- Home
- Entertainment
- Sandalwood
- ಹೊಸ ಬಂಗಲೆ ಖರೀದಿಸಿದ ಉಪೇಂದ್ರ; ಅದ್ದೂರಿ ಗೃಹಪ್ರವೇಶ ಸಂಭ್ರಮದಲ್ಲಿ ಸಿನಿ ಗಣ್ಯರು, ಇಲ್ಲಿವೆ ಸುಂದರ ಫೋಟೋಗಳು
ಹೊಸ ಬಂಗಲೆ ಖರೀದಿಸಿದ ಉಪೇಂದ್ರ; ಅದ್ದೂರಿ ಗೃಹಪ್ರವೇಶ ಸಂಭ್ರಮದಲ್ಲಿ ಸಿನಿ ಗಣ್ಯರು, ಇಲ್ಲಿವೆ ಸುಂದರ ಫೋಟೋಗಳು
ರಿಯಲ್ ಉಪೇಂದ್ರ ಐಷಾರಾಮಿ ಬಂಗಲೆ ಖರೀದಿ ಮಾಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾಗಿರುವ ಸದಾಶಿವನಗರದಲ್ಲಿ ರಿಯಲ್ ಸ್ಟಾರ್ ದಂಪತಿ ಬಂಗಲೆ ಖರೀದಿಸಿದ್ದು ಗೃಹಪ್ರವೇಶ ಸಮಾರಂಭ ಕೂಡ ಮಾಡಿ ಮುಗಿಸಿದ್ದಾರೆ.

ರಿಯಲ್ ಉಪೇಂದ್ರ ಐಷಾರಾಮಿ ಬಂಗಲೆ ಖರೀದಿ ಮಾಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾಗಿರುವ ಸದಾಶಿವನಗರದಲ್ಲಿ ರಿಯಲ್ ಸ್ಟಾರ್ ದಂಪತಿ ಹೊಸ ಬಂಗಲೆ ಕೊಂಡುಕೊಂಡಿದ್ದಾರೆ. ಈಗಾಗಲೇ ಗೃಹಪ್ರವೇಶ ಸಮಾರಂಭ ಕೂಡ ನೆರವೇರಿದ್ದು ಸ್ಯಾಂಡಲ್ ವುಡ್‌ನ ಅನೇಕ ಗಣ್ಯರು ಭಾಗಿಯಾಗಿದ್ದರು.
ಉಪೇಂದ್ರ ಸದ್ಯ ಕತ್ರಿಗುಪ್ಪೆಯಲ್ಲಿ ವಾಸವಾಗಿದ್ದರು. ರಿಯಲ್ ಸ್ಟಾರ್ ಮನೆ ಎಂದರೆ ಕತ್ರಿಗುಪ್ಪೆ ನೆನಪಾಗುತ್ತಿತ್ತು. ಅಭಿಮಾನಿಗಳು ರಿಯಲ್ ಸ್ಟಾರ್ ಅವರನ್ನು ಕತ್ರಿಗುಪ್ಪೆ ನಿವಾಸದಲ್ಲೇ ಭೇಟಿಯಾಗುತ್ತಿದ್ದರು. ಅಲ್ಲೇ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಆದರೀಗ ಸದಾಶಿವನಗರದಲ್ಲಿ ಮನೆ ಖರೀದಿಸಿದ್ದು ಅಲ್ಲಿಗೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಸದಾಶಿವನಗರದ ಬಂಗಲೆಯ ಪೂಜೆ ಈಗಾಗಲೇ ನೆರವೇರಿದೆ. ಏಪ್ರಿಲ್ 15ರಂದೆ ಹೊಸ ಮನೆಯ ಗೃಹಪ್ರವೇಶ ಸಮಾರಂಭವಾಗಿದೆ. ಕಾರ್ಯಕ್ರಮದಲ್ಲಿ ಅನೇಕರು ಭಾಗಿಯಾಗಿದ್ದರು. ಗೃಹಪ್ರವೇಶದ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ.
ಅಂದಹಾಗೆ ಅದ್ದೂರಿ ಸಮಾರಂಭದಲ್ಲಿ ಪ್ರಿಯಾಂಕಾ ಉಪೇಂದ್ರ ಆಪ್ತರ ಬಳಗ ಭಾಗಿಯಾಗಿತ್ತು. ಶಿಲ್ಪಾ ಗಣೇಶ್, ಸುಜಾತಾ, ಪಲ್ಲವಿ ಗುರುಕಿರಣ್, ಹಿರಿಯ ನಟಿ ಸರೋಜಾ ದೇವಿ, ಮುರಳಿ ಮೋಹನ್ ಸೇರಿದಂತೆ ಅನೇಕ ತಾರೆಯರು ಗೃಹಪ್ರವೇಶ ಪೂಜೆಗೆ ಆಗಮಿಸಿ ಉಪೇಂದ್ರ ಹಾಗೂ ಪ್ರಿಯಾಂಕಾಗೆ ಶುಭ ಹಾರೈಸಿದರು.
ಪ್ರಿಯಾಂಕಾ ಉಪೇಂದ್ರ ಅವರನ್ನು ಮದುವೆಯಾದಾಗಿನಿಂದ ಕತ್ರಿಗುಪ್ಪೆ ನಿವಾಸದಲ್ಲಿ ವಾಸವಾಗಿದ್ದರು. ಆದರೀಗ ಹೊಸ ಮನೆಗೆ ಶಿಫ್ಟ್ ಆಗುತ್ತಿದ್ದಾರೆ. 2002-03ರ ಸಮಯದಲ್ಲಿ ಕತ್ರಿಗುಪ್ಪಿ ಮನೆಯನ್ನು ಕಟ್ಟಿಸಿದ್ದರು ರಿಯಲ್ ಸ್ಟಾರ್. ಇದೀಗ ತನ್ನಿಷ್ಟದ ಮನೆಯಿಂದ ಮತ್ತೊಂದು ಮನೆಗೆ ಹೋಗುತ್ತಿದ್ದಾರೆ ರಿಯಲ್ ಸ್ಟಾರ್ ಅಂಡ್ ಕುಟುಂಬ.
ಸದಾಶಿವ ನಗರ ಎಂದರೆ ದುಬಾರಿ ಏರಿಯ. ಹಾಗಾಗಿ ರಿಯಲ್ ಸ್ಟಾರ್ ಹೊಸ ಮನೆ ಕೂಡ ದುಬಾರಿಯದ್ದಾಗಿದೆ. ಆದರೆ ಎಷ್ಟಕ್ಕೆ ಖರೀದಿಸಿದ್ದಾರೆ ಎನ್ನುವ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲ. ಸದ್ಯ ಎರಡು ಮನೆಯನ್ನು ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಅಂದಹಾಗೆ ರಿಯಲ್ ಸ್ಟಾರ್ ಕಳೆದ ನಾಲ್ಕೈದು ವರ್ಷಗಳ ಹಿಂದೆ ಕತ್ರಿಗುಪ್ಪೆ ನಿವಾಸ ಬಿಟ್ಟು ರುಪ್ಪೀಸ್ ರೆಸಾರ್ಟ್‌ಗೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗಿತ್ತು. ರುಪ್ಪೀಸ್ ರೆಸಾರ್ಟ್ ಪಕ್ಕದಲ್ಲೇ ರಿಯಲ್ ಸ್ಟಾರ್ ಮನೆ ಕಟ್ಟಿಸುತ್ತಿದ್ದರು. ಆ ಮನೆ ಕೆಲಸ ಕೂಡ ಪೂರ್ಣವಾಗಿದೆ. ಆಗಾಗ ಅಲ್ಲಿಗೂ ಹೋಗುತ್ತಿರುತ್ತಾರೆ ರಿಯಲ್ ಸ್ಟಾರ್ ಫ್ಯಾಮಿಲಿ. ಇದೀಗ ಸದಾಶಿವನಗರ ನಿವಾಸಕ್ಕೆ ಶಿಫ್ಟ್ ಆಗುತ್ತಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಜೊತೆಗೆ ಪ್ರಜಾಕೀಯದಲ್ಲೂ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ರಿಯಲ್ ಸ್ಟಾರ್ ಕಬ್ಜ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಕಬ್ಜ ಪಾರ್ಟ್-2 ಅನೌನ್ಸ್ ಆಗಿದ್ದು ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಸಿನಿಮಾ ಜೊತೆಗೆ ನಿರ್ದೇಶನದಲ್ಲೂ ತೊಡಗಿಕೊಂಡಿದ್ದಾರೆ. ಯುಐ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.
ರಿಯಲ್ ಸ್ಟಾರ್ ಪತ್ನಿ ಪ್ರಿಯಾಂಕಾ ಉಪೇಂದ್ರ ಕೂಡ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಕುಟಂಬ ನಿಭಾಯಿಸುವ ಜೊತೆ ಪ್ರಿಯಾಂಕಾ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೊನೆಯದಾಗಿ ಮಿಸ್ ನಂದಿನಿ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.