ರಾಧಿಕಾ-ಯಶ್ ಹೊಸ ಫೋಟೋ ಶೂಟ್ ಮಾಡಿಸಿ ದಸರಾ ಹಬ್ಬಕ್ಕೆ ವಿಶ್
ದಸರಾ ಹಬ್ಬವನ್ನು ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮನೆಯಲ್ಲಿ ಸಡಗರದಿಂದ ಆಚರಿಸಿದ್ದಾರೆ. ರಾಜ್ಯದ ಜನತೆಗೆ ದಸರಾ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಆನಂದದ ಮತ್ತು ಆಶೀರ್ವಾದಗಳಿಂದ ಕೂಡಿದ ದಸರಾ ಹಬ್ಬದ ಶುಭಾಶಯಗಳು ಎಂದು ರಾಧಿಕಾ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಹೊಸದಾಗಿ ಫೋಟೋ ಶೂಟ್ ಮಾಡಿಕೊಂಡಿರುವ ರಾಕಿಂಗ್ ಸ್ಟಾರ್ ದಂಪತಿ ಆ ಫೋಟೋವನ್ನು ಶೇರ್ ಮಾಡಿಕೊಂಡು ನಾಡಿನ ಜನತೆಗೆ ಶುಭಾಶಯ ಸಲ್ಲಿಸಿದ್ದಾರೆ.
ರಾಧಿಕಾ ಪಂಡಿತ್ ಆಕಾಶ ನೀಲಿ ಬಣ್ಣದ ಸೀರೆಯನ್ನು ಧರಿಸಿದ್ದು, ಅದಕ್ಕೆ ತಕ್ಕುನಾದ ಜ್ಯುವೆಲರಿ ಸೆಟ್ ಧರಿಸಿ ಮಿಂಚಿದ್ದಾರೆ.
ರಾಕಿಂಗ್ ಸ್ಟಾರ್ ಬೂದು ಬಣ್ಣದ ಜುಬ್ಬಾ ಮತ್ತು ಅದಕ್ಕೆ ಮ್ಯಾಚ್ ಆಗುವ ಬಿಳಿ ಬಣ್ಣದ ಬಾಟಮ್, ಕೂಲಿಂಗ್ ಗ್ಲಾಸ್ ಹಾಕಿ ಫೋಟೋಗೆ ಫೋಸ್ ನೀಡಿದ್ದಾರೆ.
ಇನ್ನು ನಿನ್ನೆಯಷ್ಟೇ ರಾಕಿಂಗ್ ಸ್ಟಾರ್ ಮನೆಯಲ್ಲಿ ಆಯುಧ ಪೂಜೆ ಮಾಡಲಾಗಿದ್ದು, ಮಕ್ಕಳು ವಾಹನಗಳಿಗೆ ಪೂಜೆ ಮಾಡುವ ಫೋಟೋಗಳನ್ನು ರಾಧಿಕಾ ಶೇರ್ ಮಾಡಿಕೊಂಡಿದ್ದರು.
ಮಗಳು ಐರಾ ಯಶ್ ಮತ್ತು ಮಗ ಯಥರ್ವ್ ಯಶ್ ಆಯುಧ ಪೂಜೆ ಬಳಿಕ ತಮ್ಮ ತಮ್ಮ ಬೈಸಿಕಲ್ ನಲ್ಲಿ ಕುಳಿತು ಫೋಟೋಗೆ ಪೋಸ್ ನೀಡಿದರು.