MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ನೀವು ಮಿಸ್ ಮಾಡ್ದೇ ನೋಡಲೇ ಬೇಕಾದ ಕನ್ನಡದ Underrated Movies

ನೀವು ಮಿಸ್ ಮಾಡ್ದೇ ನೋಡಲೇ ಬೇಕಾದ ಕನ್ನಡದ Underrated Movies

Most Underrated Movies: ಕನ್ನಡದ ಕೆಲವು ಸಿನಿಮಾಗಳು ಚಿತ್ರಮಂದಿರದಲ್ಲಿ ಅಷ್ಟಾಗಿ ಸದ್ದು ಮಾಡದೇ ಇದ್ದರೂ ಸಹ ಜನಮನಸಿನಲ್ಲಿ ಸದಾ ಕಾಲ ಉಳಿಯುವಲ್ಲಿ ಗೆದ್ದಿದೆ. ಅಂತಹ ಮೋಸ್ಟ್ ಅಂಡರ್ ರೇಟೆಡ್ ಕನ್ನಡ ಸಿನಿಮಾಗಳು ಯಾವುವು ಅನ್ನೋದನ್ನು ನೋಡೋಣ.

2 Min read
Author : Pavna Das
Published : May 31 2026, 08:42 PM IST
Share this Photo Gallery
  • FB
  • TW
  • Linkdin
  • Whatsapp
19
ಮೋಸ್ಟ್ ಅಂಡರ್ ರೇಟೆಡ್ ಕನ್ನಡ ಸಿನಿಮಾಗಳು
Image Credit : social media

ಮೋಸ್ಟ್ ಅಂಡರ್ ರೇಟೆಡ್ ಕನ್ನಡ ಸಿನಿಮಾಗಳು

ಕೆಲವು ಕನ್ನಡ ಸಿನಿಮಾಗಳು ಕೇವಲ ಮನರಂಜನೆ ನೀಡುವುದಲ್ಲದೆ, ನಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತವೆ. ಉಳಿದವರು ಕಂಡಂತೆ ಮತ್ತು ಉಗ್ರಂ ನಂತಹ ಕಲ್ಟ್ ಕ್ಲಾಸಿಕ್ ನಿಂದ ಹಿಡಿದು ಪರಮಾತ್ಮ ಮತ್ತು ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಭಾವನಾತ್ಮಕ ಸಿನಿಮಾಗಳವರೆಗೂ, ಜನರನ್ನು ವಿಚಿತ್ರವಾಗಿ ಕಾಡಿದಂತಹ ಮೋಸ್ಟ್ ಅಂಡರ್ ರೇಟೆಡ್ ಕನ್ನಡ ಸಿನಿಮಾಗಳು ಯಾವುವು ನೋಡೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29
ಪರಮಾತ್ಮ
Image Credit : social media

ಪರಮಾತ್ಮ

ಪರಮಾತ್ಮ ಸಿನಿಮಾ ಒಂದು ಅದ್ಭುತವಾದ ಭಾವನಾತ್ಮಕ ಸಿನಿಮಾ. ಇದರಲ್ಲಿ ಪ್ರೀತಿ ಇದೆ, ಕಾಲೇಜು ಜೀವನ ಇದೆ, ಒನ್ ಸೈಡ್ ಲವ್ ಇದೆ, ನೋವು ಇದೆ, ಕಾಮಿಡಿಗೂ ಕೊರತೆ ಇಲ್ಲದಂತಹ, ಹೃದಯಕ್ಕೆ ತುಂಬಾ ಹತ್ತಿರವಾಗುವಂತಹ ಸಿನಿಮಾ.

Related Articles

Related image1
Upendra Movie: ಆಗ ಇದೊಂದು ಹುಚ್ಚು ಸಿನಿಮಾ ಅಂದ್ಕೊಂಡಿದ್ವಿ: ಆದ್ರೆ ಇದರೊಳಗಿನ ಲೈಫ್ ಲೆಸನ್ ಗೊತ್ತಾ?
Related image2
Toxic Movie BTS: ಟಾಕ್ಸಿಕ್ ಚಿತ್ರದ ಮೇಕಿಂಗ್ ವಿಡಿಯೋ ವೈರಲ್​- ಬಯಲಾಯ್ತು ತೆರೆಮರೆಯ ಸತ್ಯ
39
ಬೀರ್ ಬಲ್
Image Credit : social media

ಬೀರ್ ಬಲ್

ಇದು 2019ರಲ್ಲಿ ತೆರೆಕಂಡ ಕನ್ನಡದ ಕ್ರೈಂ ಥ್ರಿಲ್ಲರ್ ಸಿನಿಮಾ. ಒಬ್ಬ ಚಾಣಾಕ್ಷ ವಕೀಲ ಹಳೆಯ ಕೊಲೆ ಪ್ರಕರಣವೊಂದನ್ನು ಕೈಗೆತ್ತಿಕೊಂಡು, ಅದರಲ್ಲಿರುವ ಗೊಂದಲಗಳನ್ನು ಹೇಗೆ ಬಗೆಹರಿಸುತ್ತಾರೆ ಎನ್ನುವುದೇ ಈ ಚಿತ್ರದ ರೋಚಕ ಕಥೆ.

49
ಜಸ್ಟ್ ಮಾತ್ ಮಾತಲ್ಲಿ
Image Credit : social media

ಜಸ್ಟ್ ಮಾತ್ ಮಾತಲ್ಲಿ

ಜಸ್ಟ್ ಮಾತ್ ಮಾತಲ್ಲಿ ಇಮೋಶನಲ್ ರೊಮ್ಯಾಂಟಿಕ್ ಚಿತ್ರ. ಈ ಸಿನಿಮಾ ನಿಧಾನವಾಗಿ ಸಾಗುತ್ತದೆ. ಆದರೆ ಕಥೆ ಹೃದಯಲ್ಲಿ ಉಳಿದುಕೊಳ್ಳುತ್ತದೆ. ಪ್ರೀತಿಯನ್ನು ಹೇಳಲು ತಡಮಾಡಿದರೆ ಮತ್ತೆ ಏನಾಗುತ್ತದೆ ಅನ್ನೋದನ್ನು ಈ ಸಿನಿಮಾದಲ್ಲಿ ಚಿತ್ರಿಸಲಾಗಿದೆ.

59
ಉಳಿದವರು ಕಂಡಂತೆ, ಅವನೇ ಶ್ರೀಮನ್ನಾರಾಯಣ
Image Credit : social media

ಉಳಿದವರು ಕಂಡಂತೆ, ಅವನೇ ಶ್ರೀಮನ್ನಾರಾಯಣ

ಇವೆರಡೂ ಸಹ ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿರುವಂತಹ ಸಿನಿಮಾಗಳು. ಈ ಎರಡು ಸಿನಿಮಾಗಳು ಸಹ ಚಿತ್ರರಂಗದಲ್ಲಿ ಅಷ್ಟೇನೂ ಹಿಟ್ ಕಾಣಲಿಲ್ಲ. ಆದರೆ ನಂತರದ ದಿನಗಳಲ್ಲಿ ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡವರೇ ಹೆಚ್ಚು.

69
ಗುಲ್ಟು, ಬ್ಲಿಂಕ್
Image Credit : social media

ಗುಲ್ಟು, ಬ್ಲಿಂಕ್

ಗುಲ್ಟು ಸಿನಿಮಾ ಇದು ಸೈಬರ್ ಕ್ರೈಂ ಗೆ ಸಂಬಂಧಿಸಿದಂತಹ ಸಿನಿಮಾ, ಸಿನಿಮಾ ನೋಡುತ್ತಾ ಒಂದಂತೆ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ.

ಬ್ಲಿಂಕ್ ಸಿನಿಮಾ ಟೈಮ್ ಟ್ರಾವೆಲ್ ಗೆ ಸಂಬಂಧಿಸಿದ ಸಿನಿಮಾ, ಈ ಚಿತ್ರದಲ್ಲಿ ಕಣ್ಣು ಮುಚ್ಚಲು ಸಾಧ್ಯವಾಗದ ಯುವಕನ ಜೀವನದಲ್ಲಿ ಈ ಟೈಮ್ ಟ್ರಾವೆಲ್ ಏನೆಲ್ಲಾ ಮಾಡುತ್ತದೆ ಎನ್ನುವುದು ಕಥೆ.

79
ಕವಲುದಾರಿ
Image Credit : social media

ಕವಲುದಾರಿ

ಮೆಟ್ರೋ ಕನ್’ಸ್ಟ್ರಕ್ಷನ್ ಸೈಟ್ ನಲ್ಲಿ ಸಿಕ್ಕಿದಂತಹ ಮೂರು ಬುರುಡೆಗಳ ಹಿಂದಿನ ಸತ್ಯವನ್ನು ಹುಡುಕಿ ಹೊರಟ ಟ್ರಾಫಿಕ್ ಪೊಲೀಸ್ ಆಫೀಸರ್ ಶ್ಯಾಮ್ ಮತ್ತು ಅವನಿಗೆ ಸಹಾಯ ಮಾಡುವ ರಿಟೈರ್ಡ್ ಪೊಲೀಸ್ ಆಫೀಸರ್ ಕಥೆ. ಇದು ಸಖತ್ ಥ್ರಿಲ್ಲಿಂಗ್ ಆಗಿದ್ದು ಮಿಸ್ ಮಾಡದೆ ನೋಡಬೇಕು.

89
ಮರ್ಫಿ
Image Credit : social media

ಮರ್ಫಿ

ಇದೊಂದು ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ. ಈ ಚಿತ್ರದಲ್ಲಿ ತನ್ನ ಅಜ್ಜನ ಹಳೆಯ ರೇಡಿಯೋ ಬಳಕೆ ಮಾಡುವ ಯುವಕನ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವ ಕಥೆಯನ್ನು ಹೊಂದಿದೆ. ಮಿಸ್ ಮಾಡದೆ ನೋಡಿ.

99
ಸ್ವಸ್ತಿಕ್
Image Credit : social media

ಸ್ವಸ್ತಿಕ್

ಉಪೇಂದ್ರ ನಿರ್ದೇಶನದ ಈ ಸಿನಿಮಾದಲ್ಲಿ ಉಗ್ರರ ಕಥೆಯನ್ನು ಹೇಳಲಾಗಿತ್ತು. ಉಗ್ರರ ಕಥೆ ಹೇಳುವ ಧುರಂಧರ್ ಈಗ ಬಂದಿದ್ದರೆ, ಕನ್ನಡದಲ್ಲಿ ಉಪೇಂದ್ರ 25 ವರ್ಷಗಳಿಗೆ ಮುನ್ನವೇ ಅಂತಹ ಒಂದು ವಿಷ್ಯ ಇಟ್ಟುಕೊಂಡು ಅಂದೇ ಸಿನಿಮಾ ಮಾಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ಮನರಂಜನಾ ಸುದ್ದಿ
ಸಿನಿಮಾ

Latest Videos
Recommended Stories
Recommended image1
Toxic Movie BTS: ಟಾಕ್ಸಿಕ್ ಚಿತ್ರದ ಮೇಕಿಂಗ್ ವಿಡಿಯೋ ವೈರಲ್​- ಬಯಲಾಯ್ತು ತೆರೆಮರೆಯ ಸತ್ಯ
Recommended image2
ಲಂಗ ದಾವಣಿಯಲ್ಲಿ ಮಿಂಚಿದ ಜೂ. ಮಾಲಾಶ್ರೀ… ಯಾವ ಸಿನಿಮಾಕ್ಕೆ ರೆಡಿಯಾಗ್ತಿದ್ದಾರೆ ಚೆಲುವೆ?
Recommended image3
ಕೇದಾರನಾಥದಲ್ಲಿ ಕನ್ನಡದ ಬಾವುಟ ಹಾರಿಸಿದ ನಟ ಯುವ ರಾಜಕುಮಾರ್
Related Stories
Recommended image1
Upendra Movie: ಆಗ ಇದೊಂದು ಹುಚ್ಚು ಸಿನಿಮಾ ಅಂದ್ಕೊಂಡಿದ್ವಿ: ಆದ್ರೆ ಇದರೊಳಗಿನ ಲೈಫ್ ಲೆಸನ್ ಗೊತ್ತಾ?
Recommended image2
Toxic Movie BTS: ಟಾಕ್ಸಿಕ್ ಚಿತ್ರದ ಮೇಕಿಂಗ್ ವಿಡಿಯೋ ವೈರಲ್​- ಬಯಲಾಯ್ತು ತೆರೆಮರೆಯ ಸತ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved