ಶ್ರೀಕೃಷ್ಣನಿಗಾಗಿ ಕಾಯ್ತಿದ್ದಾಳೆ ಈ ಕಲಿಯುಗದ ರಾಧೆ ನಮ್ ಪಟಾಕಿ ಪೋರಿ
ಕನ್ನಡಿಗರ ಮನಗೆದ್ದ ಪಟಾಕಿ ಪೋರಿ ನಭಾ ನಟೇಶ್, ಲಂಗ, ಬ್ಲೌಸ್ ಧರಿಸಿ ಕಾಂಕ್ರಿಟ್ ಕಾಡಿನಲ್ಲಿ ರಾಧೆಯಂತೆ ಮಿಂಚುತ್ತಿದ್ದಾರೆ.

ಕನ್ನಡ ಸಿನಿ ರಸಿಕರಿಗೆ ಪಟಾಕಿ ಪೋರಿ ಅಂದ್ರೆ ನೆನಪಾಗೋದು ನಭಾ ನಟೇಶ್ (Nabha Natesh). ವಜ್ರಕಾಯ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ, ಮೊದಲನೇ ಸಿನಿಮಾದಲ್ಲೇ ತಮ್ಮ ನಟನೆಯ ಮೂಲಕ ಮೋಡಿ ಮಾಡಿದ ಬೆಡಗಿ ನಭಾ ನಟೇಶ್.
ವಜ್ರಕಾಯದ (Vajrakaya film)ಪಟಾಕ ಪಾರ್ವತಿ ಪಾತ್ರ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಇದಾದ ಬಳಿಕ ನಭಾ ನಟೇಶ್ ಲೀ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಮತ್ತೊಂದು ಸಾಹೇಬಾ ಸಿನಿಮಾದಲ್ಲಿ ಸ್ಪೆಷಲ್ ಹಾಡಿನಲ್ಲಿ ಕಾಣಿಸಿಕೊಂಡಿದಲ್ಲದೇ ಕನ್ನಡದಲ್ಲಿ ಮತ್ಯಾವ ಸಿನಿಮಾದಲ್ಲೂ ನಟಿಸಿಲ್ಲ.
ಕನ್ನಡದ ಬಳಿಕ ತೆಲುಗಿನಲ್ಲಿ (telugu cinema) ಒಂದಾದ ಮೇಲೆ ಒಂದು ಅವಕಾಶಗಳು ಸಿಕ್ಕ ಹಿನ್ನೆಲೆಯಲ್ಲಿ ಸದ್ಯಕ್ಕಂತೂ ಅಲ್ಲಿಯೇ ಗಟ್ಟಿಯಾಗಿ ನೆಲೆಯೂರಿದ್ದಾರೆ ಶೃಂಗೇರಿಯ ಬೆಡಗಿ ನಭಾ ನಟೇಶ್.
ಭೀಕರ ಆಕ್ಸಿಡೆಂಟ್ ಬಳಿಕ ಎರಡು ವರ್ಷ ನಟನೆಯಿಮ್ದ ಬ್ರೇಕ್ ತೆಗೆದುಕೊಂಡಿದ್ದ ನಟಿ, ನಂತರ ತೆಲುಗಿನಲ್ಲಿ ನಭಾ ಕೊನೆಯದಾಗಿ ನಟಿಸಿದ್ದು ಡಾರ್ಲಿಂಗ್ ಸಿನಿಮಾದಲ್ಲಿ. ಈ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿತ್ತು.
ನಭಾ ನಟೇಶ್ ಗೆ ಅವಕಾಶಗಳು ಕಡಿಮೆಯಾಗಿದ್ದರೂ ಸಹ ನಟಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ತಮ್ಮ ಹೊಸ ಹೊಸ ಫೋಟೊ ಶೂಟ್ ಮೂಲಕ ನಟಿ ಸದ್ದು ಮಾಡುತ್ತಲೇ ಇರುತ್ತಾರೆ.
ಇದೀಗ ನಭಾ ಲಂಗ ಬ್ಲೌಸ್ ಧರಿಸಿ, ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. ಕಾಂಕ್ರೀಟ್ ಕಾಡಿನಲ್ಲಿ ರಾಧಾ (Radha in concrete jungle) - ಅವ್ಯವಸ್ಥೆಯಲ್ಲಿ ಸೊಬಗನ್ನು ಮತ್ತು ದಟ್ಟಣೆಯಲ್ಲಿ ಲಯವನ್ನು ಕಂಡುಕೊಳ್ಳುತ್ತಾಳೆ ಎನ್ನುವ ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ.
ನಭಾ ಕೆಂಪು ಬಣ್ಣದ ಬಾರ್ಡರ್ ಹೊಂದಿರುವ ಲಂಗ ಹಾಗೂ ಕೆಂಪು ಬ್ಲೌಸ್ ಧರಿಸಿ, ಇದರ ಜೊತೆಗೆ ಕೆಂಪು ಬಣ್ಣದ ದುಪ್ಪಟ್ಟಾವನ್ನು ತಲೆ ಮೇಲೆ ಧರಿಸಿ ಶ್ರೀಕೃಷ್ಣನಿಗೆ ಕಾಯುತ್ತಿರುವ ರಾಧೆಯಂತೆ ಪೋಸ್ ಕೊಟ್ಟಿದ್ದಾರೆ.
ನಭಾ ನಟೇಶ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ (Social media) ವೈರಲ್ ಆಗುತ್ತಿದ್ದು, ಆಕೆಯ ಬ್ರೀತ್ ಟೇಕಿಂಗ್ ಬ್ಯೂಟಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೌಂದರ್ಯವನ್ನು ಹೊಗಳಿ ಹಾರ್ಟ್ ಇಮೋಜಿ ಕಾಮೆಂಟ್ ಮಾಡಿದ್ದಾರೆ.