ಪುಟ್ನಂಜ ನಟಿಗೆ 47 ವರ್ಷ ಅಂದ್ರೆ ನಂಬ್ತೀರಾ? ಇನ್ನೂ ಪಡ್ಡೆ ಹುಡುಗರ ನಿದ್ರೆ ಕೆಡಿಸೋ ಹಾಗಿದ್ದಾರೆ ಮೀನಾ!
ಪುಟ್ನಂಜ ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದ ನಟಿ ಮೀನಾ ಅವರಿಗೆ ಇದೀಗ 47 ವರ್ಷ ಆಗಿದ್ದು, ಇಂದಿಗೂ ಸಹ ಮತ್ತೆ ಮತ್ತೆ ನೋಡಬೇಕೆನಿಸುವ ಸೌಂದರ್ಯವನ್ನು ಹೊಂದಿದ್ದಾರೆ. ಇಲ್ಲಿದೆ ನೋಡಿ ಮೀನಾ ಅವರ ಇತ್ತೀಚಿನ ಫೋಟೋಗಳು.
ಪುಟ್ಟಮಲ್ಲಿ ಪುಟ್ಟಮಲ್ಲಿ ನೋಡು ನೀನಿಲ್ಲಿ, ಪೇಟೆ ಹೆಣ್ಣು ಹಳ್ಳಿ ಅಲಂಕಾರದಲ್ಲಿ…. ಎಂದು ರವಿಚಂದ್ರನ್ ಹಾಡು ಹಾಡುತ್ತಿದ್ದರೆ, ಬಣ್ಣ ಬಣ್ಣದ ಝರಿ ಸೀರಿಯುಟ್ಟು ನಾಚುತ್ತಿರುವ ಬೊಗಸೆ ಕಂಗಳ ಚೆಲುವೆ ಮೀನಾ ಹೆಜ್ಜೆ ಹಾಕುತ್ತಿದ್ದರೆ ಜನ ಹುಚ್ಚೆದ್ದು ಕುಣಿದಿದ್ದರು. ಆ ರೀತಿ ಮೋಡಿ ಮಾಡಿದ ನಟಿ ಮೀನಾ (Meena).
90ರ ದಶಕದಲ್ಲಿ ನಟಿಯ ಸೌಂದರ್ಯ ಹೇಗಿತ್ತೋ, ಇಂದಿಗೂ ಸಹ ಮೀನಾ ಅದೇ ಸೌಂದರ್ಯವನ್ನು ಉಳಿಸಿಕೊಂಡಿದ್ದಾರೆ. ಸದ್ಯ ತಮಿಳು ರಿಯಾಲಿಟಿ ಶೋ (reality show) ಒಂದರ ಫೋಟೋ ವೈರಲ್ ಆಗಿದ್ದು, ಈ ಫೋಟೊ ನೋಡಿದರೆ ಯಾರೂ ಸಹ ಅವರಿಗೆ 47 ವರ್ಷವಾಗಿದೆ ಎಂದು ಹೇಳಲು ಸಾಧ್ಯವೇ ಇಲ್ಲ.
ಬಾಲ ನಟಿಯಾಗಿ (Child Actress) ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ನಟಿ ಮೀನಾ ಚಿತ್ರರಂಗದಲ್ಲಿ 40 ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಬಾಲ ನಟಿಯಾಗಿ ಇವರು ತಮಿಳು, ತೆಲುಗು ಮತ್ತು ಮಲಯಾಲಂ ನಲ್ಲಿ ಸುಮಾರು 25 ಚಿತ್ರಗಳಲ್ಲಿ ನಟಿಸಿದ್ದರು. ಇಂದಿಗೂ ನಟಿಸುತ್ತಲೇ ಇದ್ದಾರೆ.
1990ರಲ್ಲಿ ತೆಲುಗಿನ ನವಯುಗಂ ಚಿತ್ರದ ಮೂಲಕ ಹಿರೋಯಿನ್ ಆಗಿ ಭಡ್ತಿ ಪಡೆದ ಮೀನಾ, ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಇಲ್ಲಿವರೆಗೆ ಇವರು ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಜನಿಕಾಂತ್, ಮೋಹನ್ ಲಾಲ್, ಮಮ್ಮೂಟಿ, ಕಮಲ್ ಹಾಸನ್ ಸೇರಿ ಸ್ಟಾರ್ ನಟರೊಂದಿಗೆ (Star actor) ಇವರು ನಟಿಸಿದ್ದಾರೆ.
ಕನ್ನಡದಲ್ಲಿ ರವಿಚಂದ್ರನ್ ಜೊತೆ ಪುಟ್ನಂಜ, ಮೊಮ್ಮಗ, ಚೆಲುವ ಚಿತ್ರಗಳಲ್ಲಿ ಮೀನಾ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಗ್ರಾಮ ದೇವತೆ, ಶ್ರೀ ಮಂಜುನಾಥ, ಸಿಂಹಾದ್ರಿಯ ಸಿಂಹ, ಸ್ವಾತಿ ಮುತ್ತು, ಗೇಮ್ ಆಫ್ ಲವ್, ಗೌಡ್ರು, ಮಹಾಸಾಧ್ವಿ ಮಲ್ಲಮ್ಮ, ಹೆಂಡ್ತೀರ್ ದರ್ಬಾರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಾ, ಯಾವುದೇ ಪಾತ್ರಕ್ಕೂ ಸೈ ಎನ್ನುವಂತೆ ನಟಿಸಿದ ಇವರು. ಕೇವಲ ನಟಿಯಾಗಿ ಮಾತ್ರವಲ್ಲ, ಹಿನ್ನೆಲೆ ಗಾಯಕಿ, ಡಬ್ಬಿಂಗ್ ಆರ್ಟಿಸ್ಟ್ (dubbing artist) ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸೀರಿಯಲ್ ಗಳಲ್ಲೂ ಇವರು ತಮ್ಮ ನಟನಾ ಅಭಿನಯ ತೋರಿಸಿದ್ದಾರೆ.
ಪರ್ಸನಲ್ ಲೈಫ್ ಬಗ್ಗೆ ಹೇಳೋದಾದ್ರೆ ನಟಿ ಮೀನಾ ಅವರು ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ವಿದ್ಯಾ ಸಾಗರ್ ಅವರನ್ನು 2009ರಲ್ಲಿ ಮದುವೆಯಾಗಿದ್ದರು. ಇವರಿಗೆ ನೈನಿಕಾ ಎಂಬ ಮುದ್ದಾದ ಮಗಳು ಇದ್ದಾಳೆ. ಕಳೆದ ವರ್ಷ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಇವರ ಪತಿ ಕೊನೆಯುಸಿರೆಳೆದರು.
ಇನ್ನು ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಮಾಡಿದ ಅಮೋಘ ಸಾಧನೆಗಾಗಿ, ಕೆಲವು ದಿನಗಳ ಹಿಂದೆ ದೊಡ್ಡಮಟ್ಟದಲ್ಲಿ ಅಭಿನಂದನಾ ಕಾರ್ಯಕ್ರಮ ಸಹ ನಡೆದಿತ್ತು. 47 ವರ್ಷದಲ್ಲೂ ಪಡ್ಡೆ ಹುಡುಗರ ನಿದ್ದೆ ಕೆಡಿಸುವಂತಿರುವ ಈ ಬ್ಯೂಟಿ ಮತ್ತೆ ಕನ್ನಡದಲ್ಲಿ ಬೇಗ ನಟಿಸುವಂತಾಗಲಿ ಎಂದು ಆಶಿಸೋಣ.