ನಿನ್ನಂಗೆ ಯಾರೂ ಇರಲಾಗೋಲ್ಲ: ಚಿರು ಫೋಟೋ ಹಂಚಿಕೊಂಡ ಮೇಘನಾ
ಚಿರಂಜೀವಿ ಸರ್ಜಾ ಜೊತೆ ಫೋಟೋ ಹಂಚಿಕೊಂಡ ಮೇಘನಾ ರಾಜ್. ಫಾರ್‌ಎವರ್ ನಿಮ್ಮನ್ನು ಪ್ರೀತಿಸುತ್ತೀನಿ ಎಂದ ನಟಿ.....
ಕನ್ನಡ ಚಿತ್ರರಂಗದ ನಗು ಮುಖದ ನಟ ಚಿರಂಜೀವಿ ಸರ್ಜಾ ಅಗಲಿ ಇಂದಿಗೆ ಎರಡು ವರ್ಷ. ಧ್ರುವ ಸರ್ಜಾ ಫಾರ್ಮ್‌ಹೌಸ್‌ನಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಚಿರು ಆಪ್ತರು ಫೋಟೋ ಹಂಚಿಕೊಂಡು ತಮ್ಮ ನೆನಪುಗಳು ಮತ್ತು ಮರೆಯಲಾಗದ ಘಟನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
'ನೀನು ಮತ್ತು ನಾನು. ನಿನ್ನಂಗೆ ಇದುವರೆಗೂ ಯಾರೂ ಇಲ್ಲ ಯಾರು ಇರಲು ಸಾಧ್ಯವಿಲ್ಲ. ಚಿರು ದಿ ಓನ್ ಆಂಡ್ ಓನ್ಲಿ. ಲವ್ ಯು' ಎಂದು ಮೇಘನಾ ರಾಜ್ ಬರೆದುಕೊಂಡಿದ್ದಾರೆ.
ಮೇಘನಾ ಹಂಚಿಕೊಂಡಿರುವ ಫೋಟೋದಲ್ಲಿ ಇಬ್ಬರೂ ಗೋಲ್ಡ್ ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘನಾ ಸೀರೆಯಲ್ಲಿ ಚಿರು ಪಂಚೆ ಶಲ್ಯ ಧರಿಸಿದ್ದಾರೆ.
ರಾಯನ್ ರಾಜ್ ಸರ್ಜಾನನ್ನು ಚಿರು ರೂಪದಲ್ಲಿ ಅಭಿಮಾನಿಗಳು ಕಾಣುತ್ತಿದ್ದಾರೆ. ರಾಯನ್ ನೋಡಲು ಸೇಮ್ ಚಿರು ರೀತಿನೇ ಇದ್ದಾನೆ.
ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಸಿನಿಮಾದಲ್ಲಿ ಮೇಘನಾ ನಟಿಸಿದ್ದು ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಇದರ ಜೊತೆ ಎರಡು ಸಿನಿಮಾಗಳ ಚಿತ್ರೀಕರಣ ಮಾಡುತ್ತಿದ್ದಾರೆ.
ಸೃಜನ್ ಲೋಕೇಶ್ ಕೋರಿಕೆಯಿಂದ ಮೇಘನಾ ರಾಜ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋ ತೀರ್ಪುಗಾರರಾಗಿದ್ದರು.