34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್
ಕನ್ನಡ ಚಿತ್ರರಂಗದ ತಾರಾ ಜೋಡಿಗಳಾದ ಅಂಬರೀಷ್ ಮತ್ತು ಸುಮಲತಾ ಇಂದು 34ನೇ ವರ್ಷದ ವೆಡ್ಡಿಂಗ್ ಆನಿವರ್ಸರಿಯನ್ನು ಆಚರಿಸಿಕೊಳ್ಳುತ್ತಿದ್ದು, ಅಂಬಿ ಅಗಲಿ ಏಳು ವರ್ಷಗಳಾಗಿದ್ದು, ಈ ಸಂದರ್ಭದಲ್ಲಿ ಪತಿಯನ್ನು ನೆನೆದು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ ಸುಮಲತಾ.

ಸುಮಲತಾ ಅಂಬರೀಷ್
ಕನ್ನಡ ಚಿತ್ರರಂಗದ ಮೋಸ್ಟ್ ಪಾಲ್ಯುಲರ್ ಜೋಡಿಗಳು ಅಂದ್ರೆ ಅದು ಅಂಬರೀಷ್ ಮತ್ತು ಸುಮಲತಾ. ತಮ್ಮ ಲವ್ ಸ್ಟೋರಿಯಿಂದ ಯಿಂದ ಹಿಡಿದು, ಅಂಬಿ ಕೊನೆಯುಸಿರೆಳೆಯುವವರೆಗೂ ಅನ್ಯೋನ್ಯವಾಗಿ, ಪ್ರೀತಿಗೆ ಹೆಸರಾಗಿ ಬಾಳಿದ ಜೋಡಿ ಇವರು.
ವೆಡ್ಡಿಂಗ್ ಆನಿವರ್ಸರಿ
ಇದೀಗ ಡಿಸೆಂಬರ್ 8ರಂದು ಸುಮಲತಾ ಮತ್ತು ಅಂಬರೀಷ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬರೋಬ್ಬರಿ 34 ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಸುಮಲತಾ ಅಂಬಿ ನೆನಪಿನಲ್ಲಿ ಭಾವುಕ ಪತ್ರ ಬರೆದಿದ್ದಾರೆ.
34ನೇ ವಿವಾಹ ವಾರ್ಷೀಕೋತ್ಸವ
My dearest A , ಇಂದು, ನಮ್ಮಿಬ್ಬರ ಪ್ರಯಾಣದ 34 ವರ್ಷಗಳನ್ನು ಒಟ್ಟಿಗೆ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ನನ್ನ ಹೃದಯವು ನಿಮ್ಮ ಪ್ರೀತಿ ಮತ್ತು ನೆನಪುಗಳಿಂದ ತುಂಬಿ ತುಳುಕುತ್ತಿದೆ. ನೀವು ಇನ್ನು ಮುಂದೆ ನನ್ನ ಪಕ್ಕದಲ್ಲಿಲ್ಲದಿದ್ದರೂ, ನಿಮ್ಮ ಉಪಸ್ಥಿತಿಯು ನನ್ನ ಹೃದಯದಲ್ಲಿ ಶಾಶ್ವತವಾಗಿದೆ. ನಿಮ್ಮ ಪ್ರೀತಿ, ನಗು ಮತ್ತು ಪರಂಪರೆ ಪ್ರತಿದಿನ ನನಗೆ ಸ್ಫೂರ್ತಿ ನೀಡುತ್ತಲೇ ಇದೆ.
ನಮ್ಮನಗಲಿ ಏಳು ವರ್ಷಗಳು
ನೀವು ನಮ್ಮನ್ನು ಬಿಟ್ಟು ಹೋಗಿ ಏಳು ವರ್ಷಗಳು ಕಳೆದಿರಬಹುದು, ಆದರೆ ನಾವು ಒಟ್ಟಿಗೆ ಸೃಷ್ಟಿಸಿದ ನೆನಪುಗಳು ಇನ್ನೂ ಎದ್ದುಕಾಣುತ್ತವೆ. ನಾವು ಹಂಚಿಕೊಂಡ ಸಮಯ, ನಾವು ಬೆನ್ನಟ್ಟಿದ ಕನಸುಗಳು ಮತ್ತು ನಾವು ಪೋಷಿಸಿದ ಪ್ರೀತಿಗಾಗಿ ನಾನು ಕೃತಜ್ಞನಾಗಿದ್ದೇನೆ.
ತುಂಬಾನೆ ಮಿಸ್ ಮಾಡುತ್ತಿದ್ದೇನೆ
ನಿಮ್ಮ ಅನುಪಸ್ಥಿತಿಯು ತುಂಬಾ ನೋವುಂಟುಮಾಡುತ್ತದೆ, ವಿಶೇಷವಾಗಿ ಇಂದಿನಂತಹ ದಿನಗಳಲ್ಲಿ, ಆದರೆ ನೀವು ಮೇಲಿನಿಂದ ನನ್ನನ್ನು ನೋಡುತ್ತಿದ್ದೀರಿ ಎಂಬ ನೆನಪು ನನಗೆ ಸಮಾಧಾನ ನೀಡುತ್ತಿದೆ. ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುವುದಕ್ಕಿಂತ ಹೆಚ್ಚಾಗಿ ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ, ಆದರೆ ನಾವು ಒಟ್ಟಿಗೆ ನಿರ್ಮಿಸಿದ ಸುಂದರ ಜೀವನಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದು ಸುಮಲತಾ ಬರೆದುಕೊಂಡಿದ್ದಾರೆ.
ಅಂಬರೀಷ್ ಸುಮಲತಾ ಲವ್ ಸ್ಟೋರಿ
ಅಂಬರೀಸ್ ಮತ್ತು ಸುಮಲತಾ ಅವರು ಮೊದಲ ಬಾರಿಗೆ ಭೇಟಿಯಾಗಿದ್ದು 1984ರಲ್ಲಿ ತೆರೆಕಂಡ ಆಹುತಿ ಸಿನಿಮಾದ ಸೆಟ್ ನಲ್ಲಿ. ಆ ಸಿನಿಮಾ ಬಳಿಕ ಇಬಬ್ರ ನಡುವೆ ಸ್ನೇಹ ಬೆಳೆದುಕೊಂಡಿತು. ನಂತರ 1987ರಲ್ಲಿ ಮತ್ತೊಂದು ಸಿನಿಮಾದಲ್ಲಿ ಇಬ್ಬರು ಜೊತೆಯಾಗಿ ನಟಿಸಿದ್ದರು. ಆ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಶುರುವಾಯಿತು.
ಮದುವೆಯಾಗಿದ್ದು ಯಾವಾಗ?
ಇದೆಲ್ಲಾ ಆಗಿ ಎರಡು ವರ್ಷಗಳ ಬಳಿಕ ಇಬ್ಬರು ಮದುವೆ ಪ್ರಸ್ತಾಪ ಮಾಡಿ 1991 ಡಿಸೆಂಬರ್ 8 ರಂದು ಪ್ರೇಮಿಗಳು, ಅದ್ಧೂರಿಯಾಗಿ ಮದುವೆಯಾಗಿದ್ದರು.ಇದೀಗ ಮದುವೆಯಾಗಿ ಈ ಜೋಡಿ 34ನೇ ವರ್ಷ ಇದಾಗಿದೆ. ಆದರೆ ಕಳೆದ ಏಳು ವರ್ಷಗಳಿಂದ ಅಂಬಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಸುಮಲತಾ.
ಅಭಿಷೇಕ್ ಜನನ
ಇನ್ನು 1993ರಲ್ಲಿ ಸುಮಲತಾ - ಅಂಬರೀಶ್ ದಂಪತಿಗಳ ಜೀವನದಲ್ಲಿ ಅಭಿಷೇಕ್ ಆಗಮನವಾಯಿತು. ಇದೀಗ ಅಭಿಷೇಕ್ ಅವರು ಅವಿವಾ ಅವರನ್ನು ಮದುವೆಯಾಗಿದ್ದು, ಈ ಜೋಡಿಗೆ ಮುದ್ದಾದ ಮಗ ಕೂಡ ಇದ್ದಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

