ವಾಮನ ಚಿತ್ರಕ್ಕೆ ರೀಷ್ಮಾ ನಾಣಯ್ಯ ನಾಯಕಿ!
ಧನ್ವೀರ್ ಗೌಡ ನಾಯಕನಾಗಿರುವ ವಾಮನ ಚಿತ್ರಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ರೀಷ್ಮಾ ನಾಣಯ್ಯ...
‘ಏಕ್ ಲವ್ ಯಾ’ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ಬೆಡಗಿ ರೀಷ್ಮಾ ನಾಣಯ್ಯ ಇದೀಗ ಎರಡನೇ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ಸ್ಟೈಲಿಷ್ ನಟ ಧನ್ವೀರ್ ಗೌಡ ನಟನೆಯ ‘ವಾಮನ’ ಚಿತ್ರಕ್ಕೆ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿದೆ.
ನಾಯಕನ ಜರ್ನಿಯಲ್ಲಿ ಬೆಂಗಾವಲಾಗಿ ನಿಲ್ಲುವ ನಾಯಕಿಯಾಗಿ ರೀಷ್ಮಾ ಕಾಣಿಸಿಕೊಂಡಿದ್ದಾರೆ. ಕಮರ್ಷಿಯಲ್ ಆ್ಯಕ್ಷನ್ ಸಿನಿಮಾ ಇದಾಗಿದ್ದು, ಲವ್‌ಸ್ಟೋರಿಯೂ ಚಿತ್ರದಲ್ಲಿದೆ ಎಂದು ಚಿತ್ರತಂಡ ತಿಳಿಸಿದೆ.
ಚೇತನ್ ಕುಮಾರ್ ಚಿತ್ರದ ನಿರ್ಮಾಪಕರು. ಶಂಕರ್ ರಾಮನ್ ನಿರ್ದೇಶಕರು. ರೀಷ್ಮಾ ತಂಡದ ಜೊತೆ ಕೈ ಜೋಡಿಸಿರುವ ವಿಚಾರ ತಿಳಿಸುವ ಮೂಲಕ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ.
ವಾಮನ ಸಿನಿಮಾ ನಂತರ ಚೀ ಕಳ್ಳ ಚಿತ್ರಕ್ಕೂ ಸಹಿ ಮಾಡಿದ್ದಾರೆ ರೀಷ್ಮಾ. ಜೊತೆಗೆ ಶ್ರೇಯಸ್ ಕೆ ಮಂಜು ನಟನೆಯ ರಾಣ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.
ಸದ್ಯ ಕನ್ನಡ ಚಿತ್ರರಂದ ಬ್ಯುಸಿ ನಾಯಕಿಯಾಗಿರುವ ರೀಷ್ಮಾ, ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಾನ ದಾರಿಯಲ್ಲಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.