Puneeth Rajkumar James: ಜೇಮ್ಸ್ ಪುನೀತ್‌ಗೆ ದನಿ ನೀಡಿದ ಅಣ್ಣ ಶಿವಣ್ಣ
ಬೆಂಗಳೂರು(ಫೆ. 02) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಮತ್ತು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ (Shiva Raj Kumar) ಅಭಿಮಾನಿಗಳಿಗೆ ಒಂದು ದೊಡ್ಡ ಸುದ್ದಿ ಇಲ್ಲಿದೆ. ಪುನೀತ್ ರ ಜೇಮ್ಸ್ (James)ಚಿತ್ರಕ್ಕೆ ಶಿವಣ್ಣ ದನಿ ನೀಡಿದ್ದಾರೆ.
ಜೇಮ್ಸ್ ಚಿತ್ರಕ್ಕೆ ನಟ ಶಿವರಾಜ್ ಕುಮಾರ್ ಡಬ್ಬಿಂಗ್ ಮಾಡಿದ್ದು ಅಪ್ಪು ಪಾತ್ರಕ್ಕೆ ವಾಯ್ಸ್ ನೀಡಿದ್ದಾರೆ. ಚಿತ್ರತಂಡ ಶಿವರಾಜ್ ಕುಮಾರ್ ದನಿ ನೀಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದೆ.
ಬಹದ್ದೂರ್ ಚೇತನ್ ನಿರ್ದೇಶನದ ಸಿನಿಮಾ ಬಿಡುಗಡೆಯಾಗುವ ಹಂತದಲ್ಲಿದೆ. ಎರಡುವರೆ ದಿನಗಳ ಕಾಲ ಅಪ್ಪು ಪಾತ್ರಕ್ಕೆ ವಾಯ್ಸ್ ಡಬ್ ಶಿವರಾಜ್ ಕುಮಾರ್ ವೈಸ್ ಡಬ್ ಮಾಡಿದ್ದಾರೆ.
Shivaraj kumar dubbed for puneeth rajkumar james Sandalwood
ಮಾರ್ಚ್ 17 ಕ್ಕೆ ಪುನೀತ್ ಹುಟ್ಟುಹಬ್ಬದ ದಿನ ಜೇಮ್ಸ್ ತೆರೆಗೆ ಬರೋ ಸಾಧ್ಯತೆ ಇದೆ. ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಧ್ವನಿಯನ್ನು ಉಳಿಸಲು ಸಿನಿಮಾತಂಡ ಸಾಕಷ್ಟು ಪ್ರಯತ್ನ ಮಾಡಿತ್ತು.
Shivaraj kumar dubbed for puneeth rajkumar james Sandalwood
ಶೂಟಿಂಗ್ ಸಮಯದಲ್ಲಿ ಪುನೀರ್ ಮಾತಮಾಡಿದ್ದ ಡೈಲಾಗ್ ಗಳನ್ನೇ ಹೊಂದಿಸಲು ಸಾಧ್ಯವಾ ಎಂಬ ಯತ್ನವನ್ನು ಮಾಡಿತ್ತು. ಆದರೆ ಇದೀಗ ಶಿವಣ್ಣ ದನಿ ನೀಡಿದ್ದು ಚಿತ್ರದ ಮೇಲೆ ಸಹಜವಾಗಿಯೇ ನಿರೀಕ್ಷೆ ಇದೆ .
ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಚಿತ್ರಕ್ಕೆ ರಾಜಮೌಳಿ ದಾರಿ ಮಾಡಿಕೊಟ್ಟಿದ್ದರು/ ಈ ಮೊದಲು ಮಾರ್ಚ್ 18 ಕ್ಕೆ ಆರ್ ಆರ್ ಆರ್ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ರಾಜಮೌಳಿ ದಿನಾಂಕ ಬದಲಿದಿದ್ದರು.