ಕಾಂತಾರದ ನಂತರ ಮೊದಲ ದೊಡ್ಡ ಹಿಟ್: ‘ಸು ಫ್ರಮ್ ಸೋ’ ಗೆಲುವಿನ ನಾಗಾಲೋಟ
ಕಾಂತಾರದ ಬಳಿಕ ಈ ಮಟ್ಟಿನ ಪ್ರದರ್ಶನ ಕಾಣುತ್ತಿರುವ ಮೊದಲ ಸಿನಿಮಾ ಸು ಫ್ರಮ್ ಸೋ ಎಂಬ ಮಾತುಗಳು ಕೇಳಿ ಬರುತ್ತಿವೆ. ನಾಗತಿಹಳ್ಳಿ ಚಂದ್ರಶೇಖರ್, ಯುವ ರಾಜ್‌ಕುಮಾರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಿನಿಮಾವನ್ನು ಕೊಂಡಾಡಿದ್ದಾರೆ.

‘ಸು ಫ್ರಮ್ ಸೋ’ ಗೆಲುವಿನ ನಾಗಾಲೋಟ ಮುಂದುವರಿದಿದೆ. ರಾಜ್ಯ, ಹೊರ ರಾಜ್ಯ, ಹೊರ ದೇಶಗಳಲ್ಲೂ ಯಶಸ್ವಿ ಪ್ರದರ್ಶನ ಕಂಡು ಅಂದಾಜು 35 ಕೋಟಿ ರು. ಗಳಿಕೆ ದಾಖಲಿಸಿದ್ದು, ಶೀಘ್ರ 50 ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ.
ವೀಕೆಂಡ್‌ನಲ್ಲಿ ಮುಂಜಾನೆಯ ಶೋಗಳೂ ಸೇರಿ ರಾಜ್ಯದಲ್ಲಿ ಬಹುತೇಕ ಶೋಗಳು ಸೋಲ್ಡ್ ಔಟ್ ಆಗಿದ್ದವು. ಬೆಂಗಳೂರಿನಲ್ಲಿ 550ಕ್ಕೂ ಹೆಚ್ಚು ಶೋಗಳಲ್ಲಿ ಸಿನಿಮಾ ತುಂಬಿದ ಗೃಹದ ಪ್ರದರ್ಶನ ಕಂಡಿವೆ. ಮಂಗಳೂರಿನಲ್ಲಿ 70 ಕಡೆ, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಮೊದಲಾದೆಡೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
‘ಕಾಂತಾರ’ದ ಬಳಿಕ ಈ ಮಟ್ಟಿನ ಪ್ರದರ್ಶನ ಕಾಣುತ್ತಿರುವ ಮೊದಲ ಸಿನಿಮಾವಿದು ಎಂಬ ಮಾತುಗಳು ಕೇಳಿ ಬರುತ್ತಿವೆ. ನಾಗತಿಹಳ್ಳಿ ಚಂದ್ರಶೇಖರ್, ಯುವ ರಾಜ್‌ಕುಮಾರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಿನಿಮಾವನ್ನು ಕೊಂಡಾಡಿದ್ದಾರೆ.
ತೆಲುಗು ರಾಜ್ಯಗಳಲ್ಲಿ ಆಗಸ್ಟ್ 8ರಿಂದ ‘ಸು ಫ್ರಮ್ ಸೋ’ ತೆಲುಗು ವರ್ಶನ್ ಬಿಡುಗಡೆಯಾಗಲಿದೆ. ಮೈತ್ರಿ ಮೂವೀಸ್ ಅಲ್ಲಿ ಸಿನಿಮಾ ವಿತರಣೆ ಮಾಡಲಿದೆ. ಹಿಂದಿ ವರ್ಶನ್ ಶೀಘ್ರ ರಿಲೀಸ್ ಆಗಲಿದೆ. ಎಎ ಫಿಲಂಸ್ ಉತ್ತರ ಭಾರತದಲ್ಲಿ ಸಿನಿಮಾ ವಿತರಿಸಲಿದೆ.
ಕೇರಳದಲ್ಲೂ ಈ ಸಿನಿಮಾದ ವಿಜಯ ಯಾತ್ರೆ ಮುಂದುವರಿದಿದೆ. ವೀಕೆಂಡ್‌ನಲ್ಲಿ ಕೊಚ್ಚಿಯಲ್ಲಿ ಕೆಲವು ಸ್ಕ್ರೀನ್‌ಗಳಲ್ಲಿ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ತಿರುವನಂತಪುರಂನಲ್ಲೂ ಹೌಸ್‌ಫುಲ್ ಪ್ರದರ್ಶನ ನಡೆದಿದೆ.