ನಿವೇದಿತಾ ಗೌಡ ಈಗ 'ಮುದ್ದು ರಾಕ್ಷಸಿ'.. ಆ ಖುಷಿಯಲ್ಲಿ ನೋಡಿ ಬಿನ್ನಾಣಗಿತ್ತಿ ಫೋಟೋಸ್!
ಬಿಗ್ ಬಾಸ್ ಕನ್ನಡ ಖ್ಯಾತಿಯ ನಿವೇದಿತಾ ಗೌಡ ಈಗ ಸ್ಯಾಂಡಲ್‌ವುಡ್ ಹೀರೋಯಿನ್ ಕೂಡ ಹೌದು.. ಮುದ್ದು ರಾಕ್ಷಿಸಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದಾಯ್ತು.. ಮುಂದೇನು..?

ನಿವೇದಿತಾ ಗೌಡ ಅವರು ಕಿರುತೆರೆ ಹಾಗೂ ಬಿಗ್ ಬಾಸ್ ಕನ್ನಡ ಶೋ ಮೂಲಕ ಕರ್ನಾಟಕದಲ್ಲಿ ಖ್ಯಾತಿ ಪಡೆದವರು. ಅದಕ್ಕೂ ಮೊದಲು ಅವರೇನು ಮಾಡುತ್ತಿದ್ದರು?

ಮಾಡೆಲಿಂಗ್ ಹಾಗೂ ಫೋಟೋ ಶೂಟ್ ಕ್ರೇಜ್ ಹೊಂದಿದ್ದ ನಿವೇದಿತಾ ಗೌಡ ಅವರು ಆ ಮೂಲಕವೇ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದರು.

ಸೋಷಿಯಲ್ ಮೀಡಿಯಾ ಪಪ್ಯುಲಾರಿಟಿಯೇ ಅವರನ್ನು ಬಿಗ್ ಬಾಸ್ ಕನ್ನಡ ಮನೆಗೆ ಕರೆದುಕೊಂಡು ಹೋಗಿದ್ದು. ಮುಂದೇನಾಯ್ತು ಅನ್ನೊದು ಬಹುತೇಕ ಎಲ್ಲರಿಗೂ ಗೊತ್ತಿರೋ ಕಥೆಯೇ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ರಾಪರ್ ಹಾಗೂ ನಟ ಚಂದನ್ ಶೆಟ್ಟಿ ಪರಿಚಯ ಆಗಿದ್ದು, ಸ್ನೇಹಕ್ಕೆ ತಿರುಗಿದ್ದು, ಬಳಿಕ ಪ್ರೇಮ ಉಂಟಾಗಿ ಮದುವೆಯೂ ಆಗಿದ್ದೂ ಆಯ್ತು.

ಆದರೆ, ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಮದುವೆ ಬಹಳಷ್ಟು ಕಾಲ ಸುಸೂತ್ರವಾಗಿ ಉಳಿಯಲಿಲ್ಲ. ಹೊಂದಾಣಿಕೆ ಕೊರತೆಯಿಂದ ಅವರಿಬ್ಬರೂ ಕಳೆದ ವರ್ಷ ಬೇರೆಬೇರೆ ಆದರು.

ಬಳಿಕ, ನಿವೇದಿತಾ ಗೌಡ ಅವರು ತೆಲುಗಿನ ವಿಡಿಯೋ ಸಾಂಗ್ ಮೂಲಕ ಟಾಲಿವುಡ್‌ನಲ್ಲಿ ಸ್ವಲ್ಪ ಸೌಂಡ್ ಮಾಡಿ ಮತ್ತಷ್ಟು ಆಕ್ಟಿವ್ ಆದರು.

ಚಂದನ್ ಶೆಟ್ಟಿ ಜೊತೆ ಡಿವೋರ್ಸ್ ಪಡೆಯುವ ಮೊದಲೇ ನಿವೇದಿತಾ ಗೌಡ ಹಾಗೂ ಚಂದನ್ ಜೋಡಿ 'ಮುದ್ದು ರಾಕ್ಷಸಿ' ಸಿನಿಮಾಗೆ ಸಹಿ ಹಾಕಿ ಆಗಿತ್ತು.

ಮುದ್ದು ರಾಕ್ಷಸಿ ಸಿನಿಮಾ ಶೂಟಿಂಗ್ ಮುಗಿದು, ಇತ್ತೀಚೆಗೆ ಆ ಚಿತ್ರದ ಪ್ರೆಸ್‌ಮೀಟ್ ಕೂಡ ಆಗಿದೆ. ಈ ವೇಳೆ ನಿವೇದಿತಾ ಗೌಡ ಹಾಗೂ ಚಂದನ್ ಈ ಇಬ್ಬರೂ ಬಹಳಷ್ಟು ಸಂಗತಿಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.

ತಮ್ಮ ಡಿವೋರ್ಸ್‌ಗೆ ಕಾರಣವಾದ ಅಂಶಗಳ ಬಗ್ಗೆಯೂ ಮಾತನ್ನಾಡಿದ್ದಾರೆ. ಆದರೆ, ತೀರಾ ಪರ್ಸನಲ್ ಕಾರಣವನ್ನು ಅವರಿಬ್ಬರೂ ಕ್ಯಾಮೆರಾ ಕಣ್ಣಿನ ಎದುರು ಬಿಚ್ಚಿಡುವ ಸಾಹಸ ಮಾಡಿಲ್ಲ ಎನ್ನಬಹುದು.

ಮುದ್ದು ರಾಕ್ಷಸಿ ಚಿತ್ರವು ಸದ್ಯದಲ್ಲೇ ಬಿಡುಗಡೆ ಕಾಣಲಿದೆ. ಅದಕ್ಕೂ ಮೊದಲು, ಚಂದನ್ ಶೆಟ್ಟಿ ನಟನೆಯ ಮೊಟ್ಟಮೊದಲ ಕನ್ನಡ ಸಿನಿಮಾ ಸೂತ್ರಧಾರಿ ಬಿಡುಗಡೆಗೆ ಸಿದ್ಧವಾಗಿದೆ.

ಸೂತ್ರಧಾರಿ ಚಿತ್ರದಲ್ಲಿ ಚಂದನ್ ಶೆಟ್ಟಿಗೆ ಜೋಡಿಯಾಗಿ ಅಪೂರ್ವ ಹಾಗು ಸಂಜನಾ ಆನಂದ್ ನಟಿಸಿದ್ದಾರೆ. ಇದಕ್ಕೂ ಮೊದಲು ಚಂದನ್ ಶೆಟ್ಟಿ ನಟನೆಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಸಿನಿಮಾ ಬಿಡುಗಡೆ ಆಗಿತ್ತು.

ಒಟ್ಟಿನಲ್ಲಿ, ರಿಯಲ್ ಲೈಫ್‌ನಲ್ಲಿ ಬೇರೆಯಾಗಿರುವ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಅವರಿಬ್ಬರೂ ರೀಲ್‌ನಲ್ಲಿ, ಅಂದ್ರೆ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಚಿತ್ರದ ಬಿಡುಗಡೆ ಬಳಿಕ ಫಲಿತಾಂಶ ತಿಳಿಯಲಿದೆ.