ರೆಡ್ ಡ್ರೆಸ್ ಧರಿಸಿ ಬೆನ್ನು ತೋರಿಸಿದ ರಂಗಿತರಂಗ ಚೆಲುವೆ: ಪೋಟೋಸ್ ನೋಡಿ ಟೆಂಪ್ರೇಚರ್ ಹೆಚ್ಚಾಯ್ತು ಎಂದ ಪಡ್ಡೆಹೈಕ್ಳು!
'ರಂಗಿತರಂಗ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ರಾಧಿಕಾ ಚೇತನ್ ಮೊದಲ ಚಿತ್ರದಲ್ಲೇ ಹಿಟ್ ಕಂಡ ನಟಿ. 'U-ಟರ್ನ್', 'ಕಾಫಿತೋಟ', 'ಅಸತೋಮಾ ಸದ್ಗಮಯಾ' ಹಾಗೂ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರದಲ್ಲಿ ನಟಿಸಿ ಹಿಟ್ ಕಂಡವರು. ಇದೀಗ ಬೋಲ್ಡ್ ಫೋಟೋಶೂಟ್ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ರಾಧಿಕಾ ನಾರಾಯಣ್ ಸದ್ಯ ಬೋಲ್ಡ್ ಫೋಟೋಶೂಟ್ ಮಾಡಿದ್ದಾರೆ. ಮಾಡ್ರನ್ ಡ್ರೆಸ್ ತೊಟ್ಟು ಸಖತ್ ಆಗಿಯೇ ಮಿಂಚಿದ್ದು, ಸ್ವಲ್ಪ ಜಾಸ್ತಿನೇ ಬೋಲ್ಡ್ ಅನಿಸೋ ಡ್ರೆಸ್ ಹಾಕಿಕೊಂಡಿದ್ದಾರೆ. ಈ ಡ್ರೆಸ್ನಲ್ಲಿ ತೆಗೆದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿದೆ.
ರಾಧಿಕಾ ನಾರಾಯಣ್ ಸದ್ಯ ಫೋಟೋಶೂಟ್ನಲ್ಲಿ ಮಾದಕ ಅನಿಸೋ ಒಂದಷ್ಟು ಪೋಸ್ಗಳನ್ನೂ ಕೊಟ್ಟಿದ್ದಾರೆ. ಧರಿಸಿರೋ ಬಟ್ಟೆ ಬಣ್ಣ ಕೂಡ ಕೆಂಪು ಬಣ್ಣದ್ದು. ಹಾಗಾಗಿಯೆ ಇಲ್ಲಿ ಮಾದಕತೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಂತೆ ಕಾಣಿಸುತ್ತಿದೆ.
ವಿಶೇಷವಾಗಿ ರಾಧಿಕಾ ನಾರಾಯಣ್ ಫೋಟೋಶೂಟ್ನಲ್ಲಿ ವಿವಿಧ ರೀತಿಯಲ್ಲಿ ಪೋಸ್ ಕೊಟ್ಟಿದ್ದು, ಅದರಲ್ಲಿ ಕನ್ನಡಿಯ ಮುಂದೆ ನಿಂತು ಪೋಸ್ ಕೊಟ್ಟಿದ್ದಾರೆ. ಇಲ್ಲಿ ಇವರ ಮುಖಕ್ಕಿಂತಲೂ ಬೆನ್ನಿಗೇನೆ ಹೆಚ್ಚು ಫೋಕಸ್ ಮಾಡಿದ್ದಾರೆ.
ಜೊತೆಗೆ ರಾಧಿಕಾ ನಾರಾಯಣ್ ಚೇರ್ ಮೇಲೆ ಕುಳಿತು ಒಂದು ಪೋಸ್ ಕೊಟ್ಟಿದ್ದಾರೆ. ಇದು ಇಂಟ್ರಸ್ಟಿಂಗ್ ಆಗಿಯೇ ಕಾಣಿಸುತ್ತಿದೆ. ಆದರೆ ಇನ್ನುಳಿದ ಫೋಟೋಗಳಲ್ಲಿ ರಾಧಿಕಾ ಮಾದಕತೆ ಸೂಸುತ್ತಿದೆ ಅನಿಸುತ್ತದೆ.
ರಾಧಿಕಾ ನಾರಾಯಣ್ ಹಂಚಿಕೊಂಡಿರುವ ಹಾಟ್ ಫೋಟೋಗಳಿಗೆ ಕಾಮೆಂಟ್ ಕೆಟ್ಟದಾಗಿಯೇನೂ ಇಲ್ಲ. ಬದಲಾಗಿ ಕಾಂಪ್ಲಿಮೆಂಟ್ಸ್ ಜಾಸ್ತಿ ಬಂದಿವೆ. ಬ್ಯೂಟಿಫುಲ್, ಹಾಟ್, ಸೂಪರ್, ಸ್ವೀಟಿ, ಅಂತೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ರಾಧಿಕಾ ನಾರಾಯಣ್ ಸಖತ್ ಮಾಡ್ರನ್ ಆಗುತ್ತಿದ್ದಾರೆ. ದಿನಗಳದಂತೆ ಎಲ್ಲ ನಾಯಕಿಯರ ಹಾಗೆ ಬೋಲ್ಡ್ ಅನಿಸೋ ಡ್ರೆಸ್ ತೊಡುತ್ತಿದ್ದಾರೆ. ಆದರೆ ಇದೆಲ್ಲ ಫೋಟೋ ಶೂಟ್ಗೆ ಮಾತ್ರ ಅನ್ನೋದು ಅಷ್ಟೇ ಸತ್ಯ ಅಂತಲೂ ಹೇಳಬಹುದು.