ಶಿವಣ್ಣ 'ಭೈರತಿ ರಣಗಲ್' ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿ!
ಭೈರತಿ ರಣಗಲ್ ಅಖಾಡಕ್ಕೆ ಎಂಟ್ರಿ ರುಕ್ಮಿಣಿ ಸವಂತ್. ಶಿವಣ್ಣ ಚಿತ್ರಕ್ಕೆ ಹೊಸ ನಾಯಕಿ...

ನಟ ಶಿವರಾಜ್‌ಕುಮಾರ್ ಹಾಗೂ ನಿರ್ದೇಶಕ ನರ್ತನ್ ಕಾಂಬಿನೇಶನ್ ‘ಭೈರತಿ ರಣಗಲ್’ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಇತ್ತೀಚೆಗಷ್ಟೆ ಮುಹೂರ್ತ ಮಾಡಿಕೊಂಡಿದ್ದ ಈ ಚಿತ್ರಕ್ಕೆ ಇಲ್ಲಿವರೆಗೂ ನಾಯಕಿ ಆಯ್ಕೆ ಆಗಿರಲಿಲ್ಲ.
ಈಗ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಚಿತ್ರದ ನಾಯಕಿಯನ್ನು ಪರಿಚಯಿಸಿದ್ದಾರೆ. ಆ ಮೂಲಕ ರುಕ್ಮಿಣಿ ವಸಂತ್ ಅವರು ಶಿವಣ್ಣ ಅವರಿಗೆ ನಾಯಕಿಯಾಗಿ ಆಗಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಶ್ರೀನಿ ಜತೆಗೆ ‘ಬೀರಬಲ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು ರುಕ್ಮಿಣಿ ವಂಸತ್. ಆ ನಂತರ ರಕ್ಷಿತ್ ಶೆಟ್ಟಿ ಜತೆಗೆ ‘ಸಪ್ತ ಸಾಗರದಾಚೆ ಎಲ್ಲೋ’ ಹಾಗೂ ಗಣೇಶ್ ಜತೆಗೆ ‘ಬಾನ ದಾರಿಯಲ್ಲಿ’ ಚಿತ್ರಗಳಿಗೆ ನಾಯಕಿ ಆದರು.
ಶೂಟಿಂಗ್ ಮುಗಿಸಿರುವ ಈ ಚಿತ್ರಗಳು ಬಿಡುಗಡೆ ಹಂತಕ್ಕೆ ಬಂದಿವೆ. ಈ ಎರಡೂ ಚಿತ್ರಗಳು ತೆರೆ ಕಾಣುವ ಮೊದಲೇ ಶ್ರೀಮುರಳಿ ಜತೆಗೆ ‘ಬಘೀರ’ ಚಿತ್ರಕ್ಕೂ ನಾಯಕಿ ಆದರು.
ಈ ಸಿನಿಮಾ ಇನ್ನೂ ಶೂಟಿಂಗ್ ಅಖಾಡದಲ್ಲಿ ಇರುವಾಗಲೇ ತಮಿಳಿನಲ್ಲಿ ವಿಜಯ್ ಸೇತುಪತಿ ನಟನೆಯ ಚಿತ್ರಕ್ಕೆ ನಾಯಕಿ ಆದರು. ಇತ್ತೀಚೆಗಷ್ಟೆ ಈ ಚಿತ್ರಕ್ಕೆ ಮುಹೂರ್ತ ನಡೆಯಿತು.
ಅಲ್ಲಿಗೆ ಕನ್ನಡ ಹಾಗೂ ತಮಿಳು ಸೇರಿ 5 ಮಂದಿ ಸ್ಟಾರ್ ನಟರ ಅಭಿನಯದ ಐದು ಚಿತ್ರಗಳಲ್ಲಿ ನಾಯಕಿಯಾಗಿರುವ ಕನ್ನಡದ ಬಹು ಬೇಡಿಕೆಯ ನಟಿ ಎನ್ನುವ ಹೆಗ್ಗಳಿಕೆ ರುಕ್ಮಿಣಿ ವಸಂತ್ ಅವರದ್ದು. ಮುಂದಿನ ವಾರದಿಂದ ‘ಭೈರತಿ ರಣಗಲ್’ ಚಿತ್ರಕ್ಕೆ ಚಿತ್ರೀಕರಣ ಶುರುವಾಗಲಿದೆ. ಗೀತಾ ಶಿವರಾಜ್ ಕುಮಾರ್ ಅವರು ಈ ಚಿತ್ರದ ನಿರ್ಮಾಪಕರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.