ಕೊರಗಜ್ಜನ ಆಧಿಸ್ಥಳದಲ್ಲಿ ನೆಮ್ಮದಿ ಇದೆ: ಮೂರು ತಿಂಗಳಿಗೊಮ್ಮೆ ನಟಿ ರಕ್ಷಿತಾ ಬರ್ತಿರೋದು ಈ ಕಾರಣಕ್ಕೆ!
ಮೂರು ತಿಂಗಳಿಗೊಮ್ಮೆ ಕೊರಗಜ್ಜನ ಸನ್ನಿಧಿಗೆ ಆಗಮಿಸುವ ರಕ್ಷಿತಾ ಪ್ರೇಮ್. ಅಂದುಕೊಂಡಿದ್ದು ನಡೆದೇ ನಡೆಯುತ್ತೆ.....
ಸ್ಯಾಂಡಲ್‌ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಮತ್ತು ತಮ್ಮ ಡಿಕೆಡಿ ಡ್ಯಾನ್ಸರ್‌ಗಳ ಜೊತೆ ಕುತ್ತಾರು ಕೊರಗಜ್ಜನ ಆದಿಸ್ಥಳ ಭೇಟಿ ನೀಡಿದ್ದಾರೆ.
ಸೆಪ್ಟೆಂಬರ್ 1ರಂದು ಕುತ್ತಾರು ಭಂಡಾರ ಬೈಲಿನ ಪಂಜಂದಾಯ ಬಂಟ ವೈದ್ಯನಾಥ ಕೊರಗಜ್ಜ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
'ನಾನು ಕಳೆದ ಎರಡು ವರ್ಷಗಳಿಂದ ಬರುತ್ತಿರುವೆ. ಕುತ್ತಾರು ಕೊರಗಜ್ಜನ ಆದಿಸ್ಥಳ ಭಂಡಾರ ಬೈಲು ಪಂಜಂದಾಯ ಬಂಟ ವೈದ್ಯನಾಥ ಕ್ಷೇತ್ರಕ್ಕೆ ನಾನು ಆಗಮಿಸಿರುವುದು ಎರಡನೇ ಸಲ' ಎಂದು ರಕ್ಷಿತಾ ಮಾತನಾಡಿದ್ದಾರೆ.
'ಮೂರು ತಿಂಗಳಿಗೊಮ್ಮೆ ಊರಿನಲ್ಲಿರುವ ಎಲ್ಲಾ ದೇವಸ್ಥಾನಕ್ಕೆ ಬಂದು ಹೋಗುವುದಕ್ಕೆ ನೆಮ್ಮದಿ ಇರುತ್ತದೆ. ನಾನು ಅಂದುಕೊಂಡ ಕೆಲಸಗಳು ನಡೆಯುತ್ತಿದೆ ಹೀಗಾಗಿ ಪದೇ ಪದೇ ಬರುತ್ತಿರುವೆ' ಎಂದು ರಕ್ಷಿತಾ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಅವರು ಕುತ್ತಾರಿನ ಕೊರಗಜ್ಜ ಮತ್ತು ಪಂಜಂದಾಯ, ಬಂಟ ಕ್ಷೇತ್ರದ ಕಾರಣೀಕ ಹೇಳಲು ಅಸಾಧ್ಯ ಕೊರಗಜ್ಜನೇ ಇಲ್ಲಿಗೆ ಮೂರು ತಿಂಗಳಿಗೊಮ್ಮೆ ನನ್ನನ್ನ ಕರೆಸ್ಕೋತಾರೆ ಅಂಡ್ಕೊಂಡಿದ್ದೇನೆ.
ವಿಶೇಷವಾಗಿ ಭಂಡಾರ ಬೈಲಿನ ಪಂಜಂದಾಯ ದೈವದ ಕ್ಷೇತ್ರವು ಪ್ರಶಾಂತವಾಗಿ ಮನಸಿಗೆ ನೆಮ್ಮದಿ ಕೊಡುತ್ತದೆ. ಹಾಗಾಗಿ ಕುತ್ತಾರಿಗೆ ಭೇಟಿ ನೀಡಿದಾಗ ಪಂಜಂದಾಯ ಕ್ಷೇತ್ರದಲ್ಲಿ ಕುಳಿತು ಹೋಗುತ್ತೇನೆ.
ಹೆಚ್ಚಿನ ಬೇಡಿಕೆ ಏನೂ ಇಡಲ್ಕ ಎಲ್ಲವನ್ನೂ ಕೊಟ್ಟ ದೈವ, ದೇವತೆಗಳು ನನ್ನ ಕೈಬಿಡದಂತೆ ಪ್ರಾರ್ಥಿಸುತ್ತೀನಿ. ಇಲ್ಲಿಂದ ಪ್ರತೀ ಬಾರಿ ಕಟೀಲು, ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡುವ ವಾಡಿಕೆ ಬೆಳೆಸಿದ್ದೀನಿ ಎಂದರು. ನೆಚ್ಚಿನ ನಟಿಯನ್ನ ಕಂಡ ಸ್ಥಳೀಯರು ರಕ್ಷಿತಾ ಜೊತೆ ಸೆಲ್ಸಿ ತೆಗೆದು ಸಂಭ್ರಮಿಸಿದರು.