- Home
- Entertainment
- Sandalwood
- 20 ಸಲ ಆಡಿಷನ್‌ನಲ್ಲಿ ರಿಜೆಕ್ಟ್ ಆದ್ಮೇಲೆ ಈ ಸಿನಿಮಾ ಸಿಕ್ಕಿದ್ದು; ಅವಕಾಶಕ್ಕಾಗಿ ಪರದಾಡಿದ ರಶ್ಮಿಕಾ ಮಂದಣ್ಣ
20 ಸಲ ಆಡಿಷನ್‌ನಲ್ಲಿ ರಿಜೆಕ್ಟ್ ಆದ್ಮೇಲೆ ಈ ಸಿನಿಮಾ ಸಿಕ್ಕಿದ್ದು; ಅವಕಾಶಕ್ಕಾಗಿ ಪರದಾಡಿದ ರಶ್ಮಿಕಾ ಮಂದಣ್ಣ
ಮೊದಲ ಸಿನಿಮಾ ಸೂಪರ್ ಹಿಟ್ ಎಂದು ಕೊಂಡಾಡುತ್ತಿರುವ ಜನರಿಗೆ ಹಿಂದೆ ಪಟ್ಟ ಕಷ್ಟ ಎಷ್ಟು ಎಂದು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ.

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಮೂರ್ನಾಲ್ಕು ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರಬಹುದು ಆದರೆ ಹಿಂದೆ ಈ ಅವಕಾಶಕ್ಕಾಗಿ ತುಂಬಾನೇ ಪರದಾಡಿದ್ದಾರೆ.
ರಶ್ಮಿಕಾ ಮಂದಣ್ಣ ಮೊದಲ ಸಿನಿಮಾ ಕಿರಿಕ್ ಪಾರ್ಟಿ. ಮೊದಲ ಸಿನಿಮಾ ಹಿಟ್ ಆಗಿದ್ದಕ್ಕೆ ಈ ಯಶಸ್ಸು ಎಂದು ಕೆಲವರು ಕೊಂಕು ಮಾತನಾಡುತ್ತಿದ್ದಾರೆ. ಅವರಿಗೆ ರಶ್ಮಿಕಾ ತಮ್ಮ ಹಿಂದಿನ ಶ್ರಮ ಹೇಳಿದ್ದಾರೆ.
'ನಾನು ಆಡಿಷನ್‌ಗಳಲ್ಲಿ ಹಲವು ಸಲ ರಿಜೆಕ್ಟ್ ಆಗಿದ್ದೀನಿ ಆ ಸಮಯದಲ್ಲಿ ಅಳುತ್ತಾ ಮನೆಗೆ ಬಂದಿದ್ದೀನೆ. ನಾನು ಇದುವರೆಗೂ ಸಿನಿಮಾಗಳಿಗೆ ಮಾತ್ರ ಆಡಿಷನ್‌ಗಳನ್ನು ಕೊಡುತ್ತಿದ್ದೆ'
'ಕೊನೆಗೂ ಒಂದು ಸಿನಿಮಾದಲ್ಲಿ ಆಯ್ಕೆ ಆದೆ. ಸುಮಾರು 2 ರಿಂದ 3 ತಿಂಗಳ ಕಾಲ ನನಗೆ ತರಬೇತಿ ನೀಡಿದ್ದರು. ತರಬೇತಿ ನೀಡಿದ ಮೇಲೆ ಸಿನಿಮಾ ಕ್ಯಾನ್ಸಲ್ ಮಾಡಿಬಿಟ್ಟರು'
'ಒಂದು ಸಿನಿಮಾದ ನಂತರ ಮತ್ತೊಂದು ಸಿನಿಮಾದಲ್ಲಿ ಚೆನ್ನಾಗಿ ನಟಿಸುವುದು ನಾವು ಉತ್ತಮ ಆಗುವುದು ನಮ್ಮ ಕೈಯಲ್ಲಿ ಇರುತ್ತದೆ' ಎಂದು ಖಾಸಗಿ ಸಂದರ್ಶನದಲ್ಲಿ ರಶ್ಮಿಕಾ ಮಾತನಾಡಿದ್ದಾರೆ.
'ನನ್ನ ಸಿನಿಮಾಗಳನ್ನು ನಾನೇ ನೋಡಿದಾಗ ಇನ್ನೂ ಉತ್ತಮವಾಗಿ ನಟಿಸಬಹುದಿತ್ತು ಅನಿಸುತ್ತದೆ. ಹೀಗಾಗಿ ಪ್ರತಿ ಸಿನಿಮಾದಲ್ಲೂ ಬದಲಾವಣೆ ಮಾಡಿಕೊಳ್ಳುತ್ತೀನಿ'ಎಂದು ರಶ್ಮಿಕಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.