- Home
- Entertainment
- Sandalwood
- ಡೆವಿಲ್ ಸೆಟ್‌ನಲ್ಲಿ ತಲೆ ಸುತ್ತಿ ಬಿದ್ದ ಪೂರ್ಣ; ಗರ್ಭಿಣಿ ಎಂದ ಕ್ಷಣ ನೆನಪಿಸಿಕೊಂಡ ನಟಿ!
ಡೆವಿಲ್ ಸೆಟ್‌ನಲ್ಲಿ ತಲೆ ಸುತ್ತಿ ಬಿದ್ದ ಪೂರ್ಣ; ಗರ್ಭಿಣಿ ಎಂದ ಕ್ಷಣ ನೆನಪಿಸಿಕೊಂಡ ನಟಿ!
ಡೆವಿಲ್ ಸಿನಿಮಾ ನನಗೆ ತುಂಬಾ ಕ್ಲೋಸ್ ಕಾರಣ ನಾನು ಗರ್ಭಿಣಿ ಆಗಿದ್ದೇ ಅಗ ಎಂದು ಶಮ್ನಾ ಖಾಸಿಂ ರಿವೀಲ್ ಮಾಡಿದ್ದಾರೆ.

ಬಹು ಭಾಷಾ ನಟಿ ಶಮ್ನಾ ಖಾಸಿಂ ದಿ ಡೆವಿಲ್ ಸಿನಿಮಾ ಚಿತ್ರೀಕರಣ ಮಾಡುವಾಗ ಗರ್ಭಿಣಿ ಆಗಿದ್ದು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಕನ್ನಡಿಗರಿಗೆ ಜೋಶಿ ಚಿತ್ರದ ಪೂರ್ಣ ಎಂದೇ ಪರಿಚಯವಾಗಿರುವ ಶಮ್ನಾ ರಮೇಶ್ ಅರವಿಂದ್ ನಟನೆಯ 100ನೇ ಚಿತ್ರದಲ್ಲಿ ನಟಿಸಿದ್ದಾರೆ.
ದಿ ಡೆವಿಲ್ ಸಿನಿಮಾ ಮತ್ತು ಚಿತ್ರತಂಡವನ್ನು ನಾನು ಎಂದೂ ಮರೆಯುವುದಿಲ್ಲ. ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ನನಗೆ ತಲೆ ಸುತ್ತು ಕಂಡು ಬಂತ್ತು.
ತಕ್ಷಣವೇ ಚಿತ್ರತಂಡ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ವೈದ್ಯರು ಪರೀಕ್ಷಿಸಿದ ಮೇಲೆ ನಾನು ಗರ್ಭಿಣಿ ಎಂದು ಖಚಿತವಾಯಿತ್ತು.
ಆಗ ಸೆಟ್‌ನಲ್ಲಿದ್ದ ಪ್ರತಿಯೊಬ್ಬರೂ ಗಾಬರಿ ಆದರು. ಅಲ್ಲಿಂದ ಜರ್ನಿ ಶುರುವಾಗಿತ್ತು. ನಾನು ಮಗುವಿಗೆ ಜನ್ಮ ನೀಡಲು ಡೆವಿಲ್ ಸಿನಿಮಾನೇ ಕಾರಣ.
ಡೆವಿಲ್ ಸಿನಿಮಾದಲ್ಲಿ ನಟಿಸುವಾಗಲೇ ನಾನು ಪ್ರಗ್ನೆಂಟ್ ಆದೆ ಎಂದು ಯುಟ್ಯೂಬ್ ಚಾನೆಲ್ ಸಂದರ್ಶನವೊಂದರಲ್ಲಿ ಶಮ್ನಾ ಹೇಳಿದ್ದಾರೆ.
2022 ಜೂನ್ 12ರಂದು ಶಮ್ನಾ ಮತ್ತು ಖ್ಯಾತ ಉದ್ಯಮಿ ಶಾನಿದ್ ಆಸಿಫ್ ಅಲಿ ದುಬೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಮುದ್ದಾದ ಮಗನಿದ್ದಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.