ಆ ಸಿನಿಮಾದ ಪೋಸ್ಟರ್ ಹಂಚಿಕೊಂಡ ಶಿವಣ್ಣ: ಗಳಗಳನೇ ಕಣ್ಣೀರು ಸುರಿಸಿದ ರಶ್ಮಿಕಾ ಮಂದಣ್ಣ
‘ಮೈಸಾ’ ಇದು ರಶ್ಮಿಕಾ ಮಂದಣ್ಣ ನಟನೆಯ ಹೊಸ ಸಿನಿಮಾದ ಶೀರ್ಷಿಕೆ. ಈ ಚಿತ್ರದ ಕನ್ನಡ ಪೋಸ್ಟರ್ ಅನ್ನು ಶೇರ್ ಮಾಡಿರುವ ಶಿವರಾಜ್ ಕುಮಾರ್ ರಶ್ಮಿಕಾ ಹಾಗೂ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

‘ಮೈಸಾ’ ಇದು ರಶ್ಮಿಕಾ ಮಂದಣ್ಣ ನಟನೆಯ ಹೊಸ ಸಿನಿಮಾದ ಶೀರ್ಷಿಕೆ. ಈ ಚಿತ್ರದಲ್ಲಿ ವೀರನಾರಿಯಾಗಿ ರಶ್ಮಿಕಾರ ರಕ್ತಸಿಕ್ತ ಪೋಸ್ಟರ್ ರಿಲೀಸ್ ಆಗಿದ್ದು, ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
‘ಮೈಸಾ’ ಕನ್ನಡ ಪೋಸ್ಟರ್ ಅನ್ನು ಶೇರ್ ಮಾಡಿರುವ ಶಿವರಾಜ್ ಕುಮಾರ್ ರಶ್ಮಿಕಾ ಹಾಗೂ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಶಿವಣ್ಣನ ಬೆಂಬಲಕ್ಕೆ ಗಳಗಳ ಕಣ್ಣೀರು ಸುರಿಸುವ ಇಮೋಜಿ ಹಾಕಿ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ, ‘ ಶಿವಣ್ಣ ಸರ್, ಈ ನಿಮ್ಮ ಸಂದೇಶಕ್ಕೆ ಬಹಳ ಧನ್ಯವಾದಗಳು. ನಿಮ್ಮ ಸಂದೇಶದಿಂದ ಹೆಮ್ಮೆಯ ಭಾವ ಉಕ್ಕಿ ಬಂದಿದೆ’ ಎಂದಿದ್ದಾರೆ.
ಇನ್ನು ಸಾಮಾಜಿಕ ಮಾಧ್ಯಮದಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡ ರಶ್ಮಿಕಾ, ' ನಾನು ಯಾವಾಗಲೂ ನಿಮಗೆ ಹೊಸದನ್ನು ನೀಡಲು ಪ್ರಯತ್ನಿಸುತ್ತೇನೆ... ವಿಭಿನ್ನವಾದದ್ದು... ರೋಮಾಂಚನಕಾರಿಯಾದದ್ದು.. ಅಂತಹದ್ದರಲ್ಲಿ ಇದು ಒಂದು.. ಎಂದು ಬರೆದುಕೊಂಡಿದ್ದಾರೆ.
'ನಾನು ಇದುವರೆಗೆ ನಟಿಸದ ಪಾತ್ರ... ನಾನು ಎಂದಿಗೂ ಕಾಲಿಡದ ಜಗತ್ತು... ಇದು ಉಗ್ರವಾಗಿದೆ.. ಇದು ತೀವ್ರವಾಗಿದೆ ಮತ್ತು ಇದು ತುಂಬಾ ಹೊಸದಾಗಿದೆ.. ತುಂಬಾ ಉತ್ಸುಕಳಾಗಿದ್ದೇನೆ..ಇದು ಕೇವಲ ಆರಂಭ' ಎಂದು ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ.
ರವೀಂದ್ರ ಪುಲ್ಲೆ ನಿರ್ದೇಶನದ ಈ ಸಿನಿಮಾವನ್ನು ಅಜಯ್ ಮತ್ತು ಅನಿಲ್ ಸಯ್ಯಪುರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. 'ಮೈಸಾ' ಮಹಿಳಾ ಪ್ರಧಾನ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.