ಕರ್ನಾಟಕದ ಮುದ್ದು ಗೊಂಬೆ ರಾಧಿಕಾ ಪಂಡಿತ್… ಅಬ್ಬಬ್ಬಾ… ಎಂಥಾ ಸುಂದ್ರಿ ಕಣ್ರೀ ಇವರು
ನಟಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಹೊಸದಾಗಿ ಫೋಟೊ ಶೇರ್ ಮಾಡಿದ್ದು, ಸಿಂಪಲ್ ಆಗಿದ್ರು ಸಖತ್ ಸುಂದರಿಯಾಗಿ ಕಾಣಿಸುತ್ತಿದ್ದಾರೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ.

ಸ್ಯಾಂಡಲ್’ವುಡ್ ಸಿಂಡ್ರೆಲ್ಲಾ ಎಂದೇ ಖ್ಯಾತಿ ಪಡೆದಿರುವ ನಟಿ ರಾಧಿಕಾ ಪಂಡಿತ್ ಗೆ (Radhika Pandit) ವಯಸ್ಸು 41 ಆದ್ರೂ, ಇಬ್ಬರು ಮಕ್ಕಳ ತಾಯಿಯಾಗಿದ್ರೂ ಅವರ ಅಂದ ಮಾತ್ರ ಟೀನೆಜ್ ಹುಡುಗಿಯರನ್ನು ನಾಚಿಸುವಷ್ಟು ಸುಂದರವಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ರಾಧಿಕಾ ಪಂಡಿತ್ ಇದೀಗ ತಮ್ಮ ಇನ್’ಸ್ಟಾಗ್ರಾಂನಲ್ಲಿ (Instagram photos) ಸೀರೆಯುಟ್ಟಿರುವ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ಫೋಟೊದಲ್ಲಿ ಹೆಚ್ಚಿನ ಮೇಕಪ್ ಇಲ್ಲದೇ ಸಿಂಪಲ್ ಆಗಿ ಕಾಣಿಸಿಕೊಂಡಿದ್ದರೂ ಸಹ ತುಂಬಾನೆ ಸುಂದರಿಯಾಗಿ ಕಾಣಿಸ್ತಿದ್ದಾರೆ ಈ ಬೆಡಗಿ.
ಎಲ್ಲಾ ರೀತಿಯ ಪಿಂಕ್ ಬಣ್ಣವನ್ನು ಹೊಂದಿರುವ, ಜರಿ ಬಾರ್ಡರ್ ಇರುವ ಸಿಂಪಲ್ ಸೀರೆಯುಟ್ಟಿರುವ ರಾಧಿಕಾ, ಅದರ ಜೊತೆಗೆ ಚಿನ್ನದ ಆಭರಣಗಳನ್ನು ಧರಿಸಿದ್ದಾರೆ. ಜೊತೆಗೆ ಸೀರೆ ಮ್ಯಾಚ್ ಆಗುವ ಪಿಂಕ್ ಬಿಂದಿ ಧರಿಸಿದ್ದಾರೆ. ಈ ಲುಕ್ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದು, ನಿಮ್ಮ ಅಂದಕ್ಕೆ ನಾವು ಕರಗಿ ಹೋಗುತ್ತಿದ್ದೇವೆ ಎಂದಿದ್ದಾರೆ.
ಅಭಿಮಾನಿಗಳು ರಾಧಿಕಾ ಲುಕ್ ನಿಂದ ಎಷ್ಟು ಇಂಪ್ರೆಸ್ ಆಗಿದ್ದಾರೆ ಅಂದ್ರೆ, ಕಾಮೆಂಟ್ ನಲ್ಲೇ ನಟಿಯ ದೃಷ್ಟಿ ತೆಗೆಯುತ್ತಿದ್ದಾರೆ. ಅಷ್ಟೇ ಅಲ್ಲ ನಿಮ್ಮ ಈ ಫೋಟೊ ನೋಡಿ, ನಮ್ಮ ಮನಸು ಒಂದು ಕ್ಷಣ ಫ್ರೀಜ್ ಆಯ್ತು. ನನಗೆ ಅದನ್ನು ಹೇಗೆ ವಿವರಿಸಬೇಕೆಂದು ತಿಳಿಯುತ್ತಿಲ್ಲ. ನೀವು ಕವಿಯೊಂದರಿಂದ ಹೊರ ಬಂದಂತೆ ಕಾಣಿಸುತ್ತೀರಿ. ನೀವು ನಿಮ್ಮ ಕ್ಯಾರಿ ಮಾಡುವ ರೀತಿ, ಆ ಸೀರೆ ಎಲ್ಲವೂ ಸುಂದರವಾಗಿದೆ ಎಂದಿದ್ದಾರೆ.
ಏನು ಪ್ರಯತ್ನ ಮಾಡದೇನೆ ನಿಮ್ಮ ಮುಖ ಹೊಳೆಯುತ್ತೆ. ನೀವು ದೇವ ಲೋಕದಿಂದ ಬಂದಂತಹ ಏಂಜಲ್ ನಂತೆ ಕಾಣಿಸುತ್ತೀರಿ. ನಿಮ್ಮ ಔರಾ, ಎಷ್ಟೊಂದು ಪವರ್ ಫುಲ್ ಆಗಿದೆ ಅಂದ್ರೆ, ಅದು ಜನರನ್ನು ಒಂದು ಕ್ಷಣ ಅಲ್ಲಿಯೇ ನಿಲ್ಲಿಸಿ, ನಿಮ್ಮನ್ನು ನೋಡುವಂತೆ ಮಾಡುತ್ತಿದೆ. ಹೀಗೆ ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ನಟಿಯನ್ನು , ಆಕೆಯ ಅಂದವನ್ನು ಹೊಗಳಿ ಹೊಗಳಿ ತುಂಬಿಸಿ ಬಿಟ್ಟಿದ್ದಾರೆ ಜನ. ಅಷ್ಟೇ ಅಲ್ಲ ರಾಧಿಕಾ ಪಂಡಿತ್ ಕರ್ನಾಟಕದ ಮುದ್ದು ಗೊಂಬೆ ಅಂತಾನೂ ಹೇಳುತ್ತಿದ್ದಾರೆ.
ರಾಧಿಕಾ ಪಂಡಿತ್ ತಮ್ಮ ಅಮ್ಮ ಹಾಗೂ ಮಕ್ಕಳ ಜೊತೆಗೆ ಯಶ್ (Rocking Star Yash) ಅವರ ಸಹೋದರಿ ನಂದಿನಿಯವರ ಜೊತೆ ಕಾಣಿಸಿಕೊಂಡಿರುವ ಫೋಟೊ ವೈರಲ್ ಆಗಿತ್ತು. ಇದನ್ನು ನೋಡಿದ್ರೆ, ಯಶ್ ಸಹೋದರಿಯ ಕಾರ್ಯಕ್ರಮದಲ್ಲಿ ರಾಧಿಕಾ ಭಾಗವಹಿಸಿದಂತೆ ಕಾಣಿಸುತ್ತಿದೆ. ರಾಧಿಕಾ ಇತ್ತೀಚೆಗೆ ತಮ್ಮ ಸಹೋದರನೊಂದಿಗೆ ಸಮಯ ಕಳೆಯಲು ವಿದೇಶಕ್ಕೆ ತೆರಳಿದ್ದರು. ಅಲ್ಲಿಂದ ಬಂದ ಬಳಿಕ ಇದೀಗ ಫ್ಯಾಮಿಲಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.