ರಕ್ಷಿತ್ ಶೆಟ್ಟಿ ಅದ್ಭುತ ಸಿನಿಮಾಕ್ಕೆ ನಾನೂ ಕಾಯುತ್ತಿದ್ದೇನೆ: ರಾಜ್ ಬಿ ಶೆಟ್ಟಿ
ರಕ್ಷಿತ್ ಶೆಟ್ಟಿ ಯಾವಾಗ ಸಿನಿಮಾ ಮಾಡಿದರೂ ಅದ್ಭುತವಾಗಿ ಮಾಡ್ತಾರೆ. ನಾನೂ ಒಬ್ಬ ಅಭಿಮಾನಿಯಾಗಿ ಅವರ ಸಿನಿಮಾಕ್ಕೆ ಕಾಯುತ್ತಿದ್ದೇನೆ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
15

Image Credit : Asianet News
ಸ್ಯಾಂಡಲ್‌ವುಡ್‌ನ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಅದ್ಭುತ ಸಿನಿಮಾಕ್ಕಾಗಿ ನಾನೂ ಕಾಯುತ್ತಿದ್ದೇನೆ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
25
Image Credit : Asianet News
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಕ್ಷಿತ್ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಮನುಷ್ಯ. ಅವರಿಗೆ ಬೇಗ ಸಿನಿಮಾ ಮಾಡಿ ಅಂತ ಹೇಳಬೇಕಿದ್ದರೆ ನಾನು ಅವರಿಗಿಂತ ಜಾಸ್ತಿ ಕೆಲಸ ಮಾಡಬೇಕು.
35
Image Credit : Social Media
ಇಲ್ಲವಾದರೆ ತಪ್ಪಾಗುತ್ತೆ. ಅವರು ಯಾವಾಗ ಸಿನಿಮಾ ಮಾಡಿದರೂ ಅದ್ಭುತವಾಗಿ ಮಾಡ್ತಾರೆ. ನಾನೂ ಒಬ್ಬ ಅಭಿಮಾನಿಯಾಗಿ ಅವರ ಸಿನಿಮಾಕ್ಕೆ ಕಾಯುತ್ತಿದ್ದೇನೆ ಎಂದಿದ್ದಾರೆ.
45
Image Credit : our own
ಸದ್ಯದ ಸಿನಿಮಾರಂಗದ ಸ್ಥಿತಿ ಸುಧಾರಿಸಬೇಕು ಎಂದಾದರೆ ಸಿನಿಮಾರಂಗದಲ್ಲಿರುವವರು ಈ ಸಿನಿಮಾದಿಂದ ನಮಗೆ ಏನು ಲಾಭ ಅನ್ನೋದನ್ನು ಬಿಟ್ಟು ನಾವೇನು ಕೊಡಬಹುದು ಅನ್ನೋದನ್ನು ಯೋಚನೆ ಮಾಡಬೇಕು. ಕಂಟೆಂಟ್‌ಗೆ ಮಹತ್ವ, ಬರಹಗಾರರಿಗೆ ಮಾನ್ಯತೆ ಸಿಗಬೇಕು.
55
Image Credit : Asianet News
ಇಲ್ಲಿ ದುಡ್ಡು ಮಾಡೋದು ಮುಖ್ಯವೇ ಆದರೂ ಅದೇ ಎಲ್ಲವೂ ಅಲ್ಲ. ಅದಕ್ಕಿಂತ ದೊಡ್ಡದು ಒಂದೊಳ್ಳೆ ಕಥೆಯನ್ನು ಹೇಳುವಾಗ ಆಗುವ ಥ್ರಿಲ್ಲಿಂಗ್ ಅನುಭವ ಎಂದಿದ್ದಾರೆ.
Latest Videos