CCB ಟೆನ್ಶನ್ ಮಧ್ಯೆಯೂ ದಿಗಂತ್ ಶೂಟಿಂಗ್‌ನಲ್ಲಿ ಬ್ಯುಸಿ..!
ಸಿಸಿಬಿ, ಡ್ರಗ್ಸ್ ಮಾಫಿಯಾ, ಡ್ರಗ್ಸ್ ಕೇಸ್ ಕುರಿತ ಸಾಕಷ್ಟು ಟೆನ್ಶನ್ ಇದ್ರೂ ನಟ ದಿಗಂತ್ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಸೆಟ್‌ನಲ್ಲಿ ನಗುಮುಖದಿಂದ ಕೆಲಸ ಮಾಡ್ತಿದ್ದಾರೆ. ಇಲ್ನೋಡಿ ಫೋಟೋಸ್
ಸಿಸಿಬಿ ಟೆನ್ಶನ್ ಮಧ್ಯೆಯೂ ನಟ ದಿಗಂತ್ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.
ನಾಲ್ಕು ದಿನದಿಂದ ಮಾರಿಗೋಲ್ಡ್ ಸಿನಿಮಾದ ಶೂಟಿಂಗ್ ನಲ್ಲಿ ದಿಗಂತ್ ಭಾಗಿಯಾಗಿದ್ದಾರೆ.
ಬೆಂಗಳೂರಿನ ಹೆಚ್‌ಎಂಟಿ ಬಳಿ ಸಿನಿಮಾದ ಶೂಟಿಂಗ್ ನಡೆದಿತ್ತು. ಬೆಳಗ್ಗೆ ಕೂಡ ಮಾರಿಗೋಲ್ಡ್ ಸಿನಿಮಾದ ಶೂಟಿಂಗ್‌ಗೆ ದಿಗಂತ್ ಹಾಜರಾಗಿದ್ರು.
ನಂತರ ಸಿಸಿಬಿ ಕರೆ ಬಂದ ತಕ್ಷಣ ಚಿತ್ರೀಕರಣ ಸ್ಥಳದಿಂದ ದಿಗಂತ್ ಹೊರಟು ಹೋಗಿದ್ದಾರೆ.
ದಿಗಂತ್ ಆರಾಮಾಗೆ ಖುಷಿ ಇಂದ ಎಲ್ಲರನ್ನ ನಗಿಸಿಕೊಂಡೇ ಶೂಟಿಂಗ್ ನಲ್ಲಿ ಭಾಗಿ ಆಗಿದ್ದರು.
ಇವತ್ತು ಎಮೋಷನ್ ಸೀನ್ ಚಿತ್ರೀಕರಣ ಇತ್ತು. ಕರೆ ಬಂದಿದ್ರಿಂದ ಎರಡು ಘಂಟೆ ವಿಚಾರಣೆ ಮುಗಿಸಿ ವಾಪಸ್ ಬರ್ತಿನಿ ಅಂತ ಹೇಳಿ ನಟ ಹೋಗಿದ್ದರು ಎನ್ನಲಾಗಿದೆ.
ಸದ್ಯ ದಿಗಂತ್ ಪಾತ್ರಕ್ಕೆ ಬ್ರೇಕ್ ಕೊಟ್ಟು ಉಳಿದ ಭಾಗದ ಚಿತ್ರೀಕರಣ ಮಾಡಲಾಗಿದೆ. ಮಾರಿಗೋಲ್ಡ್ ಸಿನಿಮಾಗೆ ರಾಘವೆಂದ್ರ ನಾಯಕ್ ಆಕ್ಷನ್ ಕಟ್ ಹೇಳಿದ್ದಾರೆ. ಮಾರಿಗೋಲ್ಡ್ ಚಿತ್ರತಂಡದ ಮೂಲಗಳಿಂದ ಸುವರ್ಣ ನ್ಯೂಸ್ ಗೆ ಮಾಹಿತಿ ಲಭ್ಯವಾಗಿದೆ