ಡಿಂಪಲ್ ಕ್ವೀನ್ ರಚಿತಾ ರಾಮ್ ಹಣೆ ಮೇಲೆ ಮೂರು ನಾಮ ಎಳೆದವರು ಯಾರು?
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ ಮತ್ತು ಬ್ಯೂಟಿಗೆ ಹೆಸರುವಾಸಿಯಾಗಿದ್ದಾರೆ. ಇದೀಗ ರಚ್ಚು ವಿಶೇಷ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನ ನೋಡಿರೋ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ರಚಿತಾ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ನಟಿ ಇತ್ತೀಚೆಗೆ ಸುಂದರವಾಗಿರುವ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋದ ಜೊತೆಗೆ ಗೋವಿಂದ ಹರೆ ಗೋವಿಂದ ಎಂದು ಕ್ಯಾಪ್ಶನ್ ಕೂಡಾ ಬರೆದಿದ್ದಾರೆ.
ರಚಿತಾ ರಾಮ್ ಹಣೆಗೆ ನಾಮ ಹಾಕಿಕೊಂಡು ಸುಂದರವಾಗಿ ಸ್ಮೈಲ್ ಮಾಡಿದ್ದಾರೆ. ಈ ಫೋಟೋ ನೋಡಿದ ಅವರ ಅಭಿಮಾನಿಗಳು ಕ್ಯೂಟ್ ರಾಧೆ ಎಂದು ಹೊಗಳಿ ಕಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವು ನೆಟ್ಟಿಗರು ಗೋವಿಂದ ಗೋವಿಂದ, ನಿಮ್ಮ ಹಣೆ ಮೇಲೆ ಮೂರು ನಾಮ ಎಳೆದವರು ಯಾರು ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ರಚ್ಚು ಫೋಟೋಗಳು ತುಂಬಾ ಸುಂದರವಾಗಿ ಮೂಡಿಬಂದಿದೆ.
ಸಿಂಪಲ್ ಉಡುಗೆಯಲ್ಲಿ ರಚಿತಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು, ಹೆಚ್ಚೇನೂ ಮೇಕಪ್ ಮಾಡದೆ ಹಣೆಗೆ ನಾಮವನ್ನು ಹಚ್ಚಿಕೊಂಡಿದ್ದಾರೆ. ರಚ್ಚರನ್ನು ಗುಳಿಕೆನ್ನೆಯಲ್ಲಿ ಕಂಡು ಫ್ಯಾನ್ಸ್ ಕಳೆದೇ ಹೋಗಿದ್ದಾರೆ.
ರಚಿತಾ ರಾಮ್ ಅವರ ಕ್ಯಾಂಡಿಡ್ ಮೊಮೆಂಟ್ಗಳು ತುಂಬಾ ಲವ್ಲೀಯಾಗಿ ಮೂಡಿಬಂದಿವೆ. ಕೆಲವರು ನಟಿಯ ಈ ದೈವಿಕವಾಗಿರುವ ಲುಕ್ ನೋಡಿ ರಚಿತಾ ಏನಾದ್ರೂ ಆಧ್ಯಾತ್ಮದತ್ತ ವಾಲಿದ್ರಾ ಎಂದು ಕೇಳಿದ್ದಾರೆ.
ರಚಿತಾ ರಾಮ್ ಅವರು ಸ್ಯಾಂಡಲ್‌ವುಡ್‌ನ ಬೇಡಿಕೆಯ ನಟಿ. ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿರುವ ರಚಿತಾ ರಾಮ್ ಅವರು ಹಲವಾರು ಸಿನಿಮಾಗಳನ್ನು ಮಾಡಿ ಕನ್ನಡ ಸಿನಿಪ್ರೇಕ್ಷಕರನ್ನು ರಂಜಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.