- Home
- Entertainment
- Sandalwood
- ಹಿರಿಯ ನಟಿ ಬಿ.ಸರೋಜಾದೇವಿ ಮೊಮ್ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್
ಹಿರಿಯ ನಟಿ ಬಿ.ಸರೋಜಾದೇವಿ ಮೊಮ್ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್
ಬಿ ಸರೋಜಾದೇವಿ ಅವರ ಮುದ್ದಿನ ಮೊಮ್ಮಗಳು ಜನ್ಮದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಮೊಮ್ಮಗಳು ಸಮೈರಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಹಾಜರಿದ್ದರು.

ಹಿರಿಯ ನಟಿ ಬಿ ಸರೋಜಾದೇವಿ ಸದ್ಯ ಸಿನಿಮಾಗಳಿಂದ ದೂರ ಇದ್ದಾರೆ. ಅನೇಕ ವರ್ಷಗಳ ಕಾಲ ಕಲಾಸೇವೆ ಮಾಡಿರುವ ನಟಿ ಬಿ ಸರೋಜಾ ದೇವಿ ಸದ್ಯ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ.
ಸರೋಜಾ ದೇವಿ ಮಕ್ಕಳು ಮತ್ತು ಮೊಮ್ಮಕ್ಕಳ ಜೊತೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ಬಹುಭಾಷಾ ನಟಿ ಸರೋಜಾ ದೇವಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡವರು. ಡಾ.ರಾಜ್ ಕುಮಾರ್ ಯಿಂದ ದಕ್ಷಿಣದ ಘಟಾನುಘಟಿ ಸ್ಟಾರ್ ಗಳ ತೆರೆಹಂಚಿಕೊಂಡಿದ್ದಾರೆ.
ಅದ್ಭುತ ಪಾತ್ರಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ರಂಜಿಸಿರುವ ನಟಿ ಸರೋಜಾ ದೇವಿ ಈಗಲೂ ಬಣ್ಣ ಹಚ್ಚಿದರೆ ಅದೇ ಅಭಿನಯ, ಉತ್ಸಾಹ. ಆದರೀಗ ಅವರು ಬಣ್ಣದ ಲೋಕದಿಂದ ದೂರ ಇದ್ದಾರೆ. ಹಾಗಂತ ಸಿನಿರಂಗದ ನಂಟು ಕಡಿದುಕೊಂಡಿಲ್ಲ. ಇದಕ್ಕೆ ಸಾಕ್ಷಿ ಮೊಮ್ಮಗಳ ಹುಟ್ಟುಹಬ್ಬದ ಸಂಭ್ರಮ.
ಬಿ ಸರೋಜಾದೇವಿ ಅವರ ಮುದ್ದಿನ ಮೊಮ್ಮಗಳು ಜನ್ಮದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಮೊಮ್ಮಗಳು ಸಮೈರಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಹಾಜರಿದ್ದರು.
ಹಿರಿಯ ನಟಿಯ ಮೊಮ್ಮಗಳ ಹುಟ್ಟುಹಬ್ಬ ಅಂದರೆ ಸಿನಿಮಾಗಣ್ಯರು ಇಲ್ಲದೆ ಇರುತ್ತಾರಾ. ಸಮೈರಾ ಬರ್ತಡೇಗೂ ಅನೇಕ ಗಣ್ಯರು ಹಾಜರಾಗಿದ್ದರು. ನಟ ಪ್ರಿಯಾಂಕಾ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ದಂಪತಿ, ಅಮೂಲ್ಯೂ, ಪ್ರೇಮ್ ಪತ್ನಿ ಸೇರಿದಂತೆ ಅನೇಕ ಸಿನಿ ಗಣ್ಯರು ಸಮೈರಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಅಂದಹಾಗೆ ಸಮೈರಾಗೆ ಈ ಬಾರಿ 2ನೇ ವರ್ಷದ ಹುಟ್ಟುಹಬ್ಬ. ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದರು. ಆಗಲು ಅನೇಕ ಸಿನಿ ಗಣ್ಯರು ಹಾಜರಾಗಿ ಸಮೈರಾಗೆ ವಿಶ್ ಮಾಡಿದ್ದರು. ಈ ಬಾರಿ ಕೂಡ ಸ್ಯಾಂಡಲ್ ವುಡ್ ಗಣ್ಯರ ನಡುವೆ ಜನ್ಮ ದಿನ ಆಚರಿಸಲಾಗಿದೆ.
ನಟಿ ಸರೋಜಾ ದೇವಿ ಕೊನೆಯದಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ 2019ರಲ್ಲಿ ರಿಲೀಸ್ ಆಗಿತ್ತು. ಬಳಿಕ ಮತ್ತೆ ಬಣ್ಣ ಹಚ್ಚಿಲ್ಲ. ಇನ್ನು ತಮಿಳು ಕಿರುತೆರೆ ಶೋನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಮತ್ತೆಲ್ಲೂ ಕಾಣಿಸಿಕೊಂಡಿಲ್ಲ.
b sarojadevi
ಸದ್ಯ ಮೊಮ್ಮಮಗಳ ಜನ್ಮದಿನ ಸಂಭ್ರಮದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ನನ್ನ ರಾಜಕುಮಾರಿಯ 2ನೇ ವರ್ಷದ ಹುಟ್ಟುಹಬ್ಬ ಎಂದು ಹೇಳಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮಾಡಿ ಹುಟ್ಟುಹಬ್ಬದ ವಿಶ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.