- Home
- Entertainment
- Sandalwood
- ಸ್ಯಾಂಡಲ್‌ವುಡ್ ಸ್ಟಾರ್ ಜೊತೆ ಮೋದಿ; 'ನನ್ನನ್ನು ನೋಡಿ ಅಯ್ಯೋ..' ಅಂದ್ರು ಎಂದ RJ ಶ್ರದ್ಧಾ
ಸ್ಯಾಂಡಲ್‌ವುಡ್ ಸ್ಟಾರ್ ಜೊತೆ ಮೋದಿ; 'ನನ್ನನ್ನು ನೋಡಿ ಅಯ್ಯೋ..' ಅಂದ್ರು ಎಂದ RJ ಶ್ರದ್ಧಾ
ಏರೋ ಇಂಡಿಯಾ ಉದ್ಘಾಟನೆಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಸ್ಯಾಂಡಲ್ ವುಡ್ ಗಣ್ಯರನ್ನು ಭೇಟಿಯಾಗಿದ್ದಾರೆ.

ಏರೋ ಇಂಡಿಯಾ ಉದ್ಘಾಟನೆಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಸ್ಯಾಂಡಲ್ ವುಡ್ ಗಣ್ಯರನ್ನು ಭೇಟಿಯಾಗಿದ್ದಾರೆ. ಭಾನುವಾರ ರಾತ್ರಿ ರಾಜಭವನದಲ್ಲಿ ಉದ್ಯಮಿಗಳು, ಸಿನಿಮಾ ತಾರೆಯರು ಹಾಗೂ ಖ್ಯಾತ ಕ್ರಿಕೆಟಿಗರನ್ನು ಪ್ರಧಾನಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಾಜಭವನಕ್ಕೆ ಆಗಮಿಸಿದ ಮೋದಿ ಅವರನ್ನು ರಾಜ್ಯಪಾಲರು ಸ್ವಾಗತಿಸಿದರು. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸಚಿವ ಗೋಪಾಲಯ್ಯ ಉಪಸ್ಥಿತರಿದ್ದರು.
ಮೊದಲ ಬಾರಿಗೆ ಪ್ರಧಾನಿ ಮೋದಿ ಸ್ಯಾಂಡಲ್ ವುಡ್ ಕಲಾವಿದರನ್ನು ಭೇಟಿಯಾಗಿದ್ದಾರೆ. ಮೋದಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಕನ್ನಡ ಕಲಾವಿದರ ಫೋಟೋಗಳು ವೈರಲ್ ಆಗಿದೆ. ರಾಕಿಂಗ್ ಸ್ಟಾರ್ ಯಶ್, ರಿಷಬ್ ಶೆಟ್ಟಿ, ಹೊಂಬಾಳೆ ಫಿಲ್ಮ್ಸ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್ ಕುಮಾರ್, ಆರ್ ಜೆ ಶ್ರದ್ಧಾ ಅವರನ್ನು ಭೇಟಿಮಾಡಿದ್ದಾರೆ.
ಕನ್ನಡ ಸಿನಿಮಾರಂಗದ ಬಗ್ಗೆ ಚರ್ಚೆ ಮಾಡಲಾಯಿತು ಎನ್ನಲಾಗಿದೆ. ರಿಷಬ್ ಮತ್ತು ಯಶ್ ಇಬ್ಬರೂ ಕನ್ನಡ ಚಿತ್ರರಂಗದ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ. ಅತಿಹೆಚ್ಚು ತೆರಿಗೆ ಕಟ್ಟುತ್ತಿರುವ ಚಿತ್ರರಂಗ ನಮ್ಮದು ಹಾಗಾಗಿ ಉತ್ತಮ ಸೌಲಭ್ಯಗಳು ನಮ್ಮ ಇಂಡಸ್ಟ್ರಿಗೆ ಸಿಗಬೇಕೆಂದು ಹೊಂಬಾಳೆ ಪ್ರೊಡಕ್ಷನ್ಸ್ ವಿಜಯ್ ಕಿರಗಂದೂರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
'ಕರ್ನಾಟಕದಲ್ಲಿ ಫಿಲ್ಮ್ ಸಿಟಿ ಆಗಬೇಕು. ಫಾರಿನ್ ನಲ್ಲಿರುವಂತೆ ನಮ್ಮ ಚಿತ್ರರಂಗದಲ್ಲೂ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಯಶ್ ಮನವಿ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಕಾರ್ಮಿಕರು ಮತ್ತು ಕಲಾವಿದರಿಗೆ ಹೆಚ್ಚು ಕೆಲಸ ಸಿಗುವಂತಾಗಬೇಕು, ಭದ್ರತಾ ಸೌಲಭ್ಯಗಳನ್ನು ಒದಗಿಸಬೇಕೆಂದು ಸ್ಯಾಂಡಲ್ ವುಡ್ ಸ್ಟಾರ್ಸ್ ಮನವಿ ಮಾಡಿದ್ದಾರೆ
ಐಟಿ ಇಂಡಸ್ಟ್ರಿ ಯನ್ನು ಮೋದಿ ಹೇಗೆ ಅಭಿವೃದ್ಧಿ ಪಡಿಸಿದ್ದಾರೊ ಹಾಗೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಅಭಿವೃದ್ಧಿಗೂ ನೆರವು ನೀಡಿ ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದ್ದಾರೆ.
ಇನ್ನೂ ಆರ್ ಜೆ ಶ್ರದ್ಧಾ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿ ಪ್ರಧಾನಿ ಅವರನ್ನು ಹೊಗಳಿದ್ದಾರೆ. ನಾನು ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದೆ. ನನ್ನನ್ನು ನೋಡಿ ಮೊದಲು ಅವರು ಹೇಳಿದ್ದು ಅಯ್ಯೋ...ಎಂದರು ಎಂದು ಹೇಳಿದ್ದಾರೆ. ಅಯ್ಯೋಶ್ರದ್ದಾ ಹೆಸರಿನ ಮೂಲಕವೇ ಖ್ಯಾತಿಗಳಿಸಿದ್ದಾರೆ.
ಕೆಜಿಎಫ್, ಕಾಂತಾರ ಸಿನಿಮಾ ಮೂಲಕ ರಾಷ್ಟ್ರ ಆಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಯಸ್ ಮತ್ತು ರಿಷಬ್ ಶೆಟ್ಟಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಸ್ಟಾರ್ ನಟರಿಗೆ ಅಭಿಮಾನಿಗಳು ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.