- Home
- Entertainment
- TV Talk
- ಭಯ ಪಟ್ಟು 3 ಸಲ ವಾಪಸ್ ಬಂದಿದ್ದೆ.. ಕೊನೆಗೂ ಎದೆಯ ಮೇಲೆ ಸ್ಪೆಷಲ್ ಟ್ಯಾಟೂ ಹಾಕಿಸಿಕೊಂಡ ನಯನ!
ಭಯ ಪಟ್ಟು 3 ಸಲ ವಾಪಸ್ ಬಂದಿದ್ದೆ.. ಕೊನೆಗೂ ಎದೆಯ ಮೇಲೆ ಸ್ಪೆಷಲ್ ಟ್ಯಾಟೂ ಹಾಕಿಸಿಕೊಂಡ ನಯನ!
ನಯನಾ ಅವರು ಎದೆಯ ಮೇಲೆ ಸ್ಪೆಷಲ್ ಟ್ಯಾಟೂವೊಂದನ್ನು ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಂಡಿರೋ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ತಮ್ಮ ನಟನೆಯಿಂದ ಮಾತುಗಳಿಂದಲೇ ಜನಪ್ರಿಯರಾಗಿದ್ದರು. ರಿಯಾಲಿಟಿ ಶೋಗಳಿಂದ ಫೇಮಸ್ ಆಗಿರೋ ನಟಿ ನಯನಾ ಇದೀಗ ಸಖತ್ ಖುಷಿಯಲ್ಲಿದ್ದಾರೆ.
ಇದೀಗ ನಯನಾ ಅವರು ಎದೆಯ ಮೇಲೆ ಸ್ಪೆಷಲ್ ಟ್ಯಾಟೂವೊಂದನ್ನು ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಂಡಿರೋ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತುಂಬಾ ವರ್ಷಗಳಿಂದ ಟ್ಯಾಟೂ ಹಾಕಿಸಿಕೊಳ್ಳಬೇಕು ಅಂತ ಆಸೆ ಇತ್ತು. ಎಲ್ಲಿ ನೋವು ಆಗುತ್ತೆ ಅನ್ನೋ ಭಯಕ್ಕೆ ಹಾಕಿಸಿಕೊಂಡಿರಲಿಲ್ಲ. ಮೂರು ಬಾರಿ ಹೋಗಿ ಮತ್ತೆ ಭಯ ಆಗಿ ವಾಪಸ್ ಬಂದಿದ್ದೆ.
ಕೊನೆಗೂ ಬ್ಯೂಟಿಫುಲ್ ಆಗಿರೋ ಟ್ಯಾಟೂ ಹಾಸಿಕೊಂಡಿದ್ದೀನಿ. ನನ್ನ ಪತಿ, ನನ್ನ ಮಗು ಹಾಗೂ ನಾನು ಇಷ್ಟ ಪಡೋ ದೇವರು ಕೃಷ್ಣನ ಕೊಳಲು ಈ ಮೂವರು ಒಂದೇ ಫ್ರೇಮ್ನಲ್ಲಿ ಬರಬೇಕಾಗಿತ್ತು. ನಾನು ಹೇಳಿದ ಹಾಗೇ ಅವರು ಟ್ಯಾಟೂ ಹಾಕಿದ್ದಾರೆ, ನನಗೆ ಸಖತ್ ಖುಷಿ ಆಯ್ತು ಅಂತ ಹೇಳಿಕೊಂಡಿದ್ದಾರೆ.
ನಯನಾ ಕೆಲವು ವರ್ಷಗಳ ಹಿಂದಷ್ಟೇ ಶರತ್ ಎಂಬುವವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ನಯನಾ ವೈವಾಹಿಕ ಜೀವನ ಸುಂದರವಾಗಿದೆ. ಇನ್ನೂ ನಟಿಗೆ ಒಂದು ಮುದ್ದಾದ ಮಗಳಿದ್ದಾಳೆ.
ಅಂದಹಾಗೆ, ನಯನಾ ಹುಬ್ಬಳ್ಳಿ ಮೂಲದವರು. ಬಡ ಅಂತ ಮಾತಾಡೋ ಈ ಪ್ರತಿಭಾನ್ವಿತ ನಟಿಗೆ ಚಿತ್ರರಂಗದ ಹಿನ್ನೆಲೆ ಇಲ್ಲ. ಆದರೂ ತನ್ನ ಪ್ರತಿಭೆಯಿಂದಲೇ ಕಿರುತೆರೆ ಹಾಗೂ ಸಿನಿಮಾರಂಗದಲ್ಲಿ ಯಶಸ್ಸನ್ನು ಕಂಡಿದ್ದಾರೆ. ರಿಯಾಲಿಟಿ ಶೋ ಅಷ್ಟೇ ಅಲ್ಲದೆ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನೂ, ಕಾಮಿಡಿ ಕಿಲಾಡಿಗಳು ಮೂಲಕ ಕರ್ನಾಟಕದಾದ್ಯಂತ ಪ್ರಸಿದ್ಧಿಯಾಗಿದ್ದಾರೆ ನಯನಾ. ಇವರು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ. ಹುಬ್ಬಳ್ಳಿ ಮೂಲದ ನಯನಾರ ತಂದೆ ಪೇಂಟ್ ಕಾಂಟ್ರಾಕ್ಟರ್ ಅಗಿದ್ದರು ಮತ್ತು ತಾಯಿ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ನಯನಾ ಜನಪ್ರಿಯರಾದರು. ಅದ್ಭುತ ನಟನೆಯ ಮೂಲಕ ನಯನಾ ಅಭಿಮಾನಿಗಳ ಮನಗೆದ್ದರು. ಅನೇಕ ಸಿನಿಮಾಗಳಲ್ಲಿ ನಟಿ ನಯನ ನಟಿಸಿದ್ದಾರೆ.