- Home
- Entertainment
- Sandalwood
- Rishab Shetty ಏಕಾಏಕಿ ಎಲ್ರನ್ನೂ ಅನ್‌ಫಾಲೋ ಮಾಡಿದ್ಯಾಕೆ? ಪ್ರಮೋದ್ ಶೆಟ್ರಿಂದ ಬಂತು ಸ್ಪಷ್ಟನೆ
Rishab Shetty ಏಕಾಏಕಿ ಎಲ್ರನ್ನೂ ಅನ್‌ಫಾಲೋ ಮಾಡಿದ್ಯಾಕೆ? ಪ್ರಮೋದ್ ಶೆಟ್ರಿಂದ ಬಂತು ಸ್ಪಷ್ಟನೆ
ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪತ್ನಿ, ಫಿಲ್ಮ್ಸ್ ಮತ್ತು ಫೌಂಡೇಷನ್ ಖಾತೆಗಳನ್ನು ಹೊರತುಪಡಿಸಿ ಎಲ್ಲರನ್ನೂ ಅನ್‌ಫಾಲೋ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಅವರ ಆಪ್ತಮಿತ್ರ ಪ್ರಮೋದ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಅನ್‌ಫಾಲೋ ಪ್ರಹಸನ
ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸ ಆಗ್ತಿರೋ ಸುದ್ದಿ ಎಂದರೆ, ರಿಷಬ್ ಶೆಟ್ಟಿ ಅವರು, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮೂವರನ್ನು ಬಿಟ್ಟು ಎಲ್ಲರನ್ನೂ ಅನ್‌ಫಾಲೋ ಮಾಡಿರುವುದು. ಕಾಂತಾರ ಚಿತ್ರದ ಬಳಿಕ ರಿಷಬ್ ಶೆಟ್ಟಿ ಮೊದಲಿಗೆ ಕೆಲವರನ್ನು ಅನ್‌ಫಾಲೋ ಮಾಡಿರುವುದಾಗಿ ಸುದ್ದಿ ಸದ್ದು ಮಾಡಿತ್ತು. ಆ ಬಳಿಕ ಒಬ್ಬೊಬ್ಬನ್ನೇ ಅನ್‌ಫಾಲೋ ಮಾಡುತ್ತಾ ಕೊನೆಗೆ ಮೂವರನ್ನು ಬಿಟ್ಟು ಎಲ್ಲರನ್ನೂ ಅನ್‌ಫಾಲೋ ಮಾಡಿದ್ದಾರೆ.
ಮೂವರನ್ನು ಮಾತ್ರ ಫಾಲೋ
ಪತ್ನಿ ಪ್ರಗತಿ ಶೆಟ್ಟಿ, ರಿಷಬ್ ಶೆಟ್ಟಿ ಫಿಲ್ಮ್ಸ್ ಮತ್ತು ರಿಷಬ್ ಶೆಟ್ಟಿ ಫೌಂಡೇಷನ್ ಇಷ್ಟನ್ನು ಬಿಟ್ಟು ಎಲ್ಲರನ್ನೂ ಅನ್‌ಫಾಲೋ ಮಾಡಿದ್ದಾರೆ. ಈ ಬಗ್ಗೆ ಯಾವುದೇ ಸೂಚನೆ ನೀಡದೇ ಏಕಾಏಕಿ ಅನ್‌ಫಾಲೋ ಮಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇದೊಳ್ಳೆ ಕಥೆಯಾಯ್ತಲ್ಲ
ಇದೀಗ ಈ ಬಗ್ಗೆ ಅವರ ಆಪ್ತ ಪ್ರಮೋದ್ ಶೆಟ್ಟಿ ಮಾಧ್ಯಮವೊಂದರಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗೆ ಕುಳಿತಿದ್ದಾಗ ಸಿಬ್ಬಂದಿಯೊಬ್ಬರು ಬಂದು ಏನ್ ಸರ್, ರಿಷಬ್ ಶೆಟ್ಟಿ ಹೀಗೆ ಮಾಡಿಬಿಟ್ಟಿದ್ದಾರೆ ಎಂದ. ಇನ್ಸ್ಟಾಗ್ರಾಮ್ ನೋಡಿದಾಗ, ಮೂವರನ್ನು ಬಿಟ್ಟು ಎಲ್ಲರನ್ನೂ ಅನ್‌ಫಾಲೋ ಮಾಡಿದ್ದರಿಂದ ಇದೊಳ್ಳೆ ಕಥೆಯಾಯ್ತಲ್ಲಪ್ಪ, ನನ್ನನ್ನಷ್ಟೇ ಅಲ್ಲ, ಎಲ್ಲರನ್ನೂ ಅನ್‌ಫಾಲೋ ಮಾಡಿದ್ದಾನಲ್ಲ. ಏನೋ ಕಾರಣ ಇರುತ್ತೆ ಬಿಡು ಅಂದೆ ಎಂದು ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ ನಟ.
ಕಾರಣ ಗೊತ್ತಿಲ್ಲ
ಅವನು ಯಾಕೆ ಅನ್‌ಫಾಲೋ ಮಾಡಿದ್ದಾನೋ ಗೊತ್ತಿಲ್ಲ. ಆದರೆ ಪ್ರತಿಯೊಬ್ಬರಿಗೂ ಬೆಳವಣಿಗೆಯ ಹಂತವಿರುತ್ತದೆ. ನಾನೀಗ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುತ್ತಿದ್ದೇನೆ. ನನ್ನ ಇನ್ನೊಂದಿಷ್ಟ ಸಿನಿಮಾ ಆದ ಮೇಲೆ ಅದಕ್ಕೊಂದು ಟೀಮ್ ಅಂತ ಬರುತ್ತದೆ. ಆಮೇಲೆ ಏಜೆನ್ಸಿ ಬರುತ್ತದೆ. ಆ ಸಮಯದಲ್ಲಿ ಇವೆಲ್ಲಾ ಮಾಮೂಲು ಎಂದಿದ್ದಾರೆ ಪ್ರಮೋದ್ ಶೆಟ್ಟಿ.
ಏಜೆನ್ಸಿ ಐಡಿಯಾ
ಏಜೆನ್ಸಿ ಬಂದ ಮೇಲೆ ಅವರ ಐಡಿಯಾ ಬೇರೆ ಇರುತ್ತದೆ, ಸ್ಟ್ಯಾಟಜಿ ಬೇರೆ ಇರುತ್ತದೆ. ಇಷ್ಟೊಂದು ಫ್ಯಾನ್ಸ್ ಅನ್ನು ಫಾಲೋ ಮಾಡುವುದು ಸರಿಯಲ್ಲ ಎನ್ನಬಹುದು. ಲಿಮಿಡೆಟ್ ಇರಬೇಕು ಎಂದಿರಬಹುದು. ಹೀಗೆಲ್ಲಾ ಆಗಿರೋದಕ್ಕೆ ರಿಷಬ್ ಈ ರೀತಿ ಮಾಡಿರಬಹುದು ಎಂದಿದ್ದಾರೆ ನಟ.
ಕಾಲ್ ಮಾಡೋದು ಸರಿಯಲ್ಲ
ಫ್ರೆಂಡ್ಷಿಪ್ನಲ್ಲಿ ಎದುರು ಬದುರು ಕುಳಿತಾಗ ಯಾಕೋ ಹೀಗೆ ಮಾಡ್ದೆ ಅಂತ ಕೇಳಬಹುದು. ಆದರೆ ಇದಕ್ಕಾಗಿಯೇ ಕಾಲ್ ಮಾಡಿ ಕೇಳೋದು ಸರಿ ಇರಲ್ಲ ಅಂತ ಕೇಳಲಿಲ್ಲ. ಏನೋ ಒಂದು ಕಾರಣ ಇರುತ್ತೆ ಬಿಡಿ ಎಂದಿದ್ದಾರೆ ಪ್ರಮೋದ್ ಶೆಟ್ಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

