#Happybirthday ರಶ್ಮಿಕಾ ಮಂದಣ್ಣ, ಪ್ರೀತಿಯ ಶ್ವಾನಗಳ ಜೊತೆ ಕ್ಲಿಕ್!
ಪ್ರಾಣಿ, ಪಕ್ಷಿಗಳನ್ನು ತುಂಬಾನೇ ಪ್ರೀತಿ ಮಾಡುವ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳಿವು....
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕರ್ನಾಟಕಕ್ಕೆ ಸಾನ್ವಿಯಾಗಿ ಪರಿಚಯವಾದ ರಶ್ಮಿಕಾ ಮಂದಣ್ಣ ಇಂದು 26ರ ವಸಂತಕ್ಕೆ ಕಾಲಿಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಅಗಿರುವ ಶ್ರೀವಲ್ಲಿ ಇನ್‌ಸ್ಟಾಗ್ರಾಂನಲ್ಲಿ 30 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಸಿನಿಮಾ, ಪರ್ಸನಲ್ ಲೈಫ್‌ನ ಪ್ರತಿಯೊಂದು ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ.
ರಶ್ಮಿಕಾ ಮಂದಣ್ಣಗೆ ನಾಯಿ, ಬೆಕ್ಕು, ಪಾರಿವಾಳ, ಬಾದುಕೋಳಿ ಅಂದ್ರೆ ತುಂಬಾನೇ ಇಷ್ಟ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ pet love ಎಂದು ಬರೆದುಕೊಂಡು ನೂರಾರೂ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
ಕೊರೋನಾ ಲಾಕ್‌ಡೌನ್ ಸಮಯದಲ್ಲಿ ರಶ್ಮಿಕಾ ಕೊಡಗಿನಲ್ಲಿ ಹೆಚ್ಚಿಗೆ ಸಮಯ ಕಳೆಯುತ್ತಿದ್ದರು ಅಗ ತಮ್ಮ ಮನೆಯಲ್ಲಿ 5 ನಾಯಿಗಳಿದೆ ಎಂದು ಹೇಳಿಕೊಂಡಿದ್ದರು.
ರಶ್ಮಿಕಾ ಮಂದಣ್ಣ ಸಿನಿಮಾ ಕೆಲಸಗಳಿಂದ ಮುಂಬೈನಲ್ಲಿ ನೆಲೆಸಿದ್ದಾರೆ ಹೀಗಾಗಿ ಒಂಟಿಯಾಗಿರುವುದಕ್ಕೆ ಬೋರು ಎಂದು ಅಲ್ಲೊಂದು ನಾಯಿಯನ್ನು ಸಾಕಿದ್ದಾರೆ. ಅದಕ್ಕೆ aura ಮಂದಣ್ಣ ಎಂದು ನಾಮಕರಣ ಮಾಡಿದ್ದಾರೆ.
ತಮ್ಮ ಹುಟ್ಟೂರಿನಲ್ಲಿ ಹಸು ಕರು ಹಾಕಿದಾಗ ರಶ್ಮಿಕಾ ತಪ್ಪದೆ ಪೋಟೋ ಹಂಚಿಕೊಳ್ಳುತ್ತಾರೆ. ಕೊಡಗುಗೆ ಬಂದಾಗ ಕುರನ ಮುದ್ದಾಡುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದರು.
ಭಾರತೀಯ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ಅಂದ್ರೆ ರಶ್ಮಿಕಾ ಮಂದಣ್ಣ. ಅಮಿತಾಭ್ ಬಚ್ಚನ್ ಜೊತೆ ಗುಡ್ ಬಾಯ್, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜುನು ಮತ್ತು ಅಲ್ಲು ಅರ್ಜುನ್ ಜೊತೆ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.