- Home
- Entertainment
- Sandalwood
- ಈ ಫೋಟೋದಲ್ಲಿ ಇರುವವರು ಯಾರು ಎಂದು ಬಲ್ಲಿರಾ? ಸಿನಿಮಾರಂಗದ 'ಸೈಕೋ' ಸಂಗೀತ ನಿರ್ದೇಶಕ ಈತ!
ಈ ಫೋಟೋದಲ್ಲಿ ಇರುವವರು ಯಾರು ಎಂದು ಬಲ್ಲಿರಾ? ಸಿನಿಮಾರಂಗದ 'ಸೈಕೋ' ಸಂಗೀತ ನಿರ್ದೇಶಕ ಈತ!
18 ವರ್ಷವಿದ್ದಾಗ ನಂದಿನಿ ಈಶ್ವರ ಮಾರ್ಗದರ್ಶನದಲ್ಲಿ ನೃತ್ಯ ತರಬೇತಿಯನ್ನು ಪಡೆಯುತ್ತಿದೆ. ಆ ಸಮಯದಲ್ಲಿ ನಾನು ಈ ಫೋಟೋವನ್ನು ತೆಗೆಸಿಕೊಂಡಿದ್ದೇನೆ ಎಂಬ ವಿಷಯವನ್ನು ಅವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ನಿರ್ಮಾಪಕ, ಫಿಲ್ಮಂ ಸ್ಕೂರ್ ಕಂಪೋಸರ್ ರಘು ದೀಕ್ಷಿತ್‌ಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಕೈಯಲ್ಲಿ ಪಂಚೆ ಮತ್ತು ಕಾಲ್ಗೆಜ್ಜೆ ಧರಿಸಿ ಕೈಯಲ್ಲಿ ಗಿಟಾರ್ ಹಿಡಿದು ವೇದಿಕೆ ಮೇಲೆ ಬಂದರೆ ರಘು ದೀಕ್ಷಿತ್ ನೋಡಲು ಜನರು ಹುಚ್ಚರಾಗುತ್ತಾರೆ.
ಅದರಲ್ಲೂ ಮೈಸೂರ್ ಸೇ ಆಯಿ, ಅಂತರಂಗಿ, ಹೇ ಭಗವಾನ್, ಗುಡು ಗುಡಿಯಾ ಸೇದಿ ನೋಡೋ.... ಈ ರೀತಿ ಹಾಡುಗಳನ್ನು ಹಾಡಿದರೆ ನಿಂತಲೇ ಜನರು ಕುಣಿಯುವುದಕ್ಕೆ ಶುರು ಮಾಡುತ್ತಾರೆ. ಅಷ್ಟರ ಮಟ್ಟಕ್ಕೆ ರಘು ಕ್ರೇಜ್ ಸೃಷ್ಟಿ ಮಾಡಿದ್ದಾರೆ.
ಸದ್ಯ ರಘು ದೀಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದನ್ನು ನೋಡಿದ ತಕ್ಷಣ ಈ ಫೋಟೋದಲ್ಲಿ ಇರುವ ವ್ಯಕ್ತಿ ಯಾರು ಎಂಬ ಗೊಂದಲ ಉಂಟಾಗುತ್ತದೆ.
ಹೌದು, ಅದು ನಾನು. ಹೌದು, ಇದನ್ನೂ ನಾನು ಮಾಡಿದ್ದೆ. ಅದ್ಭುತವಾದ 18 ವರ್ಷಗಳು, ನನ್ನ ಗುರು ಶ್ರೀಮತಿ ನಂದಿನಿ ಈಶ್ವರ ಅವರ ಮಾರ್ಗದರ್ಶನದಲ್ಲಿ ನಾನು ನೃತ್ಯದಲ್ಲಿ ತರಬೇತಿ ಪಡೆದೆ, ಇಂದಿಗೂ ಇದು ನನ್ನ ಸಂಗೀತ ಅಭ್ಯಾಸಕ್ಕೆ ಪ್ರೇರಣೆ ಮತ್ತು ಪ್ರಭಾವ ನೀಡುತ್ತದೆ. ಒಂದು ದಿನ, ಅದಕ್ಕೆ ಮತ್ತೆ ಮರಳುವ ಕನಸು ನನಸಾಗಲಿ ಎಂಬ ಆಸೆಯಿದೆ. ಸೀರ್ಸಾ 1991 ಎಂದು ರಘು ಬರೆದುಕೊಂಡಿದ್ದಾರೆ.
ರಘು ದೀಕ್ಷಿತ್‌ಗೆ 18 ವರ್ಷವಿದ್ದಾಗ ನಂದಿನಿ ಈಶ್ವರ ಮಾರ್ಗದರ್ಶನದಲ್ಲಿ ನೃತ್ಯ ತರಬೇತಿಯನ್ನು ಪಡೆಯುತ್ತಿದೆ. ಆ ಸಮಯದಲ್ಲಿ ನಾನು ಈ ಫೋಟೋವನ್ನು ತೆಗೆಸಿಕೊಂಡಿದ್ದೇನೆ ಎಂಬ ವಿಷಯವನ್ನು ಅವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು 2008ರಲ್ಲಿ ಸೈಕೋ ಚಿತ್ರದ ಮೂಲಕ ಮ್ಯೂಸಿಕ್ ಡೈರೆಕ್ಟರ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಘು ದೀಕ್ಷಿತ್.. ಜಸ್ಟ್ ಮಾತ್ ಮಾತಲ್ಲಿ, ಕೋಟೆ, ಹ್ಯಾಪಿ ನ್ಯೂ ಇಯರ್, ಗರುಡ, ಲವ್ ಮಾಕ್ಟೇಲ್, ನಿನ್ನ ಸನಿಹಕೆ, ಆರ್ಕೆಸ್ಟ್ರಾ ಮೈಸೂರು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು ಹಾಗೂ ತೆಲುಗು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.