- Home
- Entertainment
- Sandalwood
- ನವರಾತ್ರಿಗೆ ನವ ಸೀರೆಯುಟ್ಟ ತುಪ್ಪದ ಬೆಡಗಿ: ಬ್ಲೌಸ್ ಇಲ್ಲದೇ ರೇಷ್ಮೆ ಸೀರೆ ತೊಟ್ಟ Ragini Dwivedi
ನವರಾತ್ರಿಗೆ ನವ ಸೀರೆಯುಟ್ಟ ತುಪ್ಪದ ಬೆಡಗಿ: ಬ್ಲೌಸ್ ಇಲ್ಲದೇ ರೇಷ್ಮೆ ಸೀರೆ ತೊಟ್ಟ Ragini Dwivedi
ದಸರಾ ಹಬ್ಬವನ್ನ ಸ್ಯಾಂಡಲ್ವುಡ್‌ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅದ್ಭುತವಾಗಿಯೇ ಸೆಲೆಬ್ರೇಟ್ ಮಾಡಿದ್ದಾರೆ. ಈ ಮೂಲಕ 9 ದಿನವೂ 9 ಬಣ್ಣದ ಸೀರೆಯುಟ್ಟು ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ದಸರಾ ಹಬ್ಬಕ್ಕೆ ಅದ್ಭುತವಾಗಿಯೇ ರೆಡಿ ಆಗಿದ್ದಾರೆ. ಒಂಬತ್ತು ದಿನದಲ್ಲಿ ಒಂಬತ್ತು ಬಣ್ಣದ ಸೀರೆಯುಟ್ಟು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಪ್ರತಿ ದಿನ ಶೇರ್ ಮಾಡಿಕೊಂಡಂತೆ ಇದೀಗ ಮತ್ತಷ್ಟು ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ.
ರಾಗಿಣಿ ದ್ವಿವೇದಿ ನವರಾತ್ರಿ ಹಬ್ಬಕ್ಕಾಗಿಯೇ ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಮೂಲಕ ಈ ಸಲದ ದಸರಾ ಹಬ್ಬವನ್ನ ವಿಶೇಷವಾಗಿಯೇ ಸೆಲೆಬ್ರೇಟ್ ಮಾಡಿದ್ದಾರೆ. ನೀವು ಥೇಟ್ ದೇವಿಯಂತೆ ಕಾಣಿಸ್ತೀರಾ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ರಾಗಿಣಿ ದ್ವಿವೇದಿ 9 ದಿನಕ್ಕಾಗಿಯೇ 9 ಸೀರೆಯನ್ನ ಉಟ್ಟುಕೊಂಡು ಸ್ಪೆಷಲ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಹಾಗಾಗಿಯೇ ರಾಗಿಣಿ ಇನ್ನಷ್ಟು ಮತ್ತಷ್ಟು ಅನ್ನುವ ಹಾಗೆ ಸುಂದರವಾಗಿಯೇ ಕಾಣಿಸಿಕೊಂಡು ತಮ್ಮ ಅಭಿಮಾನಿಗಳ ಹೃದಯ ಕದ್ದಿದ್ದಾರೆ,
ರಾಗಿಣಿ ದ್ವಿವೇದಿ ಸದ್ಯ ವೃಷಭ ಸಿನಿಮಾದ ಶೂಟಿಂಗ್ ಅಲ್ಲಿಯೇ ಬ್ಯುಸಿ ಇದ್ದಾರೆ. ಇವರ ಇನ್ನೊಂದು ಸಿನಿಮಾದ ಶೂಟಿಂಗ್ ಹೊರ ದೇಶದಲ್ಲಿಯೇ ನಡೆಯುತ್ತಿದೆ. ನಂದ್ ಕಿಶೋರ್ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ.
ರಾಗಿಣಿ ದ್ವಿವೇದಿ ಒಪ್ಪಿರೋ ವೃಷಭ ಸಿನಿಮಾ ಪ್ಯಾನ್ ಇಂಡಿಯಾವಾಗಿದ್ದು, ಮಲೆಯಾಳಂ ಮತ್ತು ತೆಲುಗು ಭಾಷೆಯಲ್ಲಿ ಈ ಚಿತ್ರ ತಯಾರಾಗುತ್ತಿದೆ. ಆ ಬಳಿಕವೇ ಇತರ ಭಾಷೆಗೆ ಚಿತ್ರ ಡಬ್ಬಿಂಗ್ ಆಗಿ ರಿಲೀಸ್ ಆಗುತ್ತದೆ.
ರಾಗಿಣಿ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, 2009 ರಲ್ಲಿ 'ವೀರ ಮದಕರಿ' ಚಿತ್ರದಿಂದ ಸಿನಿಪಯಣ ಆರಂಭಿಸಿದ ರಾಗಿಣಿ ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ರಾಗಿಣಿ ದ್ವಿವೇದಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಖಾತೆಯಲ್ಲಿಯೇ ಪ್ರತಿ ದಿನದ ಫೋಟೋಗಳನ್ನ ಕೂಡ ಇದೀಗ ಹಂಚಿಕೊಂಡಿದ್ದಾರೆ ಅಂತಲೇ ಹೇಳಬಹದು.
2008ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ರಾಗಿಣಿ ಹೈದಾರಾಬಾದಿನಲ್ಲಿ ಜರುಗಿದ ಫೆಮಿನಾ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಆದವರು. 2009ರಲ್ಲಿ ಮುಂಬೈನಲ್ಲಿ ಜರುಗಿದ ಫೆಮಿನಾ ಮಿಸ್ ಬ್ಯೂಟಿಪುಲ್ ಹೇರ್ ಸ್ಪರ್ಧೆ ಗೆದ್ದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.