'ಹೆಬ್ಬುಲಿ' ನಟಿ ಅಮಲಾ ಪೌಲ್ ಜೊತೆ ಸೆಲ್ಫಿ ಕ್ಲಿಕ್ ಮಾಡಿಕೊಂಡ ಕೋತಿ; ಫೋಟೋ ವೈರಲ್
ವೈರಲ್ ಆಯ್ತು ನಟಿ ಅಮಲಾ ಪೌಲ್ ಸೆಲ್ಫಿ ವಿತ್ ಕೋತಿ. ಒಂಟಿ ಪ್ರಯಾಣ ಎನ್ನುವವರಿಗೆ ಉತ್ತರ ಕೊಟ್ಟ ನಟಿ.......

2017ರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಜೋಡಿಯಾಗಿ ಹೆಬ್ಬುಲಿ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ತಮಿಳು ನಟಿ ಅಮಲಾ ಪೌಲ್.
ಕನ್ನಡದಲ್ಲಿ ಒಂದೇ ಸಿನಿಮಾ ನಟಿಸಿದ್ದರೂ ಅಮಲಾ ಕಂಡರೆ ಕನ್ನಡಿಗರಿಗೆ ತುಂಬಾನೇ ಇಷ್ಟ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
ಕೆಲವು ದಿನಗಳಿಂದೆ ಅಮಲಾ ಪೌಲ್ ಸೋಲೋ ಟ್ರಿಪ್ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲಿಯೂ ಸೆಲ್ಫಿ ಬಿಟ್ಟರೆ ಬೇರೇನೂ ಹಂಚಿಕೊಳ್ಳುತ್ತಿಲ್ಲ. ನೆಟ್ಟಿಗರು ಒತ್ತಾಯಕ್ಕೆ ಡಿಫರೆಂಟ್ ಆಗಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.
ಹೌದು! ಕೋತಿಯೊಂದು ಮೊಬೈಲ್ ಹಿಡಿದುಕೊಂಡು ಅಮಲಾ ಪೌಲ್ ಜೊತೆ ಸೆಲ್ಫಿ ಕ್ಲಿಕ್ ಮಾಡಿಕೊಳ್ಳುತ್ತಿದೆ. ಸ್ವತಃ ಅಮಲಾನೇ ಶಾಕ್ ಆಗಿರುವುದನ್ನು ಈ ಫೋಟೋದಲ್ಲಿ ನೋಡಬಹುದು.
'ನಿಜಕ್ಕೂ ನೀವು ಸೋಲೋ ಟ್ರಿಪ್ ಮಾಡುತ್ತಿದ್ದೀರಾ? ನಿಜ ಹೇಳಿ?' ಎಂದು ಜನರು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಅಮಲಾ ಸಾಕ್ಷಿಯಾಗಿ ಕೋತಿ ಜೊತೆಗಿರುವ ಸೆಲ್ಫಿ ಹಂಚಿಕೊಂಡು ನೋಡಿ ಎಂದಿದ್ದಾರೆ.
ಸೆಲೆಬ್ರಿಟಿಗಳ ಫನ್ನಿ ಫೋಟೋಗೆ ಕಾಮೆಂಟ್ ಮಾಡುವವರು ಹೆಚ್ಚು ಹೀಗಾಗಿ ಈ ಫೋಟೋಗೆ ಯಾರು ಕಾಮೆಂಟ್ ಮಾಡಬಾರದು ಎಂದು ಕಾಮೆಂಟ್ ಸೆಕ್ಷನ್‌ನ ಆಫ್ ಮಾಡಿದ್ದಾರೆ.