ಆಪರೇಷನ್ ಯು ಚಿತ್ರದ ಮುಹೂರ್ತ; ಸಂದೇಶ ಸಾರುವ ಪಾತ್ರದಲ್ಲಿ Raghavendra Rajkumar
ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ ರಾಘವೇಂದ್ರ ರಾಜ್‌ಕುಮಾರ್. ಆಪರೇಷನ್ ಯು ಚಿತ್ರದ ಮೂಲಕ ಸಂದೇಶ ಸಾರಲು ಮುಂದಾಗಿದ್ದಾರೆ.

ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ (Raghavendraa Rajkumar) ನಟನೆಯ ಹೊಸ ಚಿತ್ರ‘ಆಪರೇಷನ್ ಯು’. (Operation U) ಅವಿರಾಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು.
ರಾಘವೇಂದ್ರ ರಾಜ್‌ಕುಮಾರ್ ಪತ್ನಿ ಮಂಗಳ ರಾಘವೇಂದ್ರ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಉತ್ತಮ… ಪಾಲಿ, ಯಶ್ ಶೆಟ್ಟಿನಾಯಕರಾಗಿ ಅಭಿನಯಿಸುತ್ತಿದ್ದು, ಸೋನಲ… ಮೊಂಥೆರೋ ಹಾಗೂ ಲಾಸ್ಯ ನಾಗರಾಜ್ ನಾಯಕಿಯರು.
ಈ ಸಂದರ್ಭದಲ್ಲಿ ನಿರ್ದೇಶಕ ಅವಿರಾಮ್ ಮಾತನಾಡಿ, ‘ಸೈಕಲಾಜಿಕಲ… ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಿದು. ಸಾಮಾನ್ಯ ಮನುಷ್ಯನನ್ನು ತಟ್ಟುವ, ಬಡಿದೆಬ್ಬಿಸುವ, ಎಚ್ಚರಿಕೆ ನೀಡುವ ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ.
ರಾಘಣ್ಣ ಸಮಾಜಕ್ಕೆ ಸಂದೇಶ ಸಾರುವ ಪಾತ್ರದಲ್ಲಿದ್ದಾರೆ. ಅವರು ನಮ್ಮ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದು ಖುಷಿ ಕೊಟ್ಟಿದೆ’ ಎಂದರು. ನಿರ್ಮಾಪಕ ಮಂಜುನಾಥ್, ‘ನನ್ನ ಮಗಳಿಗೋಸ್ಕರ ಈ ಸಿನಿಮಾ ಮಾಡುತ್ತಿದ್ದೇನೆ.
ಶ್ರೀಲಂಕಾ ಹೋದಾಗ ಕೇಳಿದ ಸ್ಟೋರಿ ಇದು. ನಿರ್ದೇಶಕರು ಈ ಸಿನಿಮಾಕ್ಕೆ ಚೆನ್ನಾಗಿ ಜೀವ ತುಂಬಿದ್ದಾರೆ’ ಎಂದು ಹೇಳಿದರು. ರವಿಶಂಕರ್, ಧರ್ಮ, ಅವಿನಾಶ್, ಮಾಳವಿಕ, ಸ್ಪರ್ಶ ರೇಖಾ, ಗೋವಿಂದೇ ಗೌಡ ಸೇರಿದಂತೆ ಹಲವರು ನಟಿಸುತ್ತಿದ್ದು, ರಾಘವೇಂದ್ರ ವಿ ಸಂಗೀತ ಇದೆ.
ಏನೇ ಆರೋಗ್ಯ ಸಮಸ್ಯೆ ಇದ್ದರೂ ಡೋಂಟ್ ಕೇರ್ ಎಂದು ಸಿನಿಮಾ ನನ್ನ ಜೀವ ನನ್ನ ಉಸಿರು ಎನ್ನುತ್ತಾ ರಾಘವೇಂದ್ರ ರಾಜ್‌ಕುಮಾರ್ ಬ್ಯಾಕ್ ಟು ಬ್ಯಾಕ್ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.