- Home
- Entertainment
- Sandalwood
- Photos: ಪುನೀತ್ ರಾಜ್‌ಕುಮಾರ್ ಮ್ಯಾನೇಜರ್ ಮಗನ ಅದ್ದೂರಿ ಮದುವೆಗೆ ಸಾಕ್ಷಿಯಾದ ಅಣ್ಣಾವ್ರ ಕುಟುಂಬ!
Photos: ಪುನೀತ್ ರಾಜ್‌ಕುಮಾರ್ ಮ್ಯಾನೇಜರ್ ಮಗನ ಅದ್ದೂರಿ ಮದುವೆಗೆ ಸಾಕ್ಷಿಯಾದ ಅಣ್ಣಾವ್ರ ಕುಟುಂಬ!
ಕಳೆದ ನಲವತ್ತು ವರ್ಷಗಳಿಂದ ಚಿತ್ರರಂಗದಲ್ಲಿರುವ ಎನ್ ಎಸ್ ರಾಜ್‌ಕುಮಾರ್ ಅವರ ಮಗ ಸೂರಜ್ ಮದುವೆ ನಡೆದಿದೆ. ಅದ್ದೂರಿಯಾಗಿ ನಡೆದ ಈ ಮದುವೆಯಲ್ಲಿ ಚಿತ್ರರಂಗದ ಗಣ್ಯರು, ರಾಜಕೀಯ ವ್ಯಕ್ತಿಗಳು ಭಾಗವಹಿಸಿ, ನವಜೋಡಿಗೆ ಶುಭ ಹಾರೈಸಿದ್ದಾರೆ. ಅಂದಹಾಗೆ ಪುನೀತ್ ರಾಜ್‌ಕುಮಾರ್ ಅವರ ಮ್ಯಾನೇಜರ್ ಆಗಿ ರಾಜ್‌ಕುಮಾರ್ ಕೆಲಸ ಮಾಡಿದ್ದರು.

ನಿರ್ಮಾಪಕ ಎನ್ ಎಸ್ ರಾಜ್‌ಕುಮಾರ್ ಅವರು ʼಮೈನಾʼ, ʼಮೈತ್ರಿʼಯಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ರಾಜ್‌ಕುಮಾರ್ ಮಗನ ಮದುವೆಗೆ ಸಂತೋಷ್ ಆನಂದ್‌ರಾಮ್ ಆಗಮಿಸಿದ್ದರು.
ರಾಜ್‌ಕುಮಾರ್ ಅವರು ಕಳೆದ ನಲವತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ. ಪುನೀತ್ ರಾಜ್‌ಕುಮಾರ್ ಕುಟುಂಬದ ಜೊತೆಗೆ ಒಳ್ಳೆಯ ಸಂಬಂಧ ಜೊಂದಿದ್ದಾರೆ.
ಪ್ರೊಡಕ್ಷನ್ ಮ್ಯಾನೇಜರ್, ಅಸಿಸ್ಟಂಟ್ ಕ್ಯಾಮರಾಮ್ಯಾನ್, ಟೆಕ್ನಿಷಿಯನ್, ಧಾರಾವಾಹಿ ನಿರ್ಮಾಪಕ, ಸಿನಿಮಾ ನಿರ್ಮಾಪಕ ಆಗಿ ಬಡ್ತಿ ಪಡದಿದ್ದಾರೆ.
ರಾಜ್‌ಕುಮಾರ್ ಅವರು ಆರಂಭದಲ್ಲಿ ʼತುಳಸಿʼ, ʼಗೋಧೂಳಿʼ, ʼವಾತ್ಸಲ್ಯʼ ಧಾರಾವಾಹಿಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಈ ಧಾರಾವಾಹಿಗಳು ಹಿಟ್ ಆಗಿತ್ತು.
ಆರಂಭದಲ್ಲಿ ʼಕಾಮಣ್ಣನ ಮಕ್ಕಳುʼ ಸಿನಿಮಾಕ್ಕೆ ಎನ್ ಎಸ್ ರಾಜ್‌ಕುಮಾರ್ ಅವರು ಹಣ ಹೂಡಿದ್ದರು. ಕಿಚ್ಚ ಸುದೀಪ್ ಅವರು ಈ ಸಿನಿಮಾದ ಹೀರೋ ಆಗಿದ್ದರು.
ಎನ್ ಎಸ್ ರಾಜ್‌ಕುಮಾರ್ ಅವರಿಗೆ ಚಿತ್ರರಂಗದ ಗಣ್ಯರ ಸ್ನೇಹ ಸಂಬಂಧವಿದೆ. ಹೀಗಾಗಿ ಇವರ ಮಗನ ಮದುವೆಯಲ್ಲಿ ದೊಡ್ಡ ಮಟ್ಟದಲ್ಲಿ ಸೆಲೆಬ್ರಿಟಿಗಳು ಆಗಮಿಸಿದ್ದರು.
ʼಹ್ಯಾಟ್ರಿಕ್ ಹೀರೋʼ ನಟ ಶಿವರಾಜ್‌ಕುಮಾರ್ ಅವರು ಸೂರಜ್-ಮನಿಷಾ ಮದುವೆಯಲ್ಲಿ ಭಾಗಿಯಾಗಿ, ನವಜೋಡಿಗೆ ಶುಭ ಹಾರೈಸಿದ್ದಾರೆ.
ದೇವೇಗೌಡ್ರು ಕೂಡ ಈ ಮದುವೆಗೆ ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ. ಒಟ್ಟಿನಲ್ಲಿ ಈ ಮದುವೆಯಲ್ಲಿ ದೊಡ್ಡ ತಾರಾಬಳಗ ಭಾಗಿ ಆಗಿದೆ ಎನ್ನಬಹುದು.
ಆರ್ ಅಶೋಕ್ ಅವರು ಕೂಡ ಎನ್ ಎಸ್ ರಾಜ್‌ಕುಮಾರ್ ಮಗ ಸೂರಜ್ ಹಾಗೂ ಮನಿಷಾ ಅವರ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಎನ್ ಎಸ್ ರಾಜ್‌ಕುಮಾರ್ ಮಗ ಸೂರಜ್ ಹಾಗೂ ಮನಿಷಾ ಅವರ ಸಂಗೀತ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್ ಅವರು ಪತ್ನಿ ಗೀತಾ ಜೊತೆಗೆ ಬಂದು ಶುಭ ಹಾರೈಸಿದ್ದರು.
ನಟಿ ಜಯಮಾಲಾ ಅವರು ಸೂರಜ್ ಹಾಗೂ ಮನಿಷಾ ದಂಪತಿಗೆ ಉಡುಗೊರೆ ಕೊಟ್ಟು ಶುಭ ಹಾರೈಸಿದ್ದಾರೆ. ಇತ್ತೀಚೆಗೆ ಜಯಮಾಲಾ ಕೂಡ ಮಗಳ ಮದುವೆ ಮಾಡಿದರು.
ದುನಿಯಾ ವಿಜಯ್ ಅವರು ಎನ್ ಎಸ್ ರಾಜ್‌ಕುಮಾರ್ ಮಗನ ಮದುವೆಗೆ ಆಗಮಿಸಿದ್ದರು. ನವಜೋಡಿಗೆ ಶುಭ ಹಾರೈಸಿದ್ದಾರೆ. ಒಟ್ಟಿನಲ್ಲಿ ಈ ಆರತಕ್ಷತೆ ಭರ್ಜರಿಯಾಗಿ ನೆರವೇರಿದೆ.
ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ ಈ ಆರತಕ್ಷತೆಗೆ ಆಗಮಿಸಿದ್ದಾರೆ. ಈ ಮೂಲಕ ಅದ್ದೂರಿ ಆರತಕ್ಷತೆಗೆ ಇನ್ನೂ ಹೆಚ್ಚಿನ ಮೆರುಗು ಸಿಕ್ಕಿದೆ.