರ್ಮಸ್ಥಳ ಮಂಜುನಾಥ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಪೂಜೆಯಲ್ಲಿ ಹಲವು ಸಿನಿಮಾ ತಾರೆಯರು ಭಾಗಿಯಾಗಿದ್ದರು.
ತರುಣ್ ಸುಧೀರ್, ಸೋನಲ್, ನಟಿ ಶ್ರುತಿ ಕೃಷ್ಣ ಪುತ್ರಿ ಗೌರಿ ಸೇರಿದಂತೆ ಕೆಲವು ಸ್ನೇಹಿತರು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದಿದ್ದಾರೆ.
ದರ್ಶನ ಪಡೆದು ಹೊರ ಬರುವ ದಾರಿಯಲ್ಲಿ ಒಟ್ಟಾಗಿ ನಿಂತು ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. 'ಓಂ ನಮಃ ಶಿವಾಯ ಸರ್ವರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು' ಎಂದು ಸೋನಲ್ ಬರೆದುಕೊಂಡಿದ್ದಾರೆ.
ಜನರಿಗೆ ಗಮನ ಸೆಳೆದಿರುವುದು ಇವರು ದೇವಸ್ಥಾನಕ್ಕೆ ಭೇಟಿ ನೀಡಿರುವುದು ಅಲ್ಲ ...ಇಬ್ಬರು ದೇವಸ್ಥಾನಕ್ಕೂ ಒಂದೇ ಬಣ್ಣದ ಉಡುಪು ಧರಿಸಿರುವುದಕ್ಕೆ.
'ಮದುವೆಯಲ್ಲಿ ಮ್ಯಾಚಿಂಗ್ ಓಕೆ, ಕಾರ್ಯಕ್ರಮಗಳಲ್ಲಿ ಮ್ಯಾಚಿಂಗ್ ಓಕೆ ಆದರೆ ಹಬ್ಬದ ದಿನ ದೇವಸ್ಥಾನಕ್ಕೆ ಹೋದರೂ ಮ್ಯಾಚಿಂಗ್ ಯಾಕೆ?' ಎಂದು ಪ್ರಶ್ನಿಸಿದ್ದಾರೆ.