- Home
- Entertainment
- Sandalwood
- ಏನ್ ಬ್ಯೂಟಿ ಮೇಡಂ ನೀವು......; ಪ್ರಿಯಾಂಕಾ ಉಪೇಂದ್ರ ಹೊಸ ಫೋಟೋ ಪಡ್ಡೆ ಹುಡುಗರ ಕಣ್ಣು!
ಏನ್ ಬ್ಯೂಟಿ ಮೇಡಂ ನೀವು......; ಪ್ರಿಯಾಂಕಾ ಉಪೇಂದ್ರ ಹೊಸ ಫೋಟೋ ಪಡ್ಡೆ ಹುಡುಗರ ಕಣ್ಣು!
ವೈರಲ್ ಆಯ್ತು ಪ್ರಿಯಾಂಕಾ ಉಪೇಂದ್ರ ಹೊಸ ಫೋಟೋಶೂಟ್. ಉಪ್ಪಿ ಅರಮನೆಯ ಅರಗಿಣಿ ನೀವು ಎಂದ ನೆಟ್ಟಿಗರು....

ಕನ್ನಡ ಚಿತ್ರರಂಗದ ಬೆಂಗಾಲಿ ಬ್ಯೂಟಿ, ರಿಯಲ್ ಸ್ಟಾರ್ ಬಿಗ್ ಸಪೋರ್ಟರ್ ಹಾಗೂ ವಂಡರ್‌ಫುಲ್ ನಟಿ ಪ್ರಿಯಾಂಕಾ ಉಪೇಂದ್ರ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
ಹಸಿರು ಬಣ್ಣದ ಬ್ಲೌಸ್‌ಗೆ ಹಸಿರು ಬಣ್ಣದ ಸೀರೆಯಲ್ಲಿ ಪ್ರಿಯಾಂಕಾ ಮಿಂಚಿದ್ದಾರೆ. ಇದಕ್ಕೆ ಸೂಟ್ ಆಗುವಂತೆ ಡೈಮೆಂಡ್ ಕಲ್ಲುಗಳು ಇರುವ ಸರ,ಬಳೆ ಮತ್ತು ಉಂಗುರ ಧರಿಸಿದ್ದಾರೆ.
ಸವಿತಾ ದೇವರಾಜ್ ರೆಡ್ಡಿ ಡಿಸೈನ್ ಮಾಡಿರುವ ಸೀರೆ ಇದಾಗಿದ್ದು ಆಭರಣವನ್ನು ಡೀ ಸಿಲ್ವರ್ ಸ್ಟುಡಿಯೋ ನೀಡಿದ್ದಾರೆ. ಫೋಟೋಗಳನ್ನು ಕಾರುಣ್ಯಾ ರಾಮ್ ತೆಗೆದಿದ್ದಾರೆ.
ಧನು ಶೆಟ್ಟಿ ಮಾಡಿರುವ ಮೇಕಪ್‌ನಲ್ಲಿ ಪ್ರಿಯಾಂಕಾ ಉಪೇಂದ್ರ ನಿಜಕ್ಕೂ ಗಿಣಿ ರೀತಿ ಕಾಣಿಸುತ್ತಿದ್ದಾರೆ. ವೈರಲ್ ಆಗುತ್ತಿರುವ ಫೋಟೋಗಳಿಗೆ ಹೂವೇ ಹೂವೇ ಹಾಡನ್ನು ಹಾಕಿದ್ದಾರೆ.
ಮಮ್ಮಿ, ಸೆಕೆಂಡ್ ಹಾಫ್, ದೇವಕಿ, ಕ್ರೇಜಿ ಸ್ಟಾರ್ ಸಿನಿಮಾಗಳಲ್ಲಿ ಪ್ರಿಯಾಂಕಾ ಸಖತ್ ಡಿಫರೆಂಟ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಯಲ್ಲಿ ಉಪ್ಪಿ 2 ನಿರ್ಮಾಣ ಮಾಡಿದ್ದಾರೆ.
ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕಾ ಮತ್ತೆ ಒಟ್ಟಿಗೆ ಸಿನಿಮಾ ಮಾಡಬೇಕು ಅನ್ನೋದು ಅಭಿಮಾನಿಗಳ ಆಸೆ. ಸಂತೂರ್ ಮಮ್ಮಿ, ಯಂಗ್ ಮಮ್ಮಿ ಎಂದು ಅಭಿಮಾನಿಗಳು ಬಿರುದು ನೀಡಿದ್ದಾರೆ.