14ನೇ ವಯಸ್ಸಲ್ಲಿ ಅಮ್ಮನನ್ನು ಕಳೆದುಕೊಂಡ ಕೆಜಿಎಫ್ ನಟಿ... ಬಿಚ್ಚಿಟ್ರು ಕಣ್ಣೀರ ಕಥೆ
ತೆಲುಗಿನ ಹಿಟ್ 3 ಚಿತ್ರದ ಮೂಲಕ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿರುವ ಬೆಡಗಿ ಶ್ರೀನಿಧಿ ಶೆಟ್ಟಿ, 14ನೇ ವಯಸ್ಸಲ್ಲಿ ತಮ್ಮ ಅಮ್ಮನನ್ನು ಕಳೆದುಕೊಂಡ ಕುರಿತು ಹೇಳಿ ಭಾವುಕಾರಗಿದ್ದಾರೆ.

ಶ್ರೀನಿಧಿ ಶೆಟ್ಟಿ (Srinidhi Shetty) 2016ರ ಮಿಸ್ ಸೂಪ್ರನ್ಯಾಷನಲ್ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟರು. ಆದರೆ ಈ ಮಂಗಳೂರು ಬೆಡಗಿಗೆ ಹೆಸರು ತಂದುಕೊಟ್ಟಿದ್ದು ಸೂಪರ್ ಹಿಟ್ ಸಿನಿಮಾ ಕೆಜಿಎಫ್.
ಪ್ಯಾನ್ ಇಂಡಿಯಾ ಸಿನಿಮಾ (Pan India Cinema) ಆಗಿ ಹೆಸರು ಮಾಡಿದ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಕೆಜಿಎಫ್ 1 ಮತ್ತು 2 ರಲ್ಲಿ ರೀನಾ ದೇಸಾಯಿ ಆಗಿ ಮೋಡಿ ಮಾಡಿದ ಮೆಹಬೂಬ ಶ್ರೀನಿಧಿ ಶೆಟ್ಟಿ. ನಟಿಸಿದ ಮೊದಲ ಸಿನಿಮಾದಲ್ಲಿ ಜನಪ್ರಿಯತೆ ಪಡೆದರು ಶ್ರೀನಿಧಿ.
ಬಳಿಕ ತಮಿಳಿನಲ್ಲಿ ವಿಕ್ರಮ್ ಜೊತೆ ಕೋಬ್ರಾ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ನಾನಿ ಅಭಿನಯದ ಸದ್ಯ ಯಶಸ್ವಿಯಾಗಿ ಸಾಗುತ್ತಿರುವ ಹಿಟ್ 3 (Hit 3) ಸಿನಿಮಾದಲ್ಲಿ ಐಪಿಎಸ್ ಆಫಿಸರ್ ಆಗಿ ನಟಿಸಿದ್ದಾರೆ ಶ್ರೀನಿಧಿ ಶೆಟ್ಟಿ.
ಸದ್ಯ ಹಿಟ್ 3 ಪ್ರೊಮೋಷಗಾಗಿ ಹಲವು ಇಂಟರ್ವ್ಯೂಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ರೀನಿಧಿ ಇತ್ತೀಚೆಗೆ ಇಂಟರ್ವ್ಯೂ ಒಂದರಲ್ಲಿ ತಾವು 14ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡಿರುವ ಬಗ್ಗೆ ತಿಳಿಸಿ ಭಾವುಕರಾದರು.
ಶ್ರೀನಿಧಿ ಶೆಟ್ಟಿ ಹೆಚ್ಚಾಗಿ ತಮ್ಮ ತಂದೆಯ ಕುರಿತು ಹೇಳುತ್ತಲೇ ಇರುತ್ತಾರೆ. ನಟಿಯ ಇನ್’ಸ್ಟಾಗ್ರಾಂ ನೋಡಿದ್ರೆ, ಅಲ್ಲೂ ಸಹ ತಂದೆ ಜೊತೆಗಿನ ಫೋಟೊಗಳನ್ನು ಕಾಣಬಹುದು. ಆದರೆ ತಾಯಿಯ ಬಗ್ಗೆ ನಟಿ ಮಾತನಾಡಿದ್ದೇ ಕಡಿಮೆ.
ಶ್ರೀನಿಧಿ 10ನೇ ತರಗತಿಯಲ್ಲಿರೋವಾಗ, ತಾಯಿಯನ್ನು ಕಳೆದುಕೊಂಡರಂತೆ. (death of mother) ಆ ಸಂದರ್ಭದಲ್ಲಿ ಅವರಿಗೆ ದೇವರ ಮೇಲಿನ ಭಕ್ತಿ, ನಂಬಿಕೆ, ಎಲ್ಲವೂ ಒಂದೇ ಬಾರಿಗೆ ಛಿದ್ರವಾಗಿ ಹೋಗಿತ್ತಂತೆ. ಆ ಟೀನೇಜಲ್ಲಿ, ಅಮ್ಮ ಇಲ್ಲದ ನೋವಲ್ಲಿ, ಎಲ್ಲರಿಂದಲೂ, ಸುತ್ತಲಿನ ಎಲ್ಲಾ ವಿಷಯಗಳಿಂದಲೂ ಎಸ್ಕೇಪ್ ಆಗೋದಕ್ಕೆ ಸಾಕಷ್ಟು ಪ್ರಯತ್ನ ಪಟ್ಟರಂತೆ ಶ್ರೀನಿಧಿ.
ಆ ಸಂದರ್ಭದಲ್ಲಿ ಮನೆಯಲ್ಲಿ ಇರೋದಕ್ಕೆ ಶ್ರೀನಿಧಿಗೆ ಇಷ್ಟವಾಗಿರಲಿಲ್ಲವಂತೆ, ಅದಕ್ಕಾಗಿಯೆ, ಮನೆ, ಆ ಜಾಗ, ಆ ಊರು ಎಲ್ಲವನ್ನೂ ಬಿಟ್ಟು, ಬೆಂಗಳೂರಿಗೆ ಬಂದು ಸೇರಿದ್ದರು. ಇಲ್ಲಿನ ಹೊಸ ಜನ, ಹೊಸ ಮುಖ, ಹೊಸ ಜಾಗದಲ್ಲಿ ಇದ್ದುಕೊಂಡು ಹಳೆಯದನ್ನು ಮರೆಯೋದಕ್ಕೆ ಪ್ರಯತ್ನಿಸಿದರು ಶ್ರೀನಿಧಿ.
ಬೆಂಗಳೂರಿಗೆ ಬಂದ ನಂತರ ಶ್ರೀನಿಧಿ ಜೀವನ ಬದಲಾಯ್ತು. ಜೈನ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ ಇಂಜಿನಿಯರಿಂಗ್ ಮಾಡಿದ ನಟಿ ನಂತರ, ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟರು. ನಂತರ ಸಿನಿಮಾ ನಾಯಕಿಯಾಗಿ ಮಿಂಚಿದರು. ಇದೀಗ ನಟಿಯ ಕೈಯಲ್ಲಿ ಎರಡು ಸಿನಿಮಾಗಳಿವೆ, ತೆಲುಗಿನಲ್ಲಿ ಒಂದು ಸಿನಿಮಾ ಹಾಗೂ ಕನ್ನಡದಲ್ಲಿ ಸುದೀಪ್ (Kiccha Sudeep) ಜೊತೆಗೂ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ.