ಹಿರಿಯ ನಟಿ ಲಕ್ಷ್ಮೀ ಕೆನ್ನೆಗೆ ಮುತ್ತಿಟ್ಟು ‘My inspiration’ ಎಂದ ಸಂಗೀತಾ ಅನಿಲ್
ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಸಂಗೀತಾ ಅನಿಲ್ ಅವರು ಕನ್ನಡ ಚಿತ್ರರಂಗದ ಮೇರು ನಟಿ, ಹಿರಿಯ ಕಲಾವಿದೆ ಲಕ್ಷ್ಮೀ ಅವರ ಕೆನ್ನೆಗೆ ಮುತ್ತಿಟ್ಟು, ತಮ್ಮ ಪ್ರೇರಣೆ, ಕನಸಿನ ಮಹಿಳೆ ಎಂದು ಬರೆದುಕೊಂಡು ಒಂದಷ್ಟು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಹಿರಿಯ ನಟಿ ಲಕ್ಷ್ಮೀ
ಕನ್ನಡ, ತಮಿಳು, ತೆಲುಗು ಮತ್ತು ಮಲಯಾಲಂ ಸಿನಿಮಾ ಇಂಡಷ್ಟ್ರಿಯಲ್ಲಿ ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳನ್ನು ನೀಡಿ, ಮಹಾನಟಿಯಾಗಿ ಮೆರೆದ ನಟಿ ಲಕ್ಷ್ಮೀ, ಇದೀಗ ಕೊಂಚ ಸಮಯದಿಂದ ನಟಿಯಾಗಿ ಕಾಣಿಸಿಕೊಂಡಿದ್ದು, ಕಡಿಮೆ, ಇದೀಗ ನಟಿ ಸಂಗೀತಾ ಅನಿಲ್ ಅವರು ಲಕ್ಷ್ಮೀ ಜೊತೆ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
ಸಂಗೀತಾ ಅನಿಲ್
ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಟಿ ಸಂಗೀತಾ ಅನಿಲ್ ಸೋಶಿಯಲ್ ಮೀಡಿಯಾದಲ್ಲಿ ಹಿರಿಯ ನಟಿ ಲಕ್ಷ್ಮೀ ಜೊತೆಗಿನ ಶೂಟಿಂಗ್ ಸೆಟ್ ನಲ್ಲಿ ಕುಳಿತಿರುವ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಮುದ್ದಾದ ಕ್ಯಾಪ್ಶನ್ ಕೂಡ ಬರೆದಿದ್ದಾರೆ.
ಲಕ್ಷ್ಮೀ ಕೆನ್ನೆಗೆ ಮುತ್ತಿಟ್ಟ ಸಂಗೀತಾ
ಫೋಟೋಗಳನ್ನು ಸಂಗೀತಾ ಅನಿಲ ನಟಿ ಲಕ್ಷ್ಮೀ ಕೆನ್ನೆಗೆ ಮುತ್ತಿಡುತ್ತಿರುವ, ಲಕ್ಷ್ಮೀಯವರನ್ನು ಬಿಗಿದಪ್ಪಿಕೊಂಡಿರುವ ಒಂದಷ್ಟು ಫೋಟೊಗಳಿವೆ. ಜೊತೆಗೆ ನಟಿ ಕ್ಯಾಪ್ಶನ್ ನಲ್ಲಿ ‘ನನ್ನ ಪ್ರೇರಣೆ, ನನ್ನ ಕನಸಿನ ಮಹಿಳೆ, ಲಕ್ಷ್ಮೀ ಅಮ್ಮನಿಂದ ಹೆಚ್ಚಿನ ವಿಷಯಗಳನ್ನು ಕಲಿಯಲು ಅವಕಾಶ ಸಿಕ್ಕಿದೆ’ ಎಂದು ಬರೆದುಕೊಂಡಿದ್ದಾರೆ.
ಅಮ್ಮ-ಮಗಳಂತಿದ್ದೀರಿ ಎಂದ ಫ್ಯಾನ್ಸ್
ಲಕ್ಷ್ಮೀ ಮತ್ತು ಸಂಗೀತ ಅವರ ಈ ಫೋಟೊಗಳನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದು, ನಿಮ್ಮ ಮುಖ ಒಂದೇ ರೀತಿಯಾಗಿದೆ. ನೀವಿಬ್ಬರು ನಿಜವಾದ ಅಮ್ಮ-ಮಗಳಂತೆ ಕಾಣುವಿರಿ. ಇಬ್ಬರು ಜೊತೆಯಾಗಿ ನಟಿಸುತ್ತಿರುವದನ್ನು ನೋಡುವುದೇ ಚೆಂದ ಎಂದಿದ್ದಾರೆ. ಆದರೆ ಇದು ಯಾವ ಚಿತ್ರದ ಶೂಟಿಂಗ್, ಯಾವಾಗ ನಡೆಯಿತು ಎನ್ನುವ ಬಗ್ಗೆ ಮಾಹಿತಿ ಇಲ್ಲ.
ಇಬ್ಬರ ಲೆಜೆಂಡರಿ ನಟಿಯರು
ನಟಿ ಲಕ್ಷ್ಮೀ ನಟನೆಯ ಬಗ್ಗೆ ಎರಡು ಮಾತಿಲ್ಲ. ಅದು ಅಳುವಂತಹ ಪಾತ್ರವಾಗಲಿ, ರೆಬೆಲ್ ಆಗಿರುವಂತಹ ಪಾತ್ರವಾಗಲಿ, ಎಂತಹುದೇ ಪಾತ್ರವನ್ನು ಕೊಟ್ಟರು ಆದ್ಭುತವಾಗಿ ನಿರ್ವಹಿಸುವ ಅದ್ಭುತ ನಟಿ ಲಕ್ಷ್ಮೀ. ಇನ್ನು ಸಂಗೀತಾ ಅವರು ಕೂಡ ಪೋಷಕ ಪಾತ್ರದಲ್ಲಿ ಗುರುತಿಸಿಕೊಂಡರೂ ಸಹ ಅವರೊಬ್ಬ ಅದ್ಭುತ ನಟಿ ಅನ್ನೋದು ಸುಳ್ಳಲ್ಲ.
ನಟಿ ಲಕ್ಷ್ಮೀ ನಟಿಸಿದ ಕನ್ನಡದ ಟಾಪ್ ಸಿನಿಮಾಗಳು
ಗೋವಾದಲ್ಲಿ ಸಿಐಡಿ 999, ನಾ ನಿನ್ನ ಮರೆಯಲಾರೆ, ನಾ ನಿನ್ನ ಬಿಡಲಾರೆ, ಚಂದನದ ಗೊಂಬೆ, ಪಲ್ಲವಿ ಅನುಪಲ್ಲವಿ, ಮುದುಡಿದ ತಾವರೆ ಅರಳಿತು, ಬೆಂಕಿಯ ಬಲೆ, ವಂಶಿ ಇತ್ಯಾದಿ ಸಿನಿಮಾಗಳಲ್ಲಿ ನಟಿಸಿ, ಕನ್ನಡಿಗರನ್ನು ಅಳಿಸಿ, ನಗಿಸಿ, ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

