- Home
- Entertainment
- Sandalwood
- Dr. Rajkumar Must-Watch Films: ಜೀವನದಲ್ಲಿ ಒಂದ್ಸಲನಾದ್ರೂ ನೋಡಲೇಬೇಕಾದ ಡಾ. ರಾಜಕುಮಾರ್ ಸಿನಿಮಾಗಳಿವು…
Dr. Rajkumar Must-Watch Films: ಜೀವನದಲ್ಲಿ ಒಂದ್ಸಲನಾದ್ರೂ ನೋಡಲೇಬೇಕಾದ ಡಾ. ರಾಜಕುಮಾರ್ ಸಿನಿಮಾಗಳಿವು…
ನೀವು ಸಿನಿ ರಸಿಕರೇ, ಹಳೆ ಸಿನಿಮಾಗಳನ್ನು ನೋಡಲು ಇಷ್ಟ ಪಟ್ಟವರು ನೀವಾಗಿದ್ರೆ, ಡಾ. ರಾಜಕುಮಾರ್ ನಟಿಸಿದ ಈ ಸಿನಿಮಾಗಳನ್ನು ಮಿಸ್ ಮಾಡದೇ ನೋಡಿ.

ಕನ್ನಡದ ಧೀಮಂತ ನಾಯಕ ನಟ ಅಂದ್ರೆ ಡಾ. ರಾಜಕುಮಾರ್ (Dr. Rajkumar) . ಬೇಡರ ಕಣ್ಣಪ್ಪ ಸಿನಿಮಾದಿಂದ ಹಿಡಿದು ಶಬ್ಧವೇದಿಯವರೆಗೂ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಕೀರ್ತಿ ಅಣ್ಣಾವ್ರದ್ದು. ಇವರ ಸಿನಿಮಾಗಳು ಮನರಂಜನೆ ನೀಡುವುದು ಮಾತ್ರವಲ್ಲ ಸಾಮಾಜಿಕ ಕಳಕಳಿಯನ್ನು ಸಹ ಸಾರುತ್ತೆ. ಇಲ್ಲಿದೆ ನೋಡಿ ಜೀವನದಲ್ಲಿ ನೀವು ಒಂದು ಬಾರಿಯಾದರೂ ನೋಡಲೇಬೇಕಾದ ಡಾ. ರಾಜಕುಮಾರ್ ಅವರ ಸಿನಿಮಾಗಳು.
ಕಸ್ತೂರಿ ನಿವಾಸ
ದೊರೆ ಭಗವಾನ್ ನಿರ್ದೇಶನದ ಕಸ್ತೂರಿ ನಿವಾಸ ಸಿನಿಮಾ ನೀವು ಮಿಸ್ ಮಾಡದೇ ನೋಡಲೇಬೇಕಾದ ಸಿನಿಮಾ. ಈ ಸಿನಿಮಾದಲ್ಲಿ ಡಾ. ರಾಜ್ ಜೊತೆ ಆರತಿ ಮತ್ತು ಜಯಂತಿ ನಟಿಸಿದ್ದಾರೆ. ಇದು ಟ್ರಾಜಿಕ್ ಸಿನಿಮಾ. ಸೋಳಿನ ಕಥೆಯನ್ನು ಹೊಂದಿದೆ.
ಮಯೂರ
1975ರಲ್ಲಿ ಬಿಡುಗಡೆಯಾದ ವಿಜಯ್ ನಿರ್ದೇಶನ ಮಾಡಿರುವ ಜಿ.ಕೆ ವೆಂಕಟೇಶ್ ಸಂಗೀತ ನಿರ್ದೇಶನದ ಸಿನಿಮಾ ಇದು. ಈ ಸಿನಿಮಾವು ಐತಿಹಾಸಿಕ ಕಥೆಯನ್ನು ಹೊಂದಿದೆ. ಕದಂಬರ ಮೊದಲ ದೊರೆ, ಕನ್ನಡದ ಪ್ರಥಮ ದೊರೆ ಎಂದೇ ಖ್ಯಾತಿ ಪಡೆದ ಮಯೂರವರ್ಮನ ಕಥೆಯಾಧಾರಿತ ಸಿನಿಮಾ ಇದು.
ಸತ್ಯ ಹರಿಶ್ಚಂದ್ರ
ಹುಣಸೂರು ಕೃಷ್ಣಮೂರ್ತಿಯವರು ನಿರ್ದೇಶಿಸಿರುವ ಸತ್ಯ ಹರಿಶ್ಚಂದ್ರ (Satya Harischandra) ಸಿನಿಮಾ, ರಾಜ ಹರಿಶ್ಚಂದ್ರನ ಸತ್ಯದ ಕಥೆಯಾಗಿದೆ. ಉತ್ತಮ ಮನರಂಜನಾತ್ಮಕ ಸಿನಿಮಾ ಇದಾಗಿದೆ.
ಬಂಗಾರದ ಮನುಷ್ಯ
ಎಸ್ ಸಿದ್ಧಲಿಂಗಯ್ಯನವರು ನಿರ್ದೇಶನ ಮಾಡಿರುವ ಈ ಸಿನಿಮಾ 1972ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾ ಬರೋಬ್ಬರಿ 25 ವಾರಗಳ ಕಾಲ ಓಡಿತ್ತು. ಬರಡು ಭೂಮಿಯಲ್ಲಿ ಬೆಳೆ ಬೆಳೆಯುವ ಸಿನಿಮಾ, ಇದರಲ್ಲಿ ಕುಟುಂಬದ ಮಹತ್ವವನ್ನು ಸಹ ಸಾರಿ ಹೇಳಲಾಗಿದೆ. ಇದೊಂದು ತರಹದ ಬೇಸರ ನೀಡುವ ಕ್ಲೈಮ್ಯಾಕ್ಸ್ ಹೊಂದಿದೆ
ಒಡಹುಟ್ಟಿದವರು
ದೊರೆ ಭಗವಾನ್ (Dorai Bhagawan) ನಿರ್ದೇಶನ ಮಾಡಿರುವ ಸಿನಿಮಾ ಒಡಹುಟ್ಟಿದವರು. ಈ ಸಿನಿಮಾದಲ್ಲಿ ಡಾ. ರಾಜ್ ಕುಮಾರ್ ಮತ್ತು ಅಂಬರೀಶ್ ಅವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಒಡಹುಟ್ಟಿದವರ ಸಂಬಂಧ ಹೇಗಿರಬೇಕು ಅನ್ನೋದನ್ನು ತೋರಿಸಲಾಗಿದೆ.
ಬಂಗಾರದ ಪಂಜರ
ವಿ ಸೋಮಶೇಖರ್ ನಿರ್ದೇಶನದ ಸಿನಿಮಾ ಬಂಗಾರದ ಪಂಜರ. ಇದರಲ್ಲಿ ಅಣ್ಣಾವ್ರ ಅಭಿನಯ ನೋಡಿದ್ರೆ ಕಣ್ಣು ಮಂಜಾಗುತ್ತೆ. ಬಾಲ್ಯದಲ್ಲಿ ವಿಚಿತ್ರ ಕಾಯಿಲೆಯಿಂದಾಗಿ ಶ್ರೀಮಂತ ಕುಟುಂಬವೊಂದು ಮಗುವನ್ನು ಕುರಿಗಾಹಿಗಳ ಬಳಿ ಮಗನನ್ನು ಬಿಡುತ್ತಾರೆ. ಅವರನ್ನೇ ಅಪ್ಪ-ಅಮ್ಮ ಎಂದು ಭಾವಿಸಿ ಗ್ರಾಮದಲ್ಲಿ ಬೆಳೆಯುವ ಮುಗ್ಧ ಹುಡುಗನನ್ನು ಮತ್ತೆ ಆತನ ಮನೆಯವರು ಬಂದು ಸಿಟಿಗೆ ಕರೆದುಕೊಂಡು ಹೋದಾಗ ಏನಾಗುತ್ತದೆ ಅನ್ನೋದು ಕಥೆ.
ಗಂಧದಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ ಹಾಡಿನ ಮೂಲಕ ಕನ್ನಡ ಪ್ರೇಮವನ್ನು ಸಾರಿದ ಸಿನಿಮಾ ಗಂಧದ ಗುಡಿ (Gandhada Gudi). ಗಂಧದ ಕಳ್ಳ ಸಾಗಾಣಿಕೆಯ ಕುರಿತಾದ ಸಿನಿಮಾ ಇದು. ಈ ಸಿನಿಮಾದಲ್ಲಿ ಡಾ. ರಾಜಕುಮಾರ್ ಜೊತೆಗೆ ವಿಷ್ಣುವರ್ಧವ್ ಅವರೂ ಸಹ ಅಭಿನಯಿಸಿದ್ದಾರೆ.
ಬಬ್ರುವಾಹನ
ಡಾ. ರಾಜಕುಮಾರ್ ಅವರು ದ್ವಿಪಾತ್ರದಲ್ಲಿ ಅಭಿನಯಿಸಿದ ಸಿನಿಮಾ ಇದು, ಅರ್ಜುನ ಹಾಗೂ ಅರ್ಜುನ ಉಲೂಪಿಯ ಪುತ್ರ ಬಬ್ರುವಾಹನನಾಗಿ ಡಾ, ರಾಜಕುಮಾರ್ ನಟಿಸಿದ್ದಾರೆ. ಅಣ್ಣಾವ್ರು ಎಂತಹ ಅದ್ಭುತ ನಟ ಅನ್ನೋದನ್ನು ಈ ಸಿನಿಮಾ ತೋರಿಸಿ ಕೊಡುತ್ತೆ.
ಕವಿರತ್ನ ಕಾಳಿದಾಸ
ಇದೊಂದು ಅದ್ಭುತವಾದ ಸಿನಿಮಾ. ರೇಣುಕಾ ಶರ್ಮ ನಿರ್ದೇಶನದ ಸಿನಿಮಾ ಇದು. ಅಣ್ಣಾವ್ರಿಗೆ ಜಯಪ್ರದಾ ನಾಯಕಿಯಾಗಿ ನಟಿಸಿದ್ದರು. ಕುರಿಗಾಹಿ ಕಾಳಿದಾಸ ಕಾಳಿ ದೇವಿಯ ಕೃಪೆಯಿಂದ ಕವಿರತ್ನ ಕಾಳಿದಾಸ (KAviratna Kalidasa) ಆಗೋದು ಹೇಗೆ ಅನ್ನೋದು ಸಿನಿಮಾ ಕಥೆ.