- Home
- Entertainment
- Sandalwood
- ಮೆಗಾ ಸ್ಟಾರ್ ಚಿರಂಜೀವಿಗೆ ಪದ್ಮ ವಿಭೂಷಣ ಪ್ರಶಸ್ತಿ; ಮನೆಗೆ ತೆರಳಿ ಶುಭಾಶಯ ತಿಳಿಸಿದ ಶಿವರಾಜ್‌ಕುಮಾರ್!
ಮೆಗಾ ಸ್ಟಾರ್ ಚಿರಂಜೀವಿಗೆ ಪದ್ಮ ವಿಭೂಷಣ ಪ್ರಶಸ್ತಿ; ಮನೆಗೆ ತೆರಳಿ ಶುಭಾಶಯ ತಿಳಿಸಿದ ಶಿವರಾಜ್‌ಕುಮಾರ್!
ಮೆಗಾ ಸ್ಟಾರ್ ಮನೆಯಲ್ಲಿ ಹ್ಯಾಟ್ರಿಕ್ ಹೀರೋ. ಭೋಜನ ಮಾಡುತ್ತಿರುವ ಫೋಟೋ ವೈರಲ್...

ತಮಿಳು ಸೂಪರ್ ಸ್ಟಾರ್, ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ಇತ್ತೀಚಿಗೆ ಭಾರತದ ಅತ್ಯುನ್ನತ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು.
ಹಲವರು ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. ಆದರೆ ನಟ ಶಿವರಾಜ್‌ಕುಮಾರ್ ಹೂಗುಚ್ಚು ಹಿಡಿದು ಹೈದರಾಬಾದ್ ನಿವಾಸಕ್ಕೆ ತೆರಳಿದ್ದಾರೆ.
ಚಿರಂಜೀವಿ ಮನೆಯಲ್ಲಿ ಶಿವಣ್ಣ ಮತ್ತು ಸ್ನೇಹಿತರು ಒಟ್ಟಿಗೆ ಊಟ ಮಾಡುತ್ತಿದ್ದಾರೆ. ಮೆಗಾ ಸ್ಟಾರ್ ಹಿರಿಮಗಳು ಸುಶ್ಮಿತಾ ಕೊನಿಡೆಲಾ ಊಟ ಬಿಡಿಸುತ್ತಿರುವದನ್ನು ಫೋಟೋದಲ್ಲಿ ನೋಡಬಹುದು.
'ಶಿವರಾಜ್‌ಕುಮಾರ್ ಅವರು ಹೈದರಾಬಾದ್‌ನ ಮನೆಗೆ ಬಂದು ನನಗೆ ಶುಭ ಹಾರೈಸಿದ್ದಾರೆ. ನಾವು ಒಟ್ಟಿಗೆ ಊಟ ಮಾಡಿದೆವು. ಕುಶಲೋಪರಿ ವಿಚಾರಿಸಿಕೊಂಡೆವು'
'ಎರಡೂ ಕುಟುಂಬದ ಆತ್ನೀಯತೆ ಬಗ್ಗೆ ಮಾತನಾಡಿದೆವು. ಡಾ.ರಾಜ್‌ಕುಮಾರ್ ಜೊತೆ ಕಳೆದ ಕ್ಷಣಗಳು ಸದಾ ನೆನಪಿನಲ್ಲಿ ಇರುತ್ತದೆ' ಎಂದು ಚಿರಂಜೀವಿ ಬರೆದುಕೊಂಡಿದ್ದಾರೆ.
ಡಾ.ರಾಜ್‌ಕುಮಾರ್ ಫ್ಯಾಮಿಲಿ ಮತ್ತು ಚಿರಂಜೀವಿ ಫ್ಯಾಮಿಲಿ ಉತ್ತಮ ಸಂಬಂಧ ಹೊಂದಿದ್ದಾರೆ. ಇಬ್ಬರು ಪರಸ್ಪರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.