ಮದ್ವೆ ಆದ್ಮೇಲೆ 'ಲವ್ ಬರ್ಡ್' ಆದ ಕೃಷ್ಣ- ಮಿಲನಾ; ವಿಡಿಯೋ ವೈರಲ್
ಲವ್ ಮಾಕ್ಟೇಲ್ ಸಿನಿಮಾ ಆದ್ಮೇಲೆ ಮತ್ತೆ ಒಂದಾದ ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್. ಟೀಸರ್ ಬಿಡುಗಡೆ ಕಾರ್ಯಕ್ರಮ.....
ಫೋಟೋಕೃಪೆ: ಕನ್ನಡ ಪ್ರಭ ಮನು
ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಅಭಿನಯದ ‘ಲವ್ ಬರ್ಡ್ಸ್’ ಚಿತ್ರದ ಟೀಸರ್ ಅನ್ನು ವಿಜಯ್ ರಾಘವೇಂದ್ರ ಮತ್ತು ಅಜಯ್ ರಾವ್ ಬಿಡುಗಡೆ ಮಾಡಿದ್ದಾರೆ.
ಪಿ.ಸಿ. ಶೇಖರ್ ನಿರ್ದೇಶನದ ಈ ಚಿತ್ರವನ್ನು ಚಂದ್ರು ಕಡ್ಡಿಪುಡಿ ನಿರ್ಮಿಸಿದ್ದಾರೆ.ಆಧುನಿಕ ದಂಪತಿಯ ಕತೆಯುಳ್ಳ ಸಿನಿಮಾ ಇದು. ನಿರ್ದೇಶಕ ಪಿ.ಸಿ. ಶೇಖರ್, ‘ಇದು ಎಲ್ಲರ ಮನೆಯ ಕಥೆ. 10 ವರ್ಷದ ನಂತರ ಲವ್ ಜಾನರ್ ಸಿನಿಮಾ ಮಾಡಿದ್ದೇನೆ’ ಎಂದರು.
ನಿರ್ಮಾಪಕ ಚಂದ್ರು ಕಡ್ಡಿಪುಡಿ, ‘ಅಪ್ಪು ಸರ್ ಲಾಸ್ಟ್ ಕ್ಲಾಪ್ ಮಾಡಿದ ಸಿನೆಮಾ ಇದು’ ಎಂದರು. ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ಹೊಸ ಪರಿಚಯ ಗೌರವ್ ಇದ್ದರು. ವಿಜಯ್ ರಾಘವೇಂದ್ರ, ಅಜಯ್ ರಾವ್ ಶುಭ ಹರಸಿದರು.
'ನಾನು ಮತ್ತು ಮಿಲನ ನಾಗರಾಜ್ ಲವ್ ಮಾಕ್ಟೇಲ್ ಸಿನಿಮಾ ನಂತರ ಮಾಡಿರುವ ಚಿತ್ರವಿದು. ಅದರಲ್ಲಿ ಆದಿ ಮತ್ತು ನಿಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ವೀ. ಇದರಲ್ಲಿ ದೀಪಕ್ ಮತ್ತು ಪೂಜಾ ಪಾತ್ರದಲ್ಲಿ ಅಭಿನಯಿಸುತ್ತಿದ್ದೇವೆ' ಎಂದು ಕೃಷ್ಣ ಪಾತ್ರ ಪರಿಚಯ ಮಾಡಿಕೊಟ್ಟರು.
'ಚಿತ್ರದಲ್ಲಿ ಅಕ್ಷನ್ ಸನ್ನಿವೇಶಗಳು ಚೆನ್ನಾಗಿದೆ. ನಿರ್ದೇಶಕ ಪಿ.ಸಿ ಶೇಖರ್ ಚಿತ್ರವನ್ನು ಚೆನ್ನಾಗಿ ಮಾಡಿದ್ದಾರೆ ಹಾಗೂ ನಿರ್ಮಾಪಕ ಚಂದ್ರು ಅವರಿಗೆ ಧನ್ಯವಾದ' ಎಂದಿದ್ದಾರೆ.
'ನಿರ್ಮಾಪಕ ಚಂದ್ರು ತುಂಬಾ ಫಾಸ್ಟ್. ನಾನಿದ್ದ ಜಾಗಕ್ಕೆ ಬಂದು ಈ ಚಿತ್ರದ ಕುರಿತು ಹೇಳಿದ್ದರು. ಕಥೆ ಇಷ್ಟವಾಯಿತ್ತು. ಶೇಖರ್ ಸುಂದರವಾದ ಕಥೆ ಬರೆದಿದ್ದಾರೆ' ಎಂದು ಮಿಲನಾ ಹೇಳಿದ್ದಾರೆ.
'ಲವ್ ಬರ್ಡ್ಸ್ ಚಿತ್ರದಲ್ಲಿ ಲವ್ ಅಷ್ಟೇ ಅಲ್ಲ ಬೇರೆ ವಿಷಯಗಳು ಇದೆ. ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹ ನೀಡಿ' ಎಂದು ಮಿಲನ ನಾಗರಾಜ್ ಮಾತನಾಡಿದ್ದಾರೆ.