ಆಗಸ್ಟ್ ತಿಂಗಳಲ್ಲಿ ಅಬ್ಬರ ತೆರೆಗೆ; ಇಂದು ಚಿತ್ರದ ಟೀಸರ್ ರಿಲೀಸ್!
ಇಂದು ಅಬ್ಬರ ಸಿನಿಮಾ ಟೀಸರ್ ರಿಲೀಸ್. ಡಿಫರೆಂಟ್ ಲುಕಲ್ಲಿ ಕಾಣಿಸಿಕೊಂಡ ಪ್ರಜ್ವಲ್
15

ಪ್ರಜ್ವಲ್ ದೇವರಾಜ್ ನಟನೆಯ ‘ಅಬ್ಬರ’ ಸಿನಿಮಾ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು (ಜು.18) ಚಿತ್ರದ ಟೀಸರ್ ಬಿಡುಗಡೆ ಆಗುತ್ತಿದೆ.
25
ಟೀಸರ್ ರಿಲೀಸ್ ಜೊತೆಗೆ ಆಗಸ್ಟ್ ತಿಂಗಳಲ್ಲಿ ಯಾವ ದಿನ ಸಿನಿಮಾ ಬಿಡುಗಡೆ ಎಂಬುದನ್ನು ಅಧಿಕೃತವಾಗಿ ಘೋಷಿಸುತ್ತಿದ್ದಾರೆ.
35
ರಾಮ್‌ನಾರಾಯಣ್ ನಿರ್ದೇಶನದ ಈ ಚಿತ್ರದ ಟೀಸರ್ ಬಿಡುಗಡೆಯನ್ನು ತುಂಬಾ ಅದ್ದೂರಿಯಾಗಿ ಅನಾವರಣ ಮಾಡುತ್ತಿದ್ದಾರೆ. ಆ ಮೂಲಕ ತುಂಬಾ ದಿನಗಳ ಗ್ಯಾಪ್ ನಂತರ ಪ್ರಜ್ವಲ್ ದೇವರಾಜ್ ಅವರ ಮತ್ತೊಂದು ಮಾಸ್ ಸಿನಿಮಾ ತೆರೆ ಮೇಲೆ ಬರುವುದಕ್ಕೆ ಸಜ್ಜಾಗುತ್ತಿದೆ.
45
ಬಸವರಾಜ್ ಮಂಚಯ್ಯ ನಿರ್ಮಾಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ರಾಜಶ್ರೀ ಪೊನ್ನಪ್ಪ, ನಿಮಿಕಾ ರತ್ನಾಕರ್, ಲೇಖಾಚಂದ್ರ ಚಿತ್ರದ ನಾಯಕಿಯರು.
55
ಸದ್ಯಕ್ಕೆ ಈಗ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದ್ದು, ಸಾಕಷ್ಟವಿಶೇಷತೆಗಳಿಂದ ಕೂಡಿದೆ. ಇದರ ಜತೆಗೆ ಯೋಗರಾಜ್ ಭಟ್ ಅವರ ಸಾಹಿತ್ಯದ ಎಣ್ಣೆ ಹಾಡು ಇತ್ತೀಚೆಗೆ ಬಿಡುಗಡೆ ಆಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
Latest Videos