James 2022: ಅಪ್ಪು ಕೊನೆ ಚಿತ್ರದ ಎಕ್ಸ್‌ಕ್ಲೂಸಿವ್ ಸ್ಟಿಲ್ಸ್ ರಿಲೀಸ್ ಮಾಡಿದ ಚಿತ್ರತಂಡ!
ಸ್ಯಾಂಡಲ್‌ವುಡ್‌ನ ಮೇರುನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ತಂಡದಿಂದ ಎರಡು ಹೊಸ ಗುಡ್‌ನ್ಯೂಸ್ ಸಿಕ್ಕಿದೆ. ಅಪ್ಪು ಹುಟ್ಟಿದ ದಿನದಂದೇ 'ಜೇಮ್ಸ್' ಸಿನಿಮಾ ರಿಲೀಸ್ ಪಕ್ಕಾ ಎಂದು ಘೋಷಣೆ ಮಾಡಿದ್ದು, ಅದಕ್ಕೂ ಮುನ್ನ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
ಕನ್ನಡ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' (James) ಕುರಿತಾಗಿ ಒಂದೆರಡು ಫೋಟೋಗಳ ಹೊರತಾಗಿ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿರಲಿಲ್ಲ. ಇದೀಗ ಪುನೀತ್ ರಾಜ್‌ಕುಮಾರ್ ಅವರ ವಿವಿಧ ಗೆಟಪ್ ಗಳ ಫೋಟೋಗಳನ್ನು ರಿಲೀಸ್ ಮಾಡಿದೆ.
ಈ ಫೋಟೋಗಳಲ್ಲಿ ಪುನೀತ್ ಸೋಲ್ಜರ್ (Soldier) ಗೆಟಪ್‌ನಲ್ಲಿ ಹಾಗೂ ಹಾಡುಗಳ ಚಿತ್ರೀಕರಣದ ಫೋಟೋ ಮತ್ತು ಇತರ ಸನ್ನಿವೇಶದ ಪೋಟೋ ಸ್ಟಿಲ್ಸ್‌ಗಳು (Photo Stills) ಸದ್ಯ ಅಭಿಮಾನಿಗಳಿಗೆ (Fans) ಲಭ್ಯವಾಗಿವೆ. ಪುನೀತ್ ಪಾತ್ರಕ್ಕೆ ಶಿವರಾಜ್‌ಕುಮಾರ್ ಧ್ವನಿ ನೀಡಿದ್ದಾರೆ.
'ಜೇಮ್ಸ್' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ಶಿವರಾಜ್‌ಕುಮಾರ್ (Shivarajkumar) ಮತ್ತು ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ನಟಿಸಿದ್ದರಿಂದ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಮೂವರು ಸಹೋದರರನ್ನು ನೋಡುವ ಭಾಗ್ಯ ಸಿನಿರಸಿಕರಿಗೆ ಸಿಕ್ಕಿದೆ. ಇದು ಪುನೀತ್ ಅವರ ಕನಸು ಕೂಡ ಆಗಿದ್ದು, ಈ ಸಿನಿಮಾದ ಮೂಲಕ ಈಡೇರಿದೆ.
'ಜೇಮ್ಸ್' ಚಿತ್ರಕ್ಕೆ ಮೊದಲ ಬಾರಿಗೆ ಚೇತನ್ ಕುಮಾರ್ (Chetan Kumar) ಆಕ್ಷನ್ ಕಟ್ ಹೇಳಿದ್ದು, ಸಿನಿಮಾವನ್ನು ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರಂತೆ. ಇದೇ ಮೊದಲ ಬಾರಿಗೆ ಪುನೀತ್ ಅವರು ವಿಶೇಷ ಸ್ಟಂಟ್ಸ್, ಹೈವೋಲ್ಟೇಜ್ ಆ್ಯಕ್ಷನ್ ಜೊತೆಗೆ ವಿಭಿನ್ನ ಗೆಟಪ್‌ನಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಮತ್ತಷ್ಟು ಕುತೂಹಲ ಮೂಡಿಸಿದೆ.
'ಜೇಮ್ಸ್' ಸಿನಿಮಾವನ್ನು ಹೋಸಪೇಟೆ, ಗೋವಾ (Goa), ಹೈದರಾಬಾದ್ (Hyderabd) ಮತ್ತು ಕಾಶ್ಮೀರದಲ್ಲಿ (Kashmir) ಚಿತ್ರೀಕರಿಸಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಜೇಮ್ಸ್ ಸಿನಿಮಾ ಮಾರ್ಚ್ 17ರಂದು ಬಿಡುಗಡೆ ಆಗುತ್ತಿದೆ.
'ಜೇಮ್ಸ್' ಶೂಟಿಂಗ್ ಸಮಯದಲ್ಲಿ ಪುನೀತ್ ಸರ್ ಆಕ್ಷನ್ ಸೀಕ್ವೆನ್ಸ್ ಪೋಷನ್ಸ್‌ನಲ್ಲಿ ಮಾಡಿದಂತಹ ವಿಡಿಯೋ ಕ್ಲಿಪ್ಸ್‌ಗಳನ್ನು ತಮ್ಮ ಮೊಬೈಲ್‌ಗೆ ಹಾಕಿಕೊಂಡು ನೋಡುತ್ತಾ ಖುಪಿಪಡುತ್ತಿದ್ದರು. ಚಿತ್ರದ ಎಲ್ಲಾ ಫೈಟ್ ಸೀನ್ ಅವರ ಮೊಬೈಲ್ನಲ್ಲಿತ್ತು ಎಂದು ನಿರ್ದೇಶಕ ಚೇತನ್ ಹೇಳಿದ್ದಾರೆ.
ಸೋಲ್ಜರ್ ಗೆಟಪ್‌ನಲ್ಲಿರುವ ಪುನೀತ್ ಅವರನ್ನು ಮೊದಲು ನೋಡಿದ್ದು ಅಶ್ವಿನಿ (Ashwini Puneeth Rajkumar) ಮೇಡಂ. ಆಯುಧ ಪೂಜೆ ಹಾಗೂ ವಿಜಯದಶಮಿ ಸಂದರ್ಭದಲ್ಲಿ ಹಬ್ಬವನ್ನು ಬಿಟ್ಟುಬಂದು ಪುನೀತ್ ಸರ್ ಚಿತ್ರಕ್ಕೋಸ್ಕರ ಸಾಂಗ್ ಮಾಡಿಕೊಟ್ಟಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ನಾನು ತುಂಬಾನೇ ಲಕ್ಕಿ ಎಂದು ಚೇತನ್ ತಿಳಿಸಿದ್ದಾರೆ.
ಕಿಶೋರ್ ಪತ್ತಿಕೊಂಡ (Kishore Pattikonda) ನಿರ್ಮಾಣದಲ್ಲಿ 'ಜೇಮ್ಸ್' ಚಿತ್ರ ಮೂಡಿಬಂದಿದ್ದು, ಪುನೀತ್‌ಗೆ ನಾಯಕಿಯಾಗಿ ಕಾಲಿವುಡ್ ನಟಿ ಪ್ರಿಯಾ ಆನಂದ್ (Priya Anand) ನಟಿಸುತ್ತಿದ್ದಾರೆ. 'ಸ್ಟೈಲಿಶ್ ವಿಲನ್ (Vilain) ಪಾತ್ರದಲ್ಲಿ ಹಿರಿಯ ತಮಿಳು ನಟ ಶರತ್ ಕುಮಾರ್ (Sarathkumar) ಕಾಣಿಸಿಕೊಂಡಿದ್ದಾರೆ.